More

    ಉದ್ಯೋಗಾಕಾಂಕ್ಷಿಗಳಿಗಿಂತ ಉದ್ಯೋಗ ಸೃಷ್ಟಿಸಿ

    ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ಯುವ ಜನತೆ ಎಂಬಿಎ ಪದವಿಯ ಬಳಿಕ ಉದ್ಯೋಗ ಅರಸಿ ಹೋಗುವ ಬದಲು ಉದ್ಯೋಗ ಸೃಷ್ಟಿಕರ್ತರಾಗಲು ಉತ್ಸಾಹ ತೋರಬೇಕು ಎಂದು ಹುಬ್ಬಳ್ಳಿ-ಧಾರವಾಡ ಲಘು ಉದ್ಯೋಗ ಭಾರತಿ ಅಧ್ಯಕ್ಷ ಎಸ್.ಸಿ. ಪಾಟೀಲ ಹೇಳಿದರು.

    ಇಲ್ಲಿಯ ಕೆಎಲ್​ಇ ಸಂಸ್ಥೆಯ ಐಎಂಎಸ್​ಆರ್ ಎಂಬಿಎ ಕಾಲೇಜಿನಲ್ಲಿ ಸೋಮವಾರ ಆಯೋಜಿಸಿದ್ದ ‘ಉದ್ಯಮಶೀಲ ಮನಸ್ಥಿತಿಯನ್ನು ಹೇಗೆ ನಿರ್ವಿುಸುವುದು’ ಎಂಬ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ಯುವಕರು ಹೊಸ ಆಲೋಚನೆಗಳೊಂದಿಗೆ ನವ ಉದ್ಯಮಗಳನ್ನು ಸ್ಥಾಪಿಸಬೇಕು. ಹುಬ್ಬಳ್ಳಿಯಂಥ 2ನೇ ಸ್ತರದ ನಗರಗಳಲ್ಲಿ ಇದರ ಅಗತ್ಯವಿದೆ ಎಂದರು.

    ಐಎಂಎಸ್​ಆರ್ ನಿರ್ದೇಶಕ ಡಾ. ರಾಜೇಂದ್ರಪ್ರಸಾದ ಕೆ.ಎಚ್. ಮಾತನಾಡಿ, ನವೋದ್ಯಮಗಳನ್ನು ಬೆಳೆಸಲು ಲಘು ಉದ್ಯೋಗ ಭಾರತಿ ಬದ್ಧತೆಯಿಂದ ಕೆಲಸ ನಿರ್ವಹಿಸುತ್ತಿದೆ. ವಿದ್ಯಾರ್ಥಿಗಳಲ್ಲಿ ಉದ್ಯಮಶೀಲ ಗುಣಗಳನ್ನು ಪ್ರೇರೇಪಿಸುವಲ್ಲಿ ವೇಗವರ್ಧಕವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದರು.

    ಐಎಂಎಸ್​ಆರ್ ಸಹಾಯಕ ಪ್ರಾಧ್ಯಾಪಕಿ ಡಾ. ಅರುಣಾ ಬತ್ತೂರ ಮಾತನಾಡಿ, ಉದ್ಯಮ ಜಗತ್ತಿನಲ್ಲಿ ಯಶಸ್ಸು ಕಾಣಲು ಅಗತ್ಯವಾದ ಕೌಶಲ ಮತ್ತು ಜ್ಞಾನ ಸಂಪಾದಿಸಲು ಇಂಥ ಕಾರ್ಯಕ್ರಮಗಳು ಅನುಕೂಲಕರ ಎಂದು ಹೇಳಿದರು.

    ಲಘು ಉದ್ಯೋಗ ಭಾರತ ಕಾರ್ಯದರ್ಶಿ ಪ್ರಸಾದ ಪಿ., ಸಂಗಮೇಶ ಹಂದಿಗೋಳ, ವಿಜಯ ಯಡವಿ, ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts