More

    ಬೇರೆಯವರೊಂದಿಗಿನ ಹರಟೆ ಈ ರಾಶಿಯ ಸಂಗಾತಿಯ ಮುನಿಸಿಗೆ ಕಾರಣವಾಗಲಿದೆ

    ಮೇಷ: ಯಾವ ಕೆಲಸವೂ ವೇಗವಾಗಿ ನಡೆಯದೆ ಕಚೇರಿಯಲ್ಲಿ ಬೇಸರದ ನೀರಸ ವಾತಾವರಣ ಉಂಟಾಗಲಿದೆ. ಶುಭಸಂಖ್ಯೆ: 2

    ವೃಷಭ: ಅನೇಕರಿಗೆ ಕೆಲಸಕಾರ್ಯಗಳಲ್ಲಿ ಉನ್ನತಿ ದೊರೆಯುವುದು. ಬಾಳಸಂಗಾತಿಯ ಸಲಹೆಗಳನ್ನು ಸ್ವೀಕರಿಸಿ. ಶುಭಸಂಖ್ಯೆ: 4

    ಮಿಥುನ: ಸಮಾಜದಲ್ಲಿ ಗೌರವ ಆದರಗಳು ದೊರೆಯುವವು. ನೂತನ ವಾಹನ ಖರೀದಿ ಬಗ್ಗೆ ಚಿಂತೆ ಮಾಡುವಿರಿ. ಶುಭಸಂಖ್ಯೆ: 6

    ಕಟಕ: ಮನೆಯವರ ಅಸಹಕಾರವನ್ನು ಹಚ್ಚಿಕೊಳ್ಳದೆ ಕಾರ್ಯಪ್ರವೃತ್ತರಾದಲ್ಲಿ ಬೇಗ ಯಶಸ್ಸನ್ನು ಹೊಂದುವಿರಿ. ಶುಭಸಂಖ್ಯೆ: 7

    ಸಿಂಹ: ನಿಮ್ಮ ಸುತ್ತ ಒತ್ತಡ ತರುವ ವಿರೋಧಿಗಳು ಇರುತ್ತಾರೆ. ಆದರೆ ಅವರ ಆಟ ನಡೆಯದೆ ಹಿಮ್ಮೆಟ್ಟುವರು. ಶುಭಸಂಖ್ಯೆ: 3

    ಕನ್ಯಾ: ಕೆಲಸದ ರೂಪರೇಷೆಗಳನ್ನು ತಿಳಿದು ಕಾರ್ಯಪ್ರವೃತ್ತರಾಗಿ. ಹಣ ಬರುತ್ತಿದ್ದ ಹಾಗೆಯೇ ಖರ್ಚಾಗುವುದು. ಶುಭಸಂಖ್ಯೆ: 1

    ಇದನ್ನೂ ಓದಿ: ವಾಸನೆಯಿಂದಲೂ ಕಂಡುಹಿಡಿಯಬಹುದು ಕರೊನಾ: ಅದು ಹೇಗೆ?

    ತುಲಾ: ಬೇರೆಯವರೊಂದಿಗಿನ ಹರಟೆಯ ಸಂಗಾತಿಯ ಮುನಿಸಿಗೆ ಕಾರಣವಾಗುವುದು. ಜಾಗ್ರತೆ ಅಗತ್ಯ. ಶುಭಸಂಖ್ಯೆ: 4

    ವೃಶ್ಚಿಕ: ಮಕ್ಕಳ ವರ್ತನೆಯಿಂದ ಸಹನೆ ಕಳೆದುಕೊಳ್ಳಬೇಡಿ. ಹತ್ತಿರದ ಬಂಧುಗಳೊಡನೆ ಪ್ರೀತಿ ವಿಶ್ವಾಸದಿಂದ ಇರಿ. ಶುಭಸಂಖ್ಯೆ: 1

    ಧನಸ್ಸು: ಹತ್ತಿರದ ಬಹು ಮುಖ್ಯ ಪ್ರವಾಸ ಕೈಗೊಳ್ಳುವಿರಿ. ನಿಮ್ಮ ಇಚ್ಛಿತ ಕಾರ್ಯಗಳಿಗೆ ಹೆಚ್ಚು ಹಣ ಖರ್ಚಾಗುವುದು. ಶುಭಸಂಖ್ಯೆ: 9

    ಮಕರ: ನಿಮ್ಮ ಜೊತೆಗೆ ಬರುವ ಹಲವು ಸ್ನೇಹಿತರು ಹಣ ಕೊಡುವ ಮೂಲಕ ನಿಮ್ಮ ಕಾರ್ಯಗಳಿಗೆ ನೆರವಾಗುವರು. ಶುಭಸಂಖ್ಯೆ: 8

    ಕುಂಭ: ಗೌಪ್ಯ ಕೆಲಸದಲ್ಲಿ ನಿಮ್ಮ ಪಾತ್ರ ಪ್ರಮುಖ. ಈ ಬಗ್ಗೆ ಉನ್ನತ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ. ಶುಭಸಂಖ್ಯೆ: 2

    ಮೀನ: ಪ್ರವಾಸದ ಬಗ್ಗೆ ಮನೆಯವರೊಂದಿಗೆ ಮುಕ್ತವಾಗಿ ರ್ಚಚಿಸಿ. ಕೆಲವರಿಗೆ ಸ್ಥಿರಾಸ್ಥಿ ಖರೀದಿಸುವ ಸಾಧ್ಯತೆ ಇದೆ. ಶುಭಸಂಖ್ಯೆ: 5

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts