More

    ಶಾಸಕ ದರ್ಶನಾಪುರಿಂದ ಸದ್ದಿಲ್ಲದೆ ಸೇವಾಯಜ್ಞ

    ಪ್ರಲ್ಹಾದ ತಿಳಗುಳ ಶಹಾಪುರ
    ಕರೊನಾ ವೈರಸ್ ಎಂಬ ಹೆಮ್ಮಾರಿ ಇಡೀ ದೇಶ ಸಂದಿಗ್ಧ ಪರಿಸ್ಥಿತಿಗೆ ದೂಡಿದ್ದು, ಎಲ್ಲೆಡೆ ಆತಂಕದ ಛಾಯೆ ಮುಂದುವರೆದಿದೆ. ವೈರಸ್ ನಿಯಂತ್ರಣಕ್ಕೆ ಸರ್ಕಾರ ಲಾಕ್ಡೌನ್ ಆದೇಶ ಹೊರಡಿಸಿದ್ದು, ಬಡ, ಮಧ್ಯಮ ಮತ್ತು ನಿರ್ಗತಿಕರ ಬದುಕು ಬಾಡುತ್ತಿದೆ. ಆದರೆ ಇಂಥ ಸಂದರ್ಭದಲ್ಲಿ ಕ್ಷೇತ್ರದ ಶಾಸಕ ಶರಣಬಸಪ್ಪ ದರ್ಶನಾಪುರ ಬಡವರಿಗೆ ನೆರವಿನ ಹಸ್ತ ಚಾಚುವ ಮೂಲಕ ಮಾದರಿ ರಾಜಕಾರಣಿ ಎನ್ನಿಸಿಕೊಂಡಿದ್ದಾರೆ.

    ಲಾಕ್ಡೌನ್ನಿಂದಾಗಿ ಜಿಲ್ಲಾದ್ಯಂತ ನಿರ್ಗತಿಕರ ಬದುಕು ಶೋಚನೀಯವಾಗಿದೆ. ಅದರಲ್ಲೂ ಸಗರ ನಾಡಿನ ಹೆಬ್ಬಾಗಿಲು ಎಂದೇ ಖ್ಯಾತಿ ಪಡೆದ ಶಹಾಪುರ ನಗರ ಸೇರಿ ಗ್ರಾಮೀಣ ಭಾಗದಲ್ಲಿ ಕರೊನಾ ವೈರಸ್ ಜನರನ್ನು ಭಯದಲ್ಲಿ ನಲಗುವಂತೆ ಮಾಡಿದೆ. ಈ ವೈರಸ್ನ ಉಪಟಳ ಹೆಚ್ಚಾಗುತ್ತಿದ್ದಂತೆ ದೊಡ್ಡ ದೊಡ್ಡ ನಗರಗಳಿಗೆ ಗುಳೆ ಹೋದ ಜನತೆ ಹಂತಹಂತವಾಗಿ ತಮ್ಮೂರಿಗೆ ವಾಪಸ್ ಆದಾಗ ಪರಿಸ್ಥಿತಿಯನ್ನೂ ಸೂಕ್ಷ್ಮವಾಗಿ ಅರಿತುಕೊಂಡ ಶಾಸಕ ದರ್ಶನಾಪುರ ತಕ್ಷಣವೇ ಕಾರ್ಯಪ್ರವೃತ್ತರಾಗಿದ್ದಾರೆ.

    ಕಳೆದ 15 ದಿನಗಳಿಂದ ತಮ್ಮ ಬೆಟಾಲಿಯನ್ನೊಂದಿಗೆ ಸೇವಾಯಜ್ಞಕ್ಕೆ ಧುಮುಕಿರುವ ಶಾಸಕ ದರ್ಶನಾಪುರ, 50 ಜನರ ಟೀಮ್ನೊಂದಿಗೆ ಪ್ರತಿನಿತ್ಯ ತಮ್ಮ ಕಚೇರಿಯಲ್ಲಿ ಬಿಸಿಬಿಸಿ ಪಲಾವ್ ಸಿದ್ಧಪಡಿಸಿ, ವ್ಯವಸ್ಥಿತ ಪೊಟ್ಟಣದಲ್ಲಿ ಪ್ಯಾಕ್ಮಾಡಿ ವಾಡರ್್ಗಳಿಗೆ ವಿತರಣೆ ಮಾಡಿಸುತ್ತಿದ್ದಾರೆ.

    ಆಯಾ ವಾರ್ಡ್​ಗಳಿಗೆ ಪ್ರಮುಖರನ್ನು ನಿಯೋಜನೆ ಮಾಡಲಾಗಿದ್ದು, ಎಲ್ಲ ಮೇಲುಸ್ತುವಾರಿಯನ್ನೂ ಶಾಸಕರೇ ವಹಿಸುತ್ತಿರುವುದು ವಿಶೇಷ. ಕ್ಷೇತ್ರದಲ್ಲಿ ಕರೊನಾ ವೈರಸ್ನಿಂದ ತೊಂದರೆಗೆ ಸಿಲುಕಿಕೊಂಡಿರುವವ ಪಟ್ಟಿ ಸಧ್ಯ ಶಾಸಕರ ಕೈಯಲ್ಲಿದೆ. ಹೀಗಾಗಿ ಆಹಾರ ಎಲ್ಲಿಯೂ ಹಾಳಾಗದಂತೆ ಕಾಳಜಿ ವಹಿಸುತ್ತಿದ್ದಾರೆ ಅಲ್ಲದೆ, ಪೌರ ಕಾರ್ಮಿಕರಿಗೆ, ಪೊಲೀಸ್, ಆರೋಗ್ಯ ಸೇರಿದಂತೆ ಕರೊನಾ ತುತರ್ು ಪರಿಸ್ಥಿತಿಯಲ್ಲಿ ಸೇವೆ ಸಲ್ಲಿಸುತ್ತಿರುವ ಸಿಬ್ಬಂದಿಗೆ ಕುಡಿವ ನೀರು, ಆಹಾರ ಮತ್ತು ಬಾಳೆಹಣ್ಣು ಕೊಡಲಾಗುತ್ತಿದೆ.

    ಇದರ ಜತೆಯಲ್ಲಿ ಪ್ರತಿನಿತ್ಯ ಜೀವನೋಪಾಯಕ್ಕೆ ಅಗತ್ಯವಾಗಿರುವ ಅಕ್ಕಿ, ಬೇಳೆ, ಎಣ್ಣೆ ಹೀಗೆ ಅಗತ್ಯ ವಸ್ತು ಪೂರೈಕೆಯೂ ನಡೆಯುತ್ತಿದೆ. ರಾಜಕಾರಣಿಗಳು ಕೇವಲ ಚುನಾವಣೆ ಸಂದರ್ಭದಲ್ಲಿ ಮಾತ್ರ ಜನರ ಹತ್ತಿರಕ್ಕೆ ತೆರಳುತ್ತಾರೆ ಎಂಬ ಆರೋಪಗಳ ಮಧ್ಯೆ ಶಾಸಕ ಶರಣಬಸಪ್ಪ ದರ್ಶನಾಪುರ ವಿಭಿನ್ನವಾಗಿ ಕಾಣುತ್ತಾರೆ. ದರ್ಶನಾಪುರ ಅವರ ಈ ಕೈಂಕರ್ಯಕ್ಕೆ ಶಹಾಪುರ ಮಾತ್ರವಲ್ಲದೇ ಇಡೀ ಯಾದಗಿರಿ ಜಿಲ್ಲೆ ಹ್ಯಾಟ್ಸಾಪ್ ಹೇಳುತ್ತಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts