More

    ಸೋಂಕು ಮುಕ್ತರ ಸಂಖ್ಯೆ ಏರಿಗತಿ

    ಮಂಗಳೂರು: ದ.ಕ ಜಿಲ್ಲೆಯಲ್ಲಿ ಮತ್ತೆ ಕರೊನಾ ಸೋಂಕಿನಿಂದ ಮುಕ್ತರಾದವರ ಸಂಖ್ಯೆ ಹೆಚ್ಚಿದೆ.
    ಒಂದೇ ದಿನ 367 ಮಂದಿ ಕರೊನಾ ಮುಕ್ತರಾಗಿದ್ದಾರೆ. ಅದರಲ್ಲಿ ಮನೆಯಲ್ಲೇ ಐಸೋಲೇಶನ್‌ನಲ್ಲಿದ್ದ 294, ಆಸ್ಪತ್ರೆಯಲ್ಲಿದ್ದ 71 ಮಂದಿ ಹಾಗೂ ಕೋವಿಡ್ ಕೇರ್ ಕೇಂದ್ರಗಳಲ್ಲಿದ್ದ ಇಬ್ಬರು ಸೇರಿದ್ದಾರೆ. ಇದರಿಂದ ಒಟ್ಟು ಡಿಸ್‌ಚಾರ್ಜ್ ಆದವರ ಸಂಖ್ಯೆ 10 ಸಾವಿರ (9,789) ಸಮೀಪಿಸುತ್ತಿದೆ.

    ಸೋಮವಾರ 12 ಸಾವು ಸೇರಿದಂತೆ 270 ಕರೊನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ. ಇದರಲ್ಲಿ 113 ಮಂದಿ ಲಕ್ಷಣಗಳಿದ್ದವರು, 157 ಲಕ್ಷಣ ರಹಿತರು. ಒಟ್ಟು ಪಾಸಿಟಿವ್‌ಗಳಲ್ಲಿ 117 ಮಂದಿ ಮಂಗಳೂರು ಹಾಗೂ 90 ಮಂದಿ ಬಂಟ್ವಾಳದವರು. ಉಳಿದಂತೆ ಪುತ್ತೂರಿನ 24, ಸುಳ್ಯದ 14, ಬೆಳ್ತಂಗಡಿಯ 14 ಇತರ ಜಿಲ್ಲೆಯ 11 ಮಂದಿಗೆ ಸೋಂಕು ತಗಲಿದೆ. ಜಿಲ್ಲೆಯಲ್ಲಿ ಒಟ್ಟು ಪಾಸಿಟಿವ್ ಪ್ರಕರಣಗಳ ಸಂಖ್ಯೆ 12,713ಕ್ಕೇರಿದ್ದು ಮೃತರ ಸಂಖ್ಯೆ 367ಕ್ಕೇರಿದೆ. ಸಕ್ರಿಯ ಪ್ರಕರಣಗಳು 2556 ಆಗಿವೆ.

    ಕಾಸರಗೋಡಲ್ಲಿ 103 ಮಂದಿಗೆ ಸೋಂಕು: ಜಿಲ್ಲೆಯ 103 ಮಂದಿ ಸೇರಿ ಕೇರಳದಲ್ಲಿ ಸೋಮವಾರ 1,530 ಮಂದಿಗೆ ಕೋವಿಡ್-19 ರೋಗ ತಗುಲಿದೆ. ಕೋವಿಡ್ ಬಾಧಿಸಿ ಏಳು ಮಂದಿ ಮೃತಪಟ್ಟಿದ್ದು, ಈ ಮೂಲಕ ರಾಜ್ಯದಲ್ಲಿ ಕೋವಿಡ್ ಬಾಧಿಸಿ ಮೃತಪಟ್ಟವರ ಸಂಖ್ಯೆ 294ಕ್ಕೇರಿದೆ.

    83 ಮಂದಿಗೆ ದೃಢ
    ಉಡುಪಿ: ಜಿಲ್ಲೆಯಲ್ಲಿ ಸೋಮವಾರ 83 ಮಂದಿಗೆ ಕೋವಿಡ್ ಪಾಸಿಟಿವ್ ವರದಿಯಾಗಿದೆ. ಒಟ್ಟು ಸೋಂಕಿತರ ಸಂಖ್ಯೆ 11,589ಕ್ಕೆೆ ಏರಿಕೆಯಾಗಿದೆ. 303 ಮಂದಿ ಸೋಂಕಿನಿಂದ ಗುಣವಾಗಿ ಡಿಸ್‌ಚಾರ್ಜ್ ಆಗಿದ್ದಾರೆ. 235 ಮಂದಿಯ ಗಂಟಲ ದ್ರವ ಮಾದರಿಯನ್ನು ಕೋವಿಡ್ ಪರೀಕ್ಷೆಗಾಗಿ ಸಂಗ್ರಹಿಸಲಾಗಿದೆ. ಇನ್ನೂ 172 ಮಂದಿಯ ವರದಿ ಬರಲು ಬಾಕಿ ಇದೆ. 2398 ಸಕ್ರಿಯ ಪ್ರಕರಣಗಳಿವೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್, ಪರೀಕ್ಷೆಗೆ 2,500 ರೂ.ನಿಗದಿ
    ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ಪರೀಕ್ಷೆಗೆ ಸರ್ಕಾರ ದರ ನಿಗದಿಪಡಿಸಿದೆ. ಸರ್ಕಾರಿ ಆಸ್ಪತ್ರೆಗಳು ಖಾಸಗಿ ಆಸ್ಪತ್ರೆಗಳ ಪ್ರಯೋಗಾಲಯಕ್ಕೆ ಆರ್‌ಟಿ-ಪಿಸಿಆರ್ ಪರೀಕ್ಷೆಗಾಗಿ ಮಾದರಿ ಕಳುಹಿಸಿದರೆ, ದರ 1,500 ರೂ. ನಿಗದಿ ಮಾಡಲಾಗಿದೆ. ಇದರಲ್ಲಿ ಸ್ಕ್ರೀನಿಂಗ್, ದೃಢೀಕರಣ ಪರೀಕ್ಷೆ ಜತೆಗೆ ಪಿಪಿಇ ಕಿಟ್ ಮೊತ್ತವೂ ಸೇರಿದೆ. ಖಾಸಗಿ ಆಸ್ಪತ್ರೆಗಳ ಲ್ಯಾಬ್‌ಗಳಲ್ಲಿ ಕೋವಿಡ್ ಪರೀಕ್ಷೆಗೆ ತಗಲುವ ಮೊತ್ತ ಪಿಪಿಇ ಕಿಟ್ ಸಹಿತ 2,500 ರೂ. ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಕಟಣೆ ತಿಳಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts