More

    ಕಾಗೆಗಳ ತಂಟೆಗೆ ಹೋಗಬೇಡಿ..ಅದನ್ನು ಹಿಡಿದು ಹಿಂಸಿಸುವ ಮುನ್ನ ಈ ಸ್ಟೋರಿ ಓದಿ…

    ಅಲ್ಲೆಲ್ಲೋ ಕುಳಿತ ಕಾಗೆಗಳಿಗೆ ಕಲ್ಲು ಹೊಡೆಯುವುದು, ಅದನ್ನು ಹಿಡಿದು ಹಿಂಸಿಸುವ ಮೊದಲು ಈ ಸ್ಟೋರಿಯನ್ನು ಓದಿ. ಕಾಗೆಗಳ ವಿಚಾರದಲ್ಲಿ ಸ್ವಲ್ಪ ಹುಷಾರಾಗಿ ಇರುವುದು ತುಂಬ ಒಳ್ಳೆಯದು.

    ನಮ್ಮ ಹಿರಿಯರು ನಮಗೆ ಕಾಗೆಗಳೆಂದರೆ ಅಪಶಕುನ ಎಂಬುದನ್ನು ಹೇಳಿಕೊಟ್ಟಿದ್ದಾರೆ. ಎಲ್ಲಾದರೂ ನಮ್ಮ ಬಳಿ ಹಾರಿಬಿಟ್ಟರೆ ಸಾಕು ಹೌಹಾರಿಬಿಡುತ್ತೇವೆ. ಅದರಲ್ಲೂ ಮೈಗೆ ತಾಗಿಬಿಟ್ಟರೆ ದೇವಸ್ಥಾನಕ್ಕೆ ಹೋಗಿ ಪೂಜೆ ಮಾಡಿಸುವ ಪದ್ಧತಿಯೂ ಇದೆ.
    ಅದೆಲ್ಲ ಬಿಡಿ..ಆದರೆ ಕಾಗೆಗಳ ವಿಚಾರದಲ್ಲಿ ಯಾಕೆ ಎಚ್ಚರಿಕೆಯಿಂದ ಇರಬೇಕು ಎಂದರೆ..ಅವು ತಮಗೆ ಹೊಡೆದ ಅಥವಾ ಇನ್ಯಾವುದೇ ರೀತಿಯಲ್ಲಿ ಹಾನಿ ಮಾಡಿದ ಮನುಷ್ಯರನ್ನು ಅಷ್ಟು ಬೇಗ ಮರೆಯುವುದಿಲ್ಲವಂತೆ. ಸುಮಾರು ಒಂದು ವರ್ಷಕ್ಕೂ ಹೆಚ್ಚು ಕಾಲ ಮನುಷ್ಯರ ಮುಖದ ಗುರುತನ್ನು ನೆನಪಿಟ್ಟುಕೊಳ್ಳುವ ಶಕ್ತಿ ಅವಕ್ಕೆ ಇದೆಯಂತೆ. ಅಷ್ಟೇ ಅಲ್ಲ, ತಮಗೆ ಹಿಂಸೆ ಕೊಟ್ಟವರ ಬಗ್ಗೆ ಬಳಗಕ್ಕೆಲ್ಲ ತಿಳಿಸುತ್ತವಂತೆ…!

    ವಾಷಿಂಗ್ಟನ್​ನಲ್ಲಿರುವ ಸಿಯಾಟಲ್​ನಲ್ಲಿ 2011ರಲ್ಲಿ ನಡೆದ ಅಧ್ಯಯನವೊಂದು ಈ ಸತ್ಯವನ್ನು ಬೆಳಕಿಗೆ ತಂದಿದೆ. ಸಂಶೋಧನೆಗಾಗಿ ಒಂದಷ್ಟು ಕಾಗೆಗಳನ್ನು ಹಿಡಿಯಲಾಗಿತ್ತು. ಅವು ತಮ್ಮನ್ನು ಸೆರೆಹಿಡಿದವನತ್ತ ತುಂಬ ಆಕ್ರಮಣಕಾರಿಯಾಗಿ ವರ್ತಿಸುತ್ತಿದ್ದವು. ಆತನೆಡೆಗೆ ರಭಸವಾಗಿ ಹಾರಿ ಪ್ರತಿರೋಧ ಒಡ್ಡುತ್ತಿದ್ದವು. ಇದನ್ನೂ ಓದಿ: ಈ ಫೋಟೋದಲ್ಲಿರುವುದು ಫ್ರೈಡ್​ ಚಿಕನ್​ ಪೀಸ್​ ಅಲ್ಲ…ಇದೊಂದು ವಿಸ್ಮಯ..!

    ಒಟ್ಟು 12 ಗಂಡು ಕಾಗೆಗಳನ್ನು ಸಂಶೋಧನೆಗೆ ಒಳಪಡಿಸಲಾಗಿತ್ತು. ಆ ಕಾಗೆಗಳ ಸೆರೆ ಹಿಡಿದವರ ಮುಖವಾಡವನ್ನು ಧರಿಸಿಕೊಂಡು ಕಾಗೆಗಳಿಗೆ ಸಂಶೋಧಕರು ಆಹಾರ ಕೊಡುತ್ತಿದ್ದರು. ಪ್ರತಿ ಕಾಗೆಯೂ ತನ್ನನ್ನು ಸೆರೆ ಹಿಡಿದವನ ಮುಖ ಕಂಡ ತಕ್ಷಣ ವಿಭಿನ್ನವಾಗಿ ವರ್ತಿಸುತ್ತಿತ್ತು. ಆತನ ಮೇಲೆ ಆಕ್ರಮಣ ಮಾಡಲು ಮುಂದಾಗುತ್ತಿತ್ತು ಎಂದು ಸಂಶೋಧಕರು ತಿಳಿಸಿದ್ದಾರೆ. ಸುಮಾರು 1 ವರ್ಷಕ್ಕೂ ಹೆಚ್ಚು ಕಾಲ ನಿರಂತರವಾಗಿ ಅಧ್ಯಯನ ನಡೆಸಿದ ಬಳಿಕ ತಜ್ಞರು ಈ ವಿಚಾರವನ್ನು ತಿಳಿಸಿದ್ದರು.

    ಆದರೆ ಆಗ ಅದು ಅಷ್ಟೊಂದು ಚರ್ಚೆಗೆ ಬಂದಿರಲಿಲ್ಲ. ಆದರೆ ಈಗ ಆ ಸಂಶೋಧನಾ ವರದಿ ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿ, ನೆಟ್ಟಿಗರ ಗಮನ ಸೆಳೆದಿದೆ. (ಏಜೆನ್ಸೀಸ್)

    ಕೋವಿಡ್​ಗೆ ಭಾರತದಲ್ಲಿ ಸಿದ್ಧವಾಗಿದೆ ಕೊವಾಕ್ಸಿನ್​ ಚುಚ್ಚುಮದ್ದು, ನಾಳೆಯಿಂದ ಮಾನವರ ಮೇಲೆ ಪ್ರಯೋಗ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts