More

    VIDEO| ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕರೊನಾ ತಡೆಗೆ ಸ್ಕ್ರೀನಿಂಗ್ ಹೇಗೆ ನಡೆಯುತ್ತದೆ?

    ಬೆಂಗಳೂರು: ಮಹಾಮಾರಿ ಕರೊನಾ ವೈರಸ್​ ಸೋಂಕು ಎಲ್ಲೆಡೆ ವೇಗವಾಗಿ ಹರಡುತ್ತಿರುವುದರಿಂದ ತೀವ್ರ ನಿಗಾವಹಿಸಲಾಗಿದೆ. ಅದರಲ್ಲೂ ವಿದೇಶದಿಂದ ತವರಿಗೆ ಮರಳುವವರ ಮೇಲೆ ಹದ್ದಿನ ಕಣ್ಣಿಡಲಾಗಿದೆ. ವಿದೇಶದಿಂದ ವಿಮಾನ ನಿಲ್ದಾಣಕ್ಕೆ ಆಗಮಿಸುವವರನ್ನು ಯಾವ ರೀತಿ ತಪಾಸಣೆಗೆ ಒಳಪಡಿಸುತ್ತಾರೆ ಎಂಬ ಕುತೂಹಲ ಇದೆ. ಅದಕ್ಕೆ ಬೆಂಗಳೂರು ವಿಮಾನ ನಿಲ್ದಾಣವೇ ಉತ್ತರ ನೀಡಿದೆ.

    ವಿದೇಶದಿಂದ ಬರುವವರನ್ನು ಯಾವ ರೀತಿ ಪರೀಕ್ಷೆಗೆ ಒಳಪಡಿಸುತ್ತೇವೆ ಎಂಬುದಕ್ಕೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಆಡಳಿತ ಮಂಡಳಿ ವಿಡಿಯೋ ಹರಿಬಿಡುವ ಮೂಲಕ ವಿವರಣೆ ನೀಡಿದೆ. ಸಾಕಷ್ಟು ಹಂತಗಳಲ್ಲಿ ವೈರಸ್​ ಸೋಂಕಿತರನ್ನು ಪತ್ತೆಹಚ್ಚಲಾಗುತ್ತದೆ. ಆ ಹಂತಗಳು ಯಾವುವು ಎಂಬುದು ಈ ಕೆಳಕಂಡಂತಿದೆ.

    1. ವಿದೇಶದಿಂದ ಬಂದ ಪ್ರಯಾಣಿಕರಿಗೆ ಮೊದಲಿಗೆ ಬ್ಯಾಕ್​ಗ್ರೌಂಡ್​ ಅರ್ಜಿಯನ್ನು ನೀಡಿ ವೈಯಕ್ತಿಕ ವಿವರಗಳನ್ನು ಪಡೆದುಕೊಳ್ಳಲಾಗುತ್ತದೆ.
    2. ವಿಮಾನ ನಿಲ್ದಾಣದೊಳಗಿನ ಏರೋಬ್ರಿಡ್ಜ್​ ಬಳಿ ಥರ್ಮಲ್​ ಸ್ಕ್ರೀನಿಂಗ್​​ಗೆ ಪ್ರಯಾಣಿಕರನ್ನು ಒಳಪಡಿಸಲಾಗುವುದು.
    3. ಪ್ರಯಾಣಿಕರ ಆರೋಗ್ಯ ಪರೀಕ್ಷೆ ನಡೆಸಲಾಗುವುದು.
    4. ಉಷ್ಣಾಂಶವನ್ನು ಪರೀಕ್ಷಿಸುವುದು ಮತ್ತು ವೈದ್ಯರು ಅದನ್ನು ದಾಖಲಿಸಿಕೊಳ್ಳುವುದು.
    5. ಏರ್​ಪೋರ್ಟ್​ ಹೆಲ್ತ್​ ಕೌಂಟರ್​ ಬಳಿ ಪ್ರಯಾಣಿಕರ ವಿಚಾರಣೆ ನಡೆಸಲಾಗುವುದು.
    6. ಪ್ರಯಾಣಿಕರಿಗೆ ಕೋವಿಡ್​-19 ವಿವರಣೆಯುಳ್ಳ ಕರಪತ್ರಗಳನ್ನು ವಿತರಿಸಲಾಗುವುದು.
    7. ಅಧಿಕಾರಿಗಳಿಂದ ಪ್ರಯಾಣಿಕರ ಹ್ಯಾಂಡ್​ ಸ್ಟ್ಯಾಂಪಿಗ್​ ಪಡೆಯುವುದು.
    8. ಪ್ರಯಾಣಿಕರ ಲಗೇಜ್​ಗಳನ್ನು ಪರಿಶೀಲಿಸುವುದು.
    9. ಹೆಚ್ಚಿನ ಕಸ್ಟಮ್ಸ್ ಪರಿಶೀಲನೆಗಾಗಿ ಎಲಿವೇಟರ್​ಗಳನ್ನು ತೆಗೆದುಕೊಳ್ಳುವುದು.
    10. ಎಲ್ಲವು ಮುಗಿದ ಬಳಿಕ ಲಗೇಜ್​ಗಳನ್ನು ತೆಗದುಕೊಳ್ಳಲು ಅನುಮತಿ ನೀಡುವುದು.
    11. ಕೊನೆಯಲ್ಲಿ ನಿರ್ಗಮನ ದ್ವಾರದ ಮೂಲಕ ಬಿಎಂಟಿಸಿ ಬಸ್​ ಬಳಿ ಕರೆದೊಯ್ಯುವುದು.
    12. ಕೊನೆಯಲ್ಲಿ ಮತ್ತೊಮ್ಮೆ ಆಕಾಶ್​ ಆಸ್ಪತ್ರೆಗೆ ಕರೆದೊಯ್ದು ಪರಿಶೀಲನೆ ನಡೆಸಲಾಗುವುದು.

    ಕರೊನಾ ವೈರಸ್​ ಹರಡುವಿಕೆ ಹಿನ್ನೆಲೆಯಲ್ಲಿ ಇಷ್ಟೆಲ್ಲಾ ಪ್ರಕ್ರಿಯೆಗಳು ವಿಮಾನ ನಿಲ್ದಾಣದಲ್ಲಿ ಪ್ರತಿನಿತ್ಯ ನಡೆಯುತ್ತಿದೆ.

    PHOTOS| ಕರೊನಾ ಸೋಂಕು ತಗುಲದಂತೆ ಏನು ಮಾಡಬೇಕು? ಮಾಡಬಾರದು?: ಉಪಯುಕ್ತ ಮಾಹಿತಿ ಫೋಟೋಗಳಲ್ಲಿ…

    ಕರೊನಾ ಸೋಂಕು ಹೆಚ್ಚಾದ ಹಿನ್ನೆಲೆ ಮಾರ್ಚ್​ 31ರವರೆಗೆ ರಾಜ್ಯದ ಆರು ಜಿಲ್ಲೆಗಳು ಲಾಕ್​ಡೌನ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts