More

    ಕರೊನಾ ವೈರಸ್ ಪರೀಕ್ಷಾ ಕೇಂದ್ರ ಶೀಘ್ರ

    ಬೆಳಗಾವಿ: ಬೆಳಗಾವಿಯಲ್ಲಿ ಕರೊನಾ ವೈರಸ್ ಪರೀಕ್ಷಾ ಕೇಂದ್ರ ತೆರೆಯಲು ಭಾರತೀಯ ಪಾರಂಪರಿಕ ಚಿಕಿತ್ಸಾ ವಿಜ್ಞಾನ ಸಂಸ್ಥೆ (ಐಸಿಎಂಆರ್) ಗ್ರೀನ್ ಸಿಗ್ನಲ್ ನೀಡಿದೆ.

    ಶೀಘ್ರದಲ್ಲೇ ಪರೀಕ್ಷಾ ಕೇಂದ್ರ ಆರಂಭವಾಗಲಿದ್ದು, ಕರೊನಾ ವೈರಸ್ ಲಕ್ಷಣಗಳಿರುವವರ ಗಂಟಲು ದ್ರವದ ಪರೀಕ್ಷೆಗೆ ಬೇರೆ ಜಿಲ್ಲೆಗೆ ಕಳುಹಿಸುವುದಕ್ಕಾಗಿ ವೈದ್ಯಕೀಯ ಸಿಬ್ಬಂದಿ ಅಲೆದಾಡುವುದು ಮುಂದೆ ತಪ್ಪಲಿದೆ.

    ಜಿಲ್ಲೆಯಾದ್ಯಂತ ಮಹಾಮಾರಿ ಕರೊನಾ ವೈರಸ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲಿದೆ. ಈ ಹಿನ್ನೆಲೆಯಲ್ಲಿ ನಗರದಲ್ಲಿ ಕರೊನಾ ವೈರಾಣು ಪರೀಕ್ಷಾ ಪ್ರಯೋಗಾ ಲಯ ಪ್ರಾರಂಭಿಸಬೇಕೆಂಬ ರಾಜ್ಯ ಸರ್ಕಾರದ ಪ್ರಸ್ತಾವನೆಗೆ ಕೇಂದ್ರ ಸರ್ಕಾರ ಸ್ಪಂದಿಸಿದೆ. ತನ್ನ ಒಡೆತನದಲ್ಲಿರುವ ಐಸಿಎಂಆರ್ ಕೇಂದ್ರದಲ್ಲಿ ಕೋವಿಡ್ ಪರೀಕ್ಷೆಗೆ ಅನುಮೋದನೆ ನೀಡಿದೆ. ಕೇಂದ್ರ ಸರ್ಕಾರದಿಂದ ಅನುಮತಿ ದೊರೆಯಲು ವಿಳಂಬ ವಾಗಿರುವುದರಿಂದ ಉತ್ತರ ಕರ್ನಾಟಕದಾದ್ಯಂತ ಅಸಮಾಧಾನ ವ್ಯಕ್ತವಾಗಿತ್ತು.

    ಉಪಕರಣ ಅಳವಡಿಕೆ: ನ್ಯಾಷನಲ್ ಅರ್ಕಿಡೆಶನ್ ಬೋರ್ಡ್ ಆಫ್ ಟೆಸ್ಟಿಂಗ್ ಕ್ಯಾಲಿಬ್ರೆಷನ್ ಲ್ಯಾಬೊರೇಟರಿ (ಎನ್‌ಎಬಿಟಿಸಿಎಲ್)ಯು ದೇಶದ ಯಾವುದೇ ರಾಜ್ಯದಲ್ಲಿ ಸರ್ಕಾರದ ಅಥವಾ ಖಾಸಗಿ ವೈದ್ಯಕೀಯ ಶಿಕ್ಷಣ ಸಂಸ್ಥೆಗಳಲ್ಲಿ ಪರೀಕ್ಷಾ ಕೇಂದ್ರ ತೆರೆಯಲು ಪ್ರಮಾಣ ಪತ್ರ ನೀಡಿದ ಬಳಿಕ ಐಸಿಎಂಆರ್ ಅನುಮತಿ ನೀಡುತ್ತದೆ. ನಗರದಲ್ಲಿರುವ ಐಸಿಎಂಆರ್ ಪ್ರಯೋಗಾಲಯದಲ್ಲಿ ಕರೊನಾ ವೈರಾಣು ಪರೀಕ್ಷೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಈಗಾಗಲೇ ಕೋವಿಡ್-19 ಪ್ರಯೋಗಾಲಯಕ್ಕೆ ಅಗತ್ಯವಿರುವ ವೈದ್ಯಕೀಯ ಉಪಕರಣ ಅಳವಡಿಸಲಾಗಿದೆ.

    ಪ್ರಯೋಗಾಲಯ ಆರಂಭವಾಗುವುದರಿಂದ ಜಿಲ್ಲೆಯಲ್ಲಿ ಕರೊನಾ ವೈರಸ್ ಪತ್ತೆಗೆ ಅನುಕೂಲವಾಲಿದೆ. ಪರೀಕ್ಷಾ ಕೇಂದ್ರಕ್ಕೆ ತರುವ ಸ್ಯಾಂಪಲ್‌ಗಳನ್ನು ವಿಶ್ಲೇಷಣೆ ಮಾಡಿ, ಪಾಸಿಟಿವ್ ಅಥವಾ ನೆಗಟಿವ್ ವರದಿ ನೀಡುವುದಕ್ಕಾಗಿ 4-5 ಗಂಟೆ ಸಮಯ ವ್ಯಯವಾಗಲಿದೆ. ಜಿಲ್ಲಾಧಿಕಾರಿ ಆದೇಶ ಬಂದ ತಕ್ಷಣ ಕರೊನಾ ಪರೀಕ್ಷಾ ಕೇಂದ್ರ ಆರಂಭಿಸಲಾಗುವುದು.
    | ಡಾ. ದೇಬಪ್ರಸಾದ ಚಟ್ಟೋಪಾಧ್ಯಾಯ ಐಸಿಎಂಆರ್‌ನ ನಿರ್ದೇಶಕ, ಸೂಕ್ಷ್ಮಾಣು ಜೀವಿ ವಿಜ್ಞಾನಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts