More

    ಕೋವಿಡ್ ಲಸಿಕೆ ವಿತರಿಸಲು ಸಕಲ ವ್ಯವಸ್ಥೆ

    ಬೈಲಹೊಂಗಲ: ಕೋವಿಡ್ ಲಸಿಕೆ ನೀಡುವಿಕೆಯನ್ನು ಯಶಸ್ವಿಗೊಳಿಸಲು ತಾಲೂಕಿನಲ್ಲಿ ಸಕಲ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಎಸಿ ಶಿವಾನಂದ ಭಜಂತ್ರಿ ಹೇಳಿದ್ದಾರೆ.

    ಉಪವಿಭಾಗಾಧಿಕಾರಿಗಳ ಕಚೇರಿಯಲ್ಲಿ ಬುಧವಾರ ತಾಲೂಕು ಟಾಸ್ಕ್‌ಫೋರ್ಸ್‌ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮೊದಲ ಹಂತದಲ್ಲಿ 1933 ಕರೊನಾ ವಾರಿಯರ್ಸ್‌ಗಳಾದ ಆರೋಗ್ಯ, ಖಾಸಗಿ ವ್ಶೆದ್ಯರು, ಸಿಬ್ಬಂದಿ, ಅಂಗನವಾಡಿ, ಆಶಾ ಕಾರ್ಯಕರ್ತೆಯರಿಗೆ ಆಯುರ್ವೇದಿಕ್ ಮಹಾವಿದ್ಯಾಲಯ ಸಿಬ್ಬಂದಿಗೆ ಲಸಿಕೆ ವಿತರಿಸಲಾಗುವುದು ಎಂದರು.

    ತಾಲೂಕಾ ಆರೋಗ್ಯಾಧಿಕಾರಿ ಡಾ.ಎಸ್.ಎಸ್.ಸಿದ್ದಣ್ಣವರ ಮಾತನಾಡಿ, ಲಸಿಕೆಯನ್ನು ಎಲ್ಲ ಸರ್ಕಾರಿ ಆಸ್ಪತ್ರೆಗಳ ಶೀತಲೀಕರಣ ಘಟಕದಲ್ಲಿಡಲು ವ್ಯವಸ್ಥೆ ಮಾಡಲಾಗುತ್ತಿದ್ದು, ಅದರ ನಿರ್ವಹಣೆ ಕುರಿತು ತರಬೇತಿ ನೀಡಲಾಗುವುದು. ನಂತರದ ಹಂತಗಳಲ್ಲಿ ಲಸಿಕೆ ನೀಡುವ ಕುರಿತು ಸರ್ಕಾರ ನೀಡುವ ಆದೇಶಗಳನ್ನು ಯಶಸ್ವಿಗೊಳಿಸಲಾಗುವುದು ಎಂದರು.

    ಲಸಿಕೆ ದಾಸ್ತಾನು ಮಾಡಿಕೊಳ್ಳುವ, ಲಸಿಕೆ ನೀಡಲು ಸಿಬ್ಬಂದಿಗಳ ವ್ಯವಸ್ಥೆ ಹಾಗೂ ಖಾಸಗಿ ಆಸ್ಪತ್ರೆ ಆರ್ಯುವೇದಿಕ್ ಕಾಲೇಜುಗಳ ಪಾಲ್ಗೊಳ್ಳುವಿಕೆ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು. ಬೈಲಹೊಂಗಲ ತಹಸೀಲ್ದಾರ್ ಡಾ. ದೊಡ್ಡಪ್ಪ ಹೂಗಾರ, ಕಿತ್ತೂರು ತಹಸೀಲ್ದಾರ್ ಪ್ರವೀಣ ಜೈನ್, ತಾಪಂ ಇಒ ಸುಭಾಸ ಸಂಪಗಾವಿ, ಎಸ್.ಎನ್.ವಿ.ವಿ.ಎಸ್. ಆಯುರ್ವೇದಿಕ್ ಕಾಲೇಜಿನ ಪ್ರಾಂಶುಪಾಲ ಡಾ. ಸುಭಾಸ ಬಾಗಡೆ, ಐಎಂಎ ಅಧ್ಯಕ್ಷ ಡಾ. ಅಶೋಕ ದೊಡವಾಡ, ಡಾ. ಚಿದಂಬರ್ ಕುಲಕರ್ಣಿ, ರೋಟರಿ ಸಂಸ್ಥೆ ಅಧ್ಯಕ್ಷ ಡಾ. ಎಂ.ಪಿ. ಗದಗ, ಬೈಲಹೊಂಗಲ ಬಿಇಒ ಡಾ. ಜಿ.ವೈ.ಹೂಗಾರ, ಕಿತ್ತೂರು ಬಿಇಒ ಆರ್.ಟಿ.ಬಳಿಗಾರ ಸಿ.ಡಿ.ಪಿ.ಒ. ಮಹಾಂತೇಶ ಭಜಂತ್ರಿ, ಡಾ. ಮಂಜುಷಾ, ಪಶುಸಂಗೋಪನಾಧಿಕಾರಿ ಡಾ.ಐ.ಎಸ್ ಕೊಲ್ಹಾರ, ಸಾರ್ವಜನಿಕ ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಡಾ. ನಿರ್ಮಲಾ ಮಹಾಂತಶೆಟ್ಟಿ, ಬಿ.ಎಚ್.ಇ.ಒ ಎಸ್.ಎಸ್. ಮುತ್ನಾಳ, ಈರಣ್ಣ ಮಡಿವಾಳರ ಹಾಗೂ ತಾಲೂಕಾ ಮಟ್ಟದ ಅಧಿಕಾರಿಗಳು ಭಾಗವಹಿಸಿದ್ಧರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts