More

    ನಿಷೇಧದ ಮಧ್ಯೆಯೂ ಗೋಹತ್ಯೆ

    ರಾಣೆಬೆನ್ನೂರ: ಗೋಹತ್ಯೆ ತಡೆಯಲು ಹೋದ ಯುವಕರ ಮೇಲೆ ಕೆಲವರು ಹಲ್ಲೆ ನಡೆಸಿದ ಘಟನೆ ನಗರದ ಇಸ್ಮಾಂಪುರ ಓಣಿಯಲ್ಲಿ ಭಾನುವಾರ ನಡೆದಿದೆ. ಸಾಮಾಜಿಕ ಜಾಲತಾಣದಲ್ಲಿ ಇದರ ವಿಡಿಯೋ ವೈರಲ್ ಆಗಿದೆ. ಘಟನಾ ಸ್ಥಳಕ್ಕೆ ಶಹರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದು, ಸ್ಥಳದಲ್ಲಿ ಸೇರಿದ್ದ ಜನರನ್ನು ಲಾಠಿ ಬೀಸುವ ಮೂಲಕ ಚದುರಿಸಿದ್ದಾರೆ.

    ನಡೆದಿದ್ದೇನು…?: ಭಾನುವಾರ ರಾಣೆಬೆನ್ನೂರಿನಲ್ಲಿ ಜಾನುವಾರು ಸಂತೆ ನಡೆಯುತ್ತದೆ. ಮಾರುಕಟ್ಟೆಗೆ ಬಂದ ಕೆಲವರು ಗೋವುಗಳನ್ನು ಖರೀದಿಸಿ ಕಸಾಯಿಖಾನೆಗೆ ಸಾಗಿಸಲು ಟಾಟಾಏಸ್ ವಾಹನದಲ್ಲಿ ತುಂಬಿಕೊಂಡು ಇಸ್ಮಾಂಪುರ ಓಣಿಗೆ ತಂದಿದ್ದರು. ಇದರ ಬೆನ್ನು ಹತ್ತಿದ ಕೆಲ ಯುವಕರು, ‘ನೀವು ಗೋವುಗಳನ್ನು ಹತ್ಯೆ ಮಾಡುವ ಸಲುವಾಗಿ ತಂದಿದ್ದೀರಿ. ಗೋಹತ್ಯೆ ಮಾಡಬೇಡಿ’ ಎಂದು ಹೇಳಿದ್ದಾರೆ. ಅಲ್ಲದೆ, ಯುವಕರು ಅದೇ ಓಣಿಯ ಕಸಾಯಿಖಾನೆಯೊಂದರಲ್ಲಿ ಅಕ್ರಮವಾಗಿ ಗೋವುಗಳನ್ನು ಕತ್ತರಿಸಿ ಜೋತು ಬಿಟ್ಟಿರುವ ದೃಶ್ಯವನ್ನು ಸೆರೆ ಹಿಡಿದಿದ್ದಾರೆ. ಇದರಿಂದಾಗಿ ಎರಡೂ ಗುಂಪಿನವರ ನಡುವೆ ಪರಸ್ಪರ ವಾಗ್ವಾದ ನಡೆದು ಕೈ ಕೈ ಮಿಲಾಯಿಸುವ ಹಂತಕ್ಕೂ ಹೋಗಿದೆ. ಕೂಡಲೆ ಸ್ಥಳಕ್ಕಾಗಮಿಸಿದ ಶಹರ ಠಾಣೆ ಪೊಲೀಸರು ಲಾಠಿಯಿಂದ ಚದುರಿಸಿ ಎಲ್ಲರನ್ನು ಕಳುಹಿಸಿದ್ದಾರೆ. ಈ ಎಲ್ಲ ದೃಶ್ಯಗಳು ವಾಟ್ಸ್​ಆಪ್ ಸೇರಿ ಇತರ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

    ಕಾಯ್ದೆಗಿಲ್ಲ ಗೌರವ: ರಾಜ್ಯ ಸರ್ಕಾರ ಗೋಹತ್ಯೆ ನಿಷೇಧ ಕಾಯ್ದೆಯನ್ನು ಜಾರಿಗೊಳಿಸಿದೆ. ವಯಸ್ಸಾದ ಗೋವುಗಳನ್ನು ಕಟಾವು ಮಾಡಬೇಕಾದರೆ, ಸರ್ಕಾರಿ ಪಶು ಆಸ್ಪತ್ರೆ ವೈದ್ಯರಿಂದ ಪ್ರಮಾಣಪತ್ರ ಪಡೆದುಕೊಳ್ಳಬೇಕು. ಆದರೆ, ನಗರದ ಇಸ್ಮಾಂಪುರ ಓಣಿ, ಜುಮ್ಮಾ ಮಸೀದಿ ಬಳಿ, ಖತೀಬಗಲ್ಲಿ, ಸೈಕಲ್​ಗಾರ ಓಣಿ, ಮೂಡಲಮಠದ ಹಿಂಭಾಗ, ಕೋಟೆ, ಮೇಡ್ಲೇರಿ ರಸ್ತೆಯ ಉರ್ದು ಸ್ಕೂಲ್ ಹತ್ತಿರ, ಗುರಣ್ಯಚಾಳ, ಸಿದ್ದೇಶ್ವರ ನಗರ, ಮಾರುತಿ ನಗರ, ಪ್ರವಾಸಿ ಮಂದಿರದ ಹಿಂಭಾಗದಲ್ಲಿ ಕೆಲವರು ಅನಧಿಕೃತವಾಗಿ ಕಸಾಯಿಖಾನೆಗಳನ್ನು ನಿರ್ವಿುಸಿಕೊಂಡು ಅಕ್ರಮವಾಗಿ ಗೋಹತ್ಯೆ ಮಾಡುತ್ತಿದ್ದಾರೆ ಎನ್ನುವ ಆರೋಪವಿದೆ. ಜಿಲ್ಲಾಡಳಿತ, ತಾಲೂಕು ಆಡಳಿತ, ನಗರಸಭೆ, ಪಶು ಆಸ್ಪತ್ರೆ ವೈದ್ಯರು ಹಾಗೂ ಪೊಲೀಸರು ಈ ಬಗ್ಗೆ ಸೂಕ್ತ ಕ್ರಮ ಕೈಗೊಂಡು ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎನ್ನುವುದು ಸಾರ್ವಜನಿಕರ ಆಗ್ರಹವಾಗಿದೆ.

    2 ಗೋವು ಹತ್ಯೆ

    ಇಸ್ಲಾಂಪುರ ಓಣಿಯಲ್ಲಿ ಹತ್ಯೆ ಮಾಡಲು ತಂದಿದ್ದರು ಎನ್ನಲಾದ 7 ಗೋವುಗಳನ್ನು ಯುವಕರು ರಕ್ಷಿಸಿದ್ದಾರೆ. ಆದರೆ, ಘಟನಾ ಸ್ಥಳಕ್ಕೆ ಪೊಲೀಸರು ಬರುವಷ್ಟರಲ್ಲಿಯೇ ಎರಡು ಗೋವುಗಳನ್ನು ಹತ್ಯೆ ಮಾಡಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಸಾಯಿಖಾನೆ ಮಾಲೀಕರ ಮೇಲೆ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪಿಎಸ್​ಐ ನಾಗರಾಜ ತಿಳಿಸಿದ್ದಾರೆ.

    ಗೋಹತ್ಯೆ ಮಾಡುವುದು ಅಪರಾಧ. ಆದರೆ, ತಾವೇ ಗೋರಕ್ಷಕರು ಎಂದು ಅದನ್ನು ತಡೆಯಲು ಹೋಗುವುದು ಸರಿಯಲ್ಲ. ಬದಲಾಗಿ ಪೊಲೀಸರಿಗೆ ಮಾಹಿತಿ ನೀಡಬೇಕು. ರಾಣೆಬೆನ್ನೂರ ನಗರದಲ್ಲಿ ನಡೆದಿರುವ ಘಟನೆ ಕುರಿತು ಮಾಹಿತಿ ಪಡೆದು ಕಾನೂನು ಕ್ರಮ ಜರುಗಿಸಲಾಗುತ್ತದೆ.

    | ಹನುಮಂತರಾಯ, ಎಸ್ಪಿ ಹಾವೇರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts