More

    ನಮ್ಮ ಅಸ್ತಿತ್ವಕ್ಕಾಗಿಯೇ ಹೋರಾಟ ನಡೆಸಬೇಕಾದ ಪರಿಸ್ಥಿತಿ ನಿರ್ಮಾಣ : ವಾಟಾಳ್ ನಾಗರಾಜು ಬೇಸರ

    ಬೆಂಗಳೂರು: ರಾಜ್ಯದಲ್ಲಿ ನೆಲಸಿರುವ ಪರಭಾಷಿಕರು ತೊಲಗಬೇಕು ಎಂದು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜು ಒತ್ತಾಯಿಸಿದ್ದಾರೆ.

    ಕರ್ನಾಟಕ ರಾಜ್ಯೋತ್ಸವ ಸಮಿತಿ ಬುಧವಾರ ಮೈಸೂರು ಬ್ಯಾಂಕ್ ವೃತ್ತದಲ್ಲಿ ಆಯೋಜಿಸಲಾಗಿದ್ದ ‘ಕನ್ನಡ ರಾಜ್ಯೋತ್ಸವ’ ಹಾಗೂ ‘ಅಣ್ಣಮ್ಮದೇವಿ’ ಮೆರವಣಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

    ಕನ್ನಡಿಗರು ತುಂಬ ನೋವಿನಲ್ಲಿ ಇದ್ದಾರೆ. ನಮ್ಮ ಅಸ್ತಿತ್ವಕ್ಕಾಗಿ ಹೋರಾಟ ನಡೆಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇದಕ್ಕಾಗಿ ಕನ್ನಡಿಗರು ಬೀದಿಗೆ ಇಳಿಯಬೇಕಿದೆ.ನನ್ನ ಉಸಿರು ಇರುವವರೆಗೂ ಕನ್ನಡಕ್ಕಾಗಿ ಹೋರಾಟ ಮಾಡುತ್ತೇನೆ. ಅನ್ನಭಾಷಿಕರ ಚಿತ್ರಗಳ ಪ್ರಸಾರವನ್ನು ಬಂದ್ ಮಾಡಬೇಕು. ಕನ್ನಡ ಶಾಲೆಗಳು ಮುಚ್ಚದಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು.ನ್ಯಾಯಾಲಯದಲ್ಲಿ ಕನ್ನಡಕ್ಕೆ ಆದ್ಯತೆ ನೀಡಬೇಕು. 1962ರಲ್ಲಿ ಚಿಕ್ಕಪೇಟೆ ಕ್ಷೇತ್ರದಿಂದ ನಾನು ಶಾಸಕನಾಗಿ ಆಯ್ಕೆನಾದೆ. ಆಗ ನನಗೆ 25 ವರ್ಷ ವಯಸ್ಸಾಗಿತ್ತು. ಜಾತಿ ಭೇಧವಿಲ್ಲದೆ ಜನರು ನನ್ನನ್ನು ಗೆಲ್ಲಿಸಿದರು. ಅವತ್ತು ಎಲ್ಲಿ ನೋಡಿದರೂ ಕನ್ನಡಿಗರು ತುಂಬಿದ್ದರು. ಈಗ ಚಿಕ್ಕಪೇಟೆ ಮಾರ್ವಡಿಪೇಟೆ ಆಗಿದೆ.ರಾಜಧಾನಿಯಲ್ಲಿ ಪರಭಾಷಿಕರು ತುಂಬಿದ್ದಾರೆ. ಇದರ ಬಗ್ಗೆ ಕನ್ನಡಿಗರು ಜಾಗೃತರಾಗಬೇಕೆಂದು ವಾಟಾಳ್ ನಾಗರಾಜು ತಿಳಿಸಿದರು.

    ಇದನ್ನೂ ಓದಿ: ರೇಷನ್ ಎತ್ತುವಳಿ ಸ್ಥಗಿತಗೊಳಿಸಿದ ನ್ಯಾಯಬೆಲೆ ಅಂಗಡಿ ವರ್ತಕರು: ನ.7ರಂದು ಬೃಹತ್ ಪ್ರತಿಭಟನೆಗೆ ಕರೆ

    62 ವರ್ಷದಿಂದ ಮೈಸೂರು ವೃತ್ತದಲ್ಲಿ ರಾಜ್ಯೋತ್ಸವ ಆಚರಿಸಿಕೊಂಡು ಬರಲಾಗುತ್ತಿದೆ. ರಾಜ್ಯದ ಆದರ್ಶ ಸಿಎಂಯಾಗಿದ್ದ ನಿಜಲಿಂಗಪ್ಪ ಮತ್ತು ಕೆಂಗಲ್ ಹನುಮಂತಯ್ಯ ಅವರು ಸಮಾರಂಭಕ್ಕೆ ಚಾಲನೆ ನೀಡಿದವರು. ಅಲ್ಲಿಂದ ಇಲ್ಲಿಯವರೆಗೆ ರಾಜ್ಯೋತ್ಸವ ಆಚರಣೆ ಮಾಡುತ್ತಿದ್ದೇವೆ. 61ವರ್ಷದಿಂದ ಕನ್ನಡ ಚಳವಳಿ ಹಾಗೂ 62 ವರ್ಷಗಳಿಂದ ಅಣ್ಣಮ್ಮದೇವಿಯ ಮೆರವಣಿಗೆ ನಡೆಸಿಕೊಂಡು ಬರಲಾಗುತ್ತಿದೆ ಎಂದು ವಾಟಾಳ್ ನಾಗರಾಜು ವಿವರಿಸಿದರು. ಗಾಯಕರು ಕನ್ನಡ ಗೀತೆಗಳನ್ನು ಹಾಡುವ ಮೂಲಕ ಸಭಿಕರನ್ನು ರಂಜಿಸಿರುವ ಕನ್ನಡಪರ ಹೋರಾಟಗಾರರು ಸೇರಿ ಹಲವರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts