More

    ತೆಲಂಗಾಣದಲ್ಲಿ ಮಾರಕ ವೈರಸ್​ ದೃಢಪಟ್ಟ ಟೆಕ್ಕಿ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ; ಬಸ್​ನಲ್ಲಿದ್ದ ಪ್ರಯಾಣಿಕರ ಪತ್ತೆಗೆ ಮುಂದಾದ ಸರ್ಕಾರ!

    ಹೈದರಾಬಾದ್: ಮಾರಕ ವೈರಸ್​ ಕೊರೊನಾ ಭಾರತದಲ್ಲಿ ಇಂದು ಇಬ್ಬರಿಗೆ ದೃಢಪಟ್ಟಿದೆ. ವೈರಸ್​ ಪೀಡಿತರಲ್ಲಿ ಓರ್ವ ದೆಹಲಿಯವರು, ಮತ್ತೋರ್ವ ತೆಲಂಗಾಣದವರು.

    ತೆಲಂಗಾಣದಲ್ಲಿ ಪತ್ತೆಯಾದ ಮಾರಕ ವೈರಸ್​ ಪೀಡಿತ ಟೆಕ್ಕಿ ಬೆಂಗಳೂರಿನಿಂದ ಬಸ್​ ಮುಖಾಂತರ ಹೈದರಾಬಾದ್​ಗೆ ತೆರಳಿದ್ದ. ಹೀಗೆ ಬಸ್​ನಲ್ಲಿ ತೆರಳಿದ್ದಾಗ ಹಲವರ ಜತೆ ಸಂಭಾಷಣೆ ಮಾಡಿದ್ದ. ಈಗ ಬಸ್​ನಲ್ಲಿದ್ದ ಆ ಪ್ರಯಾಣಿಕರನ್ನು ಪತ್ತೆ ಹಚ್ಚಲಾಗುತ್ತಿದೆ.

    ಮಾರಕ ವೈರಸ್​ ದೃಢ ಪಟ್ಟವ 24 ವರ್ಷದ ಟೆಕ್ಕಿಯಾಗಿದ್ದು ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ. ಈತನನ್ನು ತೀವ್ರ ನಿಗಾದಲ್ಲಿ ಇರಿಸಲಾಗಿದ್ದು, ಆತನ ಆರೋಗ್ಯ ಸ್ಥಿರವಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

    ತೆಲಂಗಾಣದ ಆರೋಗ್ಯ ಸಚಿವ, ಬೆಂಗಳೂರಿನಿಂದ ಬಂದ ಟೆಕ್ಕಿಯನ್ನು ಪರೀಕ್ಷಿಸಲಾಗಿದ್ದು. ಆತನಲ್ಲಿ ಕೊರೊನಾ ವೈರಸ್​ ದೃಢ ಪಟ್ಟಿದೆ ಎಂದು ಖಚಿತ ಪಡಿಸಿದ್ದಾರೆ. ಟಿಕ್ಕಿ ಬೆಂಗಳೂರಿನಿಂದ ಹೈದರಾಬಾದ್​ಗೆ ಬಂದಿಳಿದ ಬಸ್​ ಸಹ ಪ್ರಯಾಣಿಕರನ್ನು ಪತ್ತೆ ಹಚ್ಚಲಾಗುತ್ತಿದೆ ಎಂದು ಅವರು ತಿಳಿಸಿದರು.

    ಆ ಟೆಕ್ಕಿಯನ್ನು ಇಲ್ಲಿನ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆತನ ವರದಿಗಳನ್ನು ಪುಣೆಯ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಅಲ್ಲಿಂದ ವರದಿಗಳು ಬಂದಿವೆ. ಅದರಲ್ಲಿ ಆತನಿಗೆ ಕೊರೊನಾ ಇರುವುದು ದೃಢ ಪಟ್ಟಿದೆ ಎಂದು ಸಚಿವ ಈಟೇಲ ರಾಜೇಂದ್ರ ಮಾಧ್ಯಮಗಳಿಗೆ ಮಾಹಿತಿ ನೀಡಿದರು. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts