More

    ದ.ಕ.ದಲ್ಲಿ 5103 ಸೋಂಕಿತರು

    ಮಂಗಳೂರು/ಉಡುಪಿ: ಕರಾವಳಿಯಲ್ಲಿ ಮಂಗಳವಾರ 282 (ದ.ಕ. 173, ಉಡುಪಿ 109)ಮಂದಿಯಲ್ಲಿ ಕರೊನಾ ಸೋಂಕು ಕಾಣಿಸಿಕೊಂಡಿದೆ.
    ದ.ಕ ಜಿಲ್ಲೆಯಲ್ಲಿ ಈವರೆಗಿನ ಲೆಕ್ಕಾಚಾರ ಪ್ರಕಾರ, ಸೋಂಕಿತರ ಸಂಖ್ಯೆ 5 ಸಾವಿರ ಗಡಿ ದಾಟಿದೆ. ಮಂಗಳವಾರ ನಾಲ್ವರು ಮೃತಪಟ್ಟಿದ್ದು, 41 ಮಂದಿ ಗುಣವಾಗಿ ವಿವಿಧ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ.

    ಮಂಗಳವಾರದ ಪ್ರಕರಣಗಳಲ್ಲಿ ಪ್ರಾಥಮಿಕ ಸಂಪರ್ಕದಿಂದ 21, ಐಎಲ್‌ಐ(ಇನ್‌ಫ್ಲುಯೆಂಜಾ ಮಾದರಿ ಕಾಯಿಲೆ) ಇದ್ದ 91, ತೀವ್ರ ಉಸಿರಾಟದ ತೊಂದರೆ ಇರುವ 22 ಹಾಗೂ ಒಬ್ಬರು ಅಂತಾರಾಷ್ಟ್ರೀಯ ಪ್ರಯಾಣಿಕರಲ್ಲಿ ಸೋಂಕು ಕಂಡು ಬಂದಿದೆ. 38 ಮಂದಿಯ ಸೋಂಕಿನ ಮೂಲ ಪತ್ತೆ ನಡೆಯುತ್ತಿದೆ.
    ಜಿಲ್ಲೆಯಲ್ಲಿ 35081 ಸ್ಯಾಂಪಲ್ ಟೆಸ್ಟ್‌ಗಳಾಗಿವೆ. ಪಾಸಿಟಿವ್ ಪ್ರಕರಣಗಳ ಸಂಖ್ಯೆ 5103ಕ್ಕೆ ಏರಿದೆ. 2632 ಸಕ್ರಿಯ ಪ್ರಕರಣಗಳಿವೆ. ಡಿಸ್‌ಚಾರ್ಜ್ ಆಗಿರುವವರ ಸಂಖ್ಯೆ 2338ಕ್ಕೆ ಏರಿದೆ. ಸಕಲೇಶಪುರದ ನಿವಾಸಿ 84 ವರ್ಷದ ವೃದ್ಧ ಜು.22ರಂದು ಖಾಸಗಿ ಆಸ್ಪತ್ರೆಗೆ ದಾಖಲಾಗಿ 26ರಂದು ನಿಧನರಾಗಿದ್ದಾರೆ.

    ಅವರಿಗೆ ಶ್ವಾಸಕೋಶದ ತೊಂದರೆ, ಹೃದಯ ಸಮಸ್ಯೆ ಇತ್ಯಾದಿಗಳಿದ್ದವು. ಬಂಟ್ವಾಳ ನಿವಾಸಿ 62ರ ವೃದ್ಧ 26ರಂದು ವೆನ್ಲಾಕ್ ಆಸ್ಪತ್ರೆಗೆ ಸೆಪ್ಸಿಸ್ ಮತ್ತು ಸೆಪ್ಟಿಕ್ ಶಾಕ್, ಅನೀಮಿಯಾ, ಲಿವರ್ ಸಮಸ್ಯೆ ಇತ್ಯಾದಿಗಳೊಂದಿಗೆ ದಾಖಲಾಗಿ ಮಂಗಳವಾರ ಮೃತಪಟ್ಟರು. ಬಂಟ್ವಾಳದ 25 ವರ್ಷದ ಮಹಿಳೆ ಬ್ರೈನ್ ಸ್ಟೆಮ್ ಡಿಸ್‌ಫಂಕ್ಶನ್, ಕೋರ್ಟಿಕಲ್ ವೆನಸ್ ಥ್ರೋಂಬೊಸಿಸ್, ಇನ್‌ಫ್ರಾ ಪ್ಯಾರೆಂಚಲ್ ಬ್ಲೀಡ್‌ನಿಂದ ಬಳಲುತ್ತಿದ್ದು 25ರಂದು ಆಸ್ಪತ್ರೆಗೆ ದಾಖಲಾಗಿ ಮಂಗಳವಾರ ಮೃತರಾದರು. ಭಟ್ಕಳ ಮೂಲದ 72 ವರ್ಷದ ವೃದ್ಧ 23ರಂದು ಖಾಸಗಿ ಆಸ್ಪತ್ರೆಗೆ ದಾಖಲಾಗಿ ಸೆಪ್ಟಿಕ್ ಶಾಕ್, ಸೆಪ್ಟಿಸೇಮಿಯಾ, ಹೈಪರ್ ಟೆನ್ಶನ್, ಡಯಾಬಿಟಿಸ್ ಇತ್ಯಾದಿಗಳಿಂದ ಬಳಲುತ್ತಿದ್ದವರು. 27ರಂದು ಮೃತರಾದರು. ಅವರಿಗೆ ಕೋವಿಡ್ ದೃಢಪಟ್ಟಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts