More

    ಮಾರುಕಟ್ಟೆಯಿಂದ ಕ್ಯಾಪ್ಸಿಕಂ ಕೊಂಡು ತಂದ ದಂಪತಿಗೆ ಕತ್ತರಿಸುವಾಗ ಕಾದಿತ್ತು ಭಾರಿ ಶಾಕ್​!

    ಒಟ್ಟಾವ: ಕಳೆದ ವೀಕೆಂಡ್​ನಲ್ಲಿ ರಾತ್ರಿ ಊಟವನ್ನು ತಯಾರಿಸುತ್ತಿದ್ದ ಕೆನಡಾ ಮೂಲದ ದಂಪತಿಗೆ ಅಚ್ಚರಿಯೊಂದು ಎದುರಾಯಿತು. ಕ್ಯಾಪ್ಸಿಕಂ(ದೊಡ್ಡ ಮೆಣಸಿನಕಾಯಿ) ಕತ್ತರಿಸುವಾಗ ಒಳಗಡೆ ಜೀವಂತ ಹಸಿರು ಕಪ್ಪೆಯನ್ನು ಕಂಡು ದಂಪತಿ ಕಂಗಾಲಾದಂತಹ ಸೋಜಿಗದ ಘಟನೆ ನಡೆದಿದೆ.

    ನಿಕೊಲ್​ ಗಗ್ನೂನ್​ ಮತ್ತು ಗೆರಾರ್ಡ್​ ಬ್ಲ್ಯಾಕ್​ಬರ್ನ್ ದಂಪತಿ ಕೆನಡಾದ ಸೆಗ್ಯುನಾಯ್​ ನಿವಾಸಿಗಳು. ಫೆ. 9ರಂದು ರಾತ್ರಿಯ ಊಟಕ್ಕಾಗಿ ಸ್ಥಳೀಯ ಸೂಪರ್​ ಮಾರುಕಟ್ಟೆಯಿಂದ ತರಕಾರಿ ಸೇರಿಂದತೆ ಆಹಾರ ಪದಾರ್ಥವನ್ನು ಕೊಂಡು ತಂದಿದ್ದರು. ಈ ವೇಳೆ ಗಗ್ನೂನ್​ ಕ್ಯಾಪ್ಸಿಕಂ ತೆಗೆದುಕೊಂಡು ಕತ್ತರಿಸಿದಾಗ ಹಸಿರು ಕಪ್ಪೆ ಕಂಡು ಒಂದು ಕ್ಷಣ ಬೆಚ್ಚಿಬಿದ್ದಿದ್ದಾರೆ. ​

    ಮಾರುಕಟ್ಟೆಯಿಂದ ಕ್ಯಾಪ್ಸಿಕಂ ಕೊಂಡು ತಂದ ದಂಪತಿಗೆ ಕತ್ತರಿಸುವಾಗ ಕಾದಿತ್ತು ಭಾರಿ ಶಾಕ್​!

    ಹರಿತವಾದ ಚಾಕುವಿನಿಂದ ಸ್ವಲ್ಪದರಲ್ಲೇ ಕಪ್ಪೆ ಬಚಾವ್​ ಆಗಿದೆ. ಆ ಕ್ಷಣಕ್ಕೆ ದಂಪತಿ ತಲೆಗೆ ಬಂದಂತಹ ದೊಡ್ಡ ಪ್ರಶ್ನೆಯೆಂದರೆ ಕ್ಯಾಪ್ಸಿಕಂ ಒಳಗೆ ಕಪ್ಪೆ ಹೇಗೆ ಬಂತು ಎಂಬುದು. ಇದನ್ನು ತಿಳಿದುಕೊಳ್ಳಲು ದಂಪತಿ ಕೆನಾಡದ ಕ್ಯೂಬೆಕ್​ ಕೃಷಿ ಸಚಿವಾಲಯದ ಮೀನುಗಾರಿಕೆ ಮತ್ತು ಆಹಾರ ಇಲಾಖೆಯನ್ನು ಸಂಪರ್ಕಿಸಿ, ನಡೆದಿದ್ದನ್ನು ವಿವರಿಸಿದ್ದಾರೆ.

    ಕ್ಯಾಪ್ಸಿಕಂನಲ್ಲಿ ಗೋಚರವಾಗುವಂತಹ ಯಾವುದೇ ರಂಧ್ರ ಇರಲಿಲ್ಲ ಎಂದೂ ಇದೇ ವೇಳೆ ದಂಪತಿ ವಾದಿಸಿದ್ದಾರೆ. ಇದೀಗ ಈ ಪ್ರಕರಣ ಯಕ್ಷ ಪ್ರಶ್ನೆಯಾಗಿ ಉಳಿದಿದೆ. ಕ್ಯಾಪ್ಸಿಕಂ ಸೆಂಟ್ರಲ್​ ಅಮೆರಿಕದ ಹೊಂಡುರಾಸ್​ನಿಂದ ಕೆನಡಾಗೆ ಆಮದು ಮಾಡಿಕೊಳ್ಳಲಾಗಿದೆ ಎಂದು ತಿಳಿದುಬಂದಿದೆ. ಈ ಪ್ರಕರಣವನ್ನು ಕೆನಡಾ ಆಹಾರ ತಪಾಸಣಾ ಸಂಸ್ಥೆಗೆ ವರ್ಗಾಯಿಸಲಾಗಿದ್ದು, ತನಿಖೆಗೆ ಆದೇಶಿಸಲಾಗಿದೆ.

    ವಿಪರ್ಯಾಸವೆಂದರೆ ಕಪ್ಪೆ ಹೇಗೆ ಕ್ಯಾಪ್ಸಿಕಂ ಒಳಗೆ ಬಂತು ಎಂಬುದನ್ನು ತಿಳಿಯಲು ಪರೀಕ್ಷೆಗಾಗಿ ಕಪ್ಪೆಯನ್ನು ಕೊಲ್ಲಲಾಗಿದೆ. ಆದರೆ, ಈವರೆಗೂ ಪತ್ತೆಹಚ್ಚಲು ಸಾಧ್ಯವಾಗಿಲ್ಲ. ಆದರೆ, ಯಾವುದೋ ಕೀಟ ಕಪ್ಪೆಯ ಮೊಟ್ಟೆಯನ್ನು ಕ್ಯಾಪ್ಸಿಕಂ ಒಳಗೆ ತಂದಿರಬಹುದು, ಅದು ಅಲ್ಲಿಯೇ ಬೆಳದಿರಬಹುದೆಂದು ಊಹಿಸಿದ್ದಾರೆ. ಇನ್ನು ಕೆಲವರು ಇದೊಂದು ತಮಾಷೆಗಾಗಿ ಮಾಡಿರುವ ಕೆಲಸವೆಂದು ಹೇಳಿದ್ದಾರೆ. ಆದರೂ ಇದು ಇನ್ನೂ ಯಕ್ಷ ಪ್ರಶ್ನೆಯಾಗೇ ಉಳಿದಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts