ದಾವಣಗೆರೆ: ಕೊಲೆಗಾರರಿಗೆ ಸಿಂಹಸ್ವಪ್ನವಾಗಿದ್ದ ಕ್ರೈಮ್ ಡಿಟೆಕ್ಟಿವ್ ನಾಯಿ ವಿಶ್ವ ಶ್ವಾನ ದಿನದಿಂದೇ ಸಾವಿಗೀಡಾದ ಪ್ರಕರಣವೊಂದು ನಡೆದಿದೆ. ತುಂಗಾ ಎಂಬ ಹೆಸರಿನ ಈ ಕ್ರೈಮ್ ಡಿಟೆಕ್ಟಿವ್ ಶ್ವಾನ ಕೊಲೆ ಪ್ರಕರಣಗಳನ್ನು ಭೇದಿಸುವಲ್ಲಿ ಖ್ಯಾತಿ ಪಡೆದಿದೆ.
ಎರಡು ದಿನಗಳಿಂದ ಡೆಂಘೆ ಜ್ವರದಿಂದ ಬಳಲುತ್ತಿದ್ದ ತುಂಗಾ ಇಂದು ಅನಾರೋಗ್ಯ ಉಲ್ಬಣಿಸಿದ್ದರಿಂದ ಆಸ್ಪತ್ರೆಯಲ್ಲಿ ಸಾವಿಗೀಡಾಗಿದೆ. ಈ ಶ್ವಾನದ ಅಗಲಿಕೆಯಿಂದ ಪೊಲೀಸ್ ಇಲಾಖೆಗೆ ಭಾರಿ ನಷ್ಟ ಉಂಟಾದಂತಾಗಿದೆ.
ತುಂಗಾ 70 ಕೊಲೆ, 30 ಡಕಾಯಿತಿ ಪ್ರಕರಣಗಳನ್ನು ಭೇದಿಸುವಲ್ಲಿ ಮಹತ್ವದ ಪಾತ್ರ ವಹಿಸಿತ್ತು. ಪರಿಣಾಮವಾಗಿ ಕೊಲೆ ಕೇಸ್ನಲ್ಲಿ ಇಬ್ಬರಿಗೆ ಗಲ್ಲು, 4 ಜನರಿಗೆ ಜೀವಾವಧಿ ಶಿಕ್ಷೆ ಆಗಿತ್ತು. ಸೂಳೆಕೆರೆ ಶೂಟೌಟ್ ಪ್ರಕರಣದಲ್ಲಿ 11 ಕಿಲೋಮೀಟರ್ವರೆಗೂ ಓಡಿ ಆರೋಪಿಯನ್ನು ಪತ್ತೆ ಮಾಡಿ ತುಂಗಾ ಸಾಹಸ ಮೆರೆದಿತ್ತು.
ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ ಪಾರಾದ ಮಾಜಿ ಉಪ ಮುಖ್ಯಮಂತ್ರಿ!
ರಾತ್ರಿ ಮನೆಯಲ್ಲಿ ಮಲಗಿದ್ದ ಯುವತಿ ಬೆಳಗ್ಗೆ ನಾಪತ್ತೆ!