More

    ಕರೊನಾ ನಿಯಂತ್ರಣಾ ಕ್ರಮದ ಚರ್ಚೆ ನಡೆಯುತ್ತಿದ್ದ ಸಭೆಯಲ್ಲಿ ಡಿಸಿಎಂ ಅಶ್ವತ್ಥ ನಾರಾಯಣ್​ ಆರೋಪಕ್ಕೆ ನೊಂದು ಕಣ್ಣೀರಿಟ್ಟ ಪೊಲೀಸ್​ ಆಯುಕ್ತ ಭಾಸ್ಕರ್​ ರಾವ್​?

    ಬೆಂಗಳೂರು: ಕರೊನಾ ನಿಯಂತ್ರಣಕ್ಕಾಗಿ ಲಾಕ್​ಡೌನ್​ ಘೋಷಿಸಲಾಗಿದೆ. ಈ ಸಂದರ್ಭದಲ್ಲಿ ತೆಗೆದುಕೊಳ್ಳಬೇಕಾದ ಅಗತ್ಯ ಕ್ರಮಗಳ ಬಗ್ಗೆ ಇಂದು ಮುಖ್ಯಮಂತ್ರಿ ಯಡಿಯೂರಪ್ಪನವರು ಹಿರಿಯ ಅಧಿಕಾರಿಗಳ ಜತೆಗೆ ವಿಡಿಯೋ ಕಾನ್ಫರೆನ್ಸ್​ ಸಭೆ ನಡೆಸಿದ್ದಾರೆ.

    ಆದರೆ ಈ ಸಭೆಯಲ್ಲಿ ಉಪಮುಖ್ಯಮಂತ್ರಿ ಅಶ್ವತ್ಥ್​ ನಾರಾಯಣ ಅವರು ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್​ ರಾವ್​ ಕಾರ್ಯವೈಖರಿ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

    ಎಲ್ಲ ಮಳಿಗೆಗಳನ್ನೂ ಬಂದ್​ ಮಾಡಬೇಕಿದ್ದರೂ ಸೂಪರ್​ ಮಾರ್ಕೆಟ್​ಗಳು ತೆರೆದೇ ಇವೆ. ಪೊಲೀಸ್ ಆಯುಕ್ತ ಭಾಸ್ಕರ್​ ರಾವ್​ ಅವರು ಹಣ ಪಡೆದು ಸೂಪರ್​ ಮಾರ್ಕೆಟ್​ ತೆರೆಯಲು ಅನುಮತಿ ಕೊಟ್ಟಿದ್ದಾರೆ ಎಂದು ಡಿಸಿಎಂ ಅಶ್ವತ್ಥ್​ ನಾರಾಯಣ್ ಅವರು ಗಂಭೀರ ಆರೋಪ ಮಾಡಿದ್ದಾರೆ.

    ಈ ಆರೋಪದಿಂದ ಬೇಸರಗೊಂಡ ಭಾಸ್ಕರ್​ ರಾವ್​, ಇಂತಹ ಮಾತುಗಳನ್ನೆಲ್ಲ ಕೇಳಿಕೊಂಡು ನಾನು ಇರಬೇಕಾ? ಬೇಡವಾ ಎಂದು ನೀವೇ ನಿರ್ಧರಿಸಿ ಎಂದು ಸಿಎಂಗೆ ಹೇಳಿದ್ದಾರೆ.

    ಅಷ್ಟೇ ಅಲ್ಲದೆ, ಡಿಸಿಎಂ ಅಶ್ವತ್ಥ್​ ನಾರಾಯಣ್​ ಅವರು ಆನ್​ಲೈನ್​ ಫುಡ್​ ಡೆಲಿವರಿಯವರಿಗೆ ಹೆಚ್ಚಿನ ಪಾಸ್​ ನೀಡುವಂತೆ ಭಾಸ್ಕರ್​ ರಾವ್​ಗೆ ಈ ಸಭೆಯಲ್ಲಿ ಸೂಚನೆ ನೀಡಿದ್ದಾರೆ. ಅದಕ್ಕೆ ಒಪ್ಪದ ಆಯುಕ್ತರು, ಎಲ್ಲರಿಗೂ ಪಾಸ್​ ನೀಡಲು ಸಾಧ್ಯವೇ ಇಲ್ಲ ಎಂದಿದ್ದಾರೆ. ಅಷ್ಟಕ್ಕೇ ಡಿಸಿಎಂ, ಭಾಸ್ಕರ್​ ರಾವ್​ ವಿರುದ್ಧ ಏರುಧ್ವನಿಯಲ್ಲಿ ಕೂಗಾಡಿದ್ದಾರೆ ಎನ್ನಲಾಗಿದೆ.

    ಸಭೆಯಲ್ಲಿ ಇಷ್ಟೆಲ್ಲ ಆರೋಪ ಕೇಳಿಬಂದಿದ್ದರಿಂದ ನೊಂದ ಪೊಲೀಸ್ ಆಯುಕ್ತ ಭಾಸ್ಕರ್​ ರಾವ್​ ಕಣ್ಣಲ್ಲಿ ನೀರು ಹಾಕಿ, ಅಲ್ಲಿಂದ ಎದ್ದು ಹೋಗಲು ಪ್ರಯತ್ನಿಸಿದ್ದಾರೆ. ಅಷ್ಟರಲ್ಲಿ ಸಿಎಂ ಮಧ್ಯಪ್ರವೇಶಿಸಿ ಇಬ್ಬರನ್ನೂ ಸಮಾಧಾನ ಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಆದರೆ ಭಾಸ್ಕರ್ ರಾವ್​ ಡಿಸಿಎಂ ಮಾತಿನಿಂದ ಕಣ್ಣಲ್ಲಿ ನೀರು ಹಾಕಿದ ಬಗ್ಗೆ ಖಚಿತವಾಗಿಲ್ಲ.(ದಿಗ್ವಿಜಯ ನ್ಯೂಸ್​)

    ಹೊರಗಿನವರಿಗೆ ಪ್ರವೇಶ ನಿಷೇಧಿಸಿದ ಗ್ರಾಮಸ್ಥರು: ಕರೊನಾ ಸೋಂಕಿನ ಆತಂಕ ಕಾರಣ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts