More

    ಇಂದಿರಾಗಾಂಧಿ ಸಾವಿನ ಸುದ್ದಿ ಕೇಳಿದಾಗ ಆಗಿದ್ದ ನೋವಿಗಿಂತ… ಹೀಗೆಂದ ಡಿಕೆಶಿ

    ತುಮಕೂರು: ರಾಜ್ಯದ ಹಳ್ಳಿಯ ಹೆಣ್ಣು ಮಕ್ಕಳ ಕುರಿತು ಕುಮಾರಸ್ವಾಮಿ ಆಡಿರುವ ಮಾತು ಇಂದಿರಾಗಾಂಧಿ ಅವರ ಸಾವಿನ ಸುದ್ದಿ ಕೇಳಿದಾಗ ಆಗಿದ್ದ ನೋವಿನಷ್ಟೇ ನೋವು ತಂದಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಬೇಸರಿಸಿದರು.

    ತಿಪಟೂರು ತಾಲೂಕು ಕೆ.ಬಿ.ಕ್ರಾಸ್ ಬಳಿ ಕಾಂಗ್ರೆಸ್ ಅಭ್ಯರ್ಥಿ ಎಸ್.ಪಿ.ಮುದ್ದಹನುಮೇಗೌಡ ಪರ ಲೋಕ ಚುನಾವಣಾ ಪ್ರಚಾರ ಹಿನ್ನೆಲೆ ಭಾನುವಾರ ಆಯೋಜಿಸಿದ್ದ ಪ್ರಜಾಧ್ವನಿ-2.0 ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, ರಾಜ್ಯ ಸರ್ಕಾರದ ಗ್ಯಾರಂಟಿಗಳಿಂದ ಹಳ್ಳಿಯ ಹೆಣ್ಣುಮಕ್ಕಳು ದಾರಿ ತಪ್ಪಿದ್ದಾರೆಂಬ ಕುಮಾರಸ್ವಾಮಿ ಹೇಳಿಕೆಗೆ ತಿರುಗೇಟು ಕೊಟ್ಟರು.

    ದೇಶದ ಪ್ರಧಾನಿಯಾಗಿದ್ದವರ ಮಗ, ಎರಡು ಸಲ ಸಿಎಂ ಆಗಿದ್ದ ಕುಮಾರಸ್ವಾಮಿ ಆಡಿದ ಮಾತು ತೀವ್ರ ನೋವು ತಂದಿದೆ. ಈ ಹಿಂದೆ ನನ್ನ ತಾಯಿಯ ಬಗ್ಗೆಯೂ ಮಾತನಾಡಿ ಕ್ಷಮೆ ಕೇಳಿದ್ದರು. ರಾಜ್ಯದೆಲ್ಲೆಡೆ ಹೆಣ್ಣು ಮಕ್ಕಳು ಹೋರಾಟಕ್ಕೆ ಮುಂದಾಗಿದ್ದಾರೆ. ಪ್ರಧಾನಿ ನರೇಂದ್ರಮೋದಿ ಅವರಿಗೆ ಕೇಳುತ್ತೇನೆ, ಹೆಣ್ಣುಮಕ್ಕಳ ಜೀವನಕ್ಕಾಗಿ ನೀಡಿದ ಯೋಜನೆಯಿಂದ ತಾಯಂದಿರು ದಾರಿತಪ್ಪುತ್ತಾರೆಯೇ ಎಂದು ಪ್ರಶ್ನಿಸಿದರು.

    ತಾಯಂದಿರು ದೇವಸ್ಥಾನಕ್ಕೆ ಹೋಗಿದ್ದರೆ ದಾರಿ ತಪ್ಪುತ್ತಿದ್ದಾರೆ ಎನ್ನುವ ಕುಮಾರಣ್ಣ ನೀನು ಒಬ್ಬರು ತಾಯಿಯ ಹೊಟ್ಟೆಯಲ್ಲಿ ಹುಟ್ಟಿರುವುದನ್ನು ಮರೆತಿದ್ದೀರಾ ಎಂದು ಜಾಡಿಸಿದರು.

    ಈ ಬಾರಿ ಸತ್ಯ ಹಾಗೂ ಸುಳ್ಳಿನ ನಡುವಿನ ಯುದ್ಧವಾಗಿದೆ. ಈ ಹಿಂದಿನ ಚುನಾವಣೆಯಲ್ಲಿ ನೀಡಿದ್ದ ಭರವಸೆ ಈಡೇರೀದೆಯೇ? ಖಾತೆಗೆ 15ಲಕ್ಷ ಬಂತಾ? ರೈತರ ಆದಾಯ ಹೆಚ್ಚಾಯಿತಾ? ಕರೊನಾದಲ್ಲಿ ಸಹಾಯವಾಯ್ತ ಎಂದು ಶಿವಕುಮಾರ್ ಭಾಷಣದುದ್ದಕ್ಕೂ ಮೋದಿ ನೇತೃತ್ವದ ಬಿಜೆಪಿ ಸರ್ಕಾರದ ವಿರುದ್ಧ ಹರಿಹಾಯ್ದರು.

    ಗ್ಯಾರಂಟಿ ಯಶಸ್ವಿಯ ಹೊಟ್ಟೆಯುರಿಗೆ ತಾಯಂದಿರು, ಸಹೋದರಿಯರ ಬಗ್ಗೆ ಕುಮಾರಸ್ವಾಮಿ ಆಡಿರುವ ಮಾತು ತಾಯಂದಿರಿಗೆ ಮಾಡಿರುವ ಅಪಮಾನ. ಕಾಂಗ್ರೆಸ್ ಬಡವರ ಪರವಾಗಿರುವ ಪಕ್ಷ.
    ಡಾ.ಜಿ.ಪರಮೇಶ್ವರ
    ಗೃಹ ಸಚಿವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts