More

    ಗ್ರಾಮಲೆಕ್ಕಿಗರ ನೇಮಕಕ್ಕೆ ಕರೊನಾ ಸೋಂಕು ಅಡ್ಡಿ; ಒಂದೂವರೆ ವರ್ಷದಿಂದ ಕಾಯುತ್ತಿರುವ ಅಭ್ಯರ್ಥಿಗಳು

    | ಜಗನ್ನಾಥ್ ಕಾಳೇನಹಳ್ಳಿ ತುಮಕೂರು

    ರಾಜ್ಯದ ವಿವಿಧ ಜಿಲ್ಲೆಗಳ ಕಂದಾಯ ಘಟಕಗಳಲ್ಲಿನ ಗ್ರಾಮಲೆಕ್ಕಿಗರ ಹುದ್ದೆ ನೇರ ನೇಮಕಾತಿಗೆ ಕರೊನಾ ತಡೆಗೋಡೆಯಾಗಿದ್ದು, ಒಂದೂವರೆ ವರ್ಷದಿಂದ ಉದ್ಯೋಗಕ್ಕಾಗಿ ಸಾವಿರಾರು ಅಭ್ಯರ್ಥಿಗಳು ಕಾಯುತ್ತಿದ್ದಾರೆ. ಈಗಲಾದರೂ ನೇಮಕಾತಿ ಪ್ರಕ್ರಿಯೆಯನ್ನು ಕಂದಾಯ ಇಲಾಖೆ ಪೂರ್ಣಗೊಳಿಸಲಿದೆಯೇ ಎಂಬುದನ್ನು ಉದ್ಯೋಗಾಂಕ್ಷಿಗಳು ಎದುರು ನೋಡುವಂತಾಗಿದೆ.

    2020ರ ಫೆಬ್ರವರಿಯಲ್ಲಿ ಚಿತ್ರದುರ್ಗ ಜಿಲ್ಲೆಯ ಕಂದಾಯ ಘಟಕದಲ್ಲಿ ಖಾಲಿ ಇರುವ 59 ಗ್ರಾಮಲೆಕ್ಕಿಗರ ಹುದ್ದೆಗಳ ನೇರನೇಮಕಾತಿಗೆ ಸರ್ಕಾರದ ಆದೇಶದನ್ವಯ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿತ್ತು. ಇದೇ ವೇಳೆ ಕೊಪ್ಪಳ 22, ಶಿವಮೊಗ್ಗ 69, ದಾವಣಗೆರೆ 18, ಚಿಕ್ಕಮಗಳೂರು 50, ಮಂಡ್ಯದಲ್ಲೂ 54 ಗ್ರಾಮಲೆಕ್ಕಿಗರ ಹುದ್ದೆಗಳ ಭರ್ತಿಗೆ ಜಿಲ್ಲಾಡಳಿತಗಳು ಮುಂದಾಗಿದ್ದವು. ಬಳಿಕ 1:10 ರ ಅನುಪಾತದಂತೆ ಪರಿಶೀಲನಾ ಪಟ್ಟಿ ಪ್ರಕಟಿಸಿ ಮೂಲ ದಾಖಲಾತಿಗಳ ಪರಿಶೀಲನೆಗೆ ಕರೆ ನೀಡಲಾಯಿತು. ಅಷ್ಟರಲ್ಲಿ ಕರೊನಾ ಬಂದಿದ್ದರಿಂದ ನೇಮಕಾತಿಯನ್ನು ತಾತ್ಕಾಲಿಕವಾಗಿ ತಡೆಹಿಡಿಯಲಾಯಿತು. ಕರೊನಾದಿಂದ ಉಂಟಾದ ಆರ್ಥಿಕ ನಷ್ಟದಿಂದ ಜುಲೈನಲ್ಲಿ ನೇಮಕಾತಿ ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಯಿತು. ಇವತ್ತು, ನಾಳೆ ಪ್ರಕ್ರಿಯೆ ಪುನರಾರಂಭವಾಗುವ ನಿರೀಕ್ಷೆಯಲ್ಲಿರುವ ನಿರುದ್ಯೋಗಿಗಳು ಪ್ರತಿನಿತ್ಯ ಜಿಲ್ಲಾಧಿಕಾರಿಗಳ ಕಚೇರಿ ಎಡತಾಕುತ್ತಲೇ ಇದ್ದಾರೆ. ಕರೊನಾ ಮೊದಲ, ಎರಡನೇ ಅಲೆ ಬಳಿಕ ಈಗ 3ನೇ ಅಲೆ ಆರಂಭವಾಗಿ ಅದರ ಆರ್ಭಟವು ತಣ್ಣಗಾದರೂ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳಿಸುವ ಇಚ್ಛಾಶಕ್ತಿಯನ್ನು ಜಿಲ್ಲಾಧಿಕಾರಿಗಳು ತೋರದೇ ಇರುವುದು ಉದ್ಯೋಗಾಂಕ್ಷಿಗಳ ಭವಿಷ್ಯದ ಮೇಲೆ ಕಾಮೋಡ ಕವಿದಂತಾಗಿದೆ.

    ಕರೊನಾ ಕಾರಣದಿಂದ ಸರ್ಕಾರ ಗ್ರಾಮಲೆಕ್ಕಿಗರ ಹುದ್ದೆ ಭರ್ತಿ ತಡೆ ಹಿಡಿದಿದೆ. ನಮ್ಮ ಜಿಲ್ಲೆಯಲ್ಲಿ ಹುದ್ದೆಗಳ ಭರ್ತಿ ಪ್ರಕ್ರಿಯೆ ಬಹುತೇಕ ಪೂರ್ಣಗೊಂಡಿದ್ದು, ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ಪತ್ರಗಳನ್ನು ನೀಡಬೇಕಿದೆ. ನಮ್ಮಲ್ಲಿ ಬಹಳಷ್ಟು ವಿಎ ಹುದ್ದೆಗಳು ಖಾಲಿ ಇದ್ದು, ನೇಮಕ ಆದೇಶ ಪತ್ರ ವಿತರಣೆಗೆ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ.

    | ಕವಿತಾ ಎಸ್.ಮನ್ನಿಕೇರಿ ಜಿಲ್ಲಾಧಿಕಾರಿ, ಚಿತ್ರದುರ್ಗ

    ಗ್ರಾಮಲೆಕ್ಕಿಗರ ಹುದ್ದೆಗೆ ಅರ್ಜಿ ಆಹ್ವಾನಿಸಿ 1 ವರ್ಷ 8 ತಿಂಗಳಾಗಿದ್ದು, ಆರಂಭದಲ್ಲಿ 1:10ರ ಅನುಪಾತದಲ್ಲಿ ಪರಿಶೀಲನಾ ಪಟ್ಟಿ ಪ್ರಕಟಿಸಿ ದಾಖಲಾತಿ ಪರಿಶೀಲನೆಗೆ ಸಲ್ಲಿಸಲು ತಿಳಿಸಿದ್ದರು. ಅದಾದ ಬಳಿಕ ಕರೊನಾ ಕಾರಣದಿಂದ ನೇಮಕಾತಿ ಪ್ರಕ್ರಿಯೆ ಸ್ಥಗಿತಗೊಂಡಿದ್ದು ಬೇರೆ ಇಲಾಖೆಗಳು ನೇಮಕಾತಿ ಮಾಡಿಕೊಳ್ಳುತ್ತಿದ್ದರೂ ಕಂದಾಯ ಇಲಾಖೆಯಲ್ಲಿನ್ನು ಕರೊನಾ ನೆಪ ಹೇಳಲಾಗುತ್ತಿದೆ. ಕೆಲಸ ಸಿಗುವ ಭರವಸೆಯೊಂದಿಗೆ ಎದುರು ನೋಡುತ್ತಿರುವ ನಮ್ಮ ಕನಸನ್ನು ಸರ್ಕಾರ ಇನ್ನಾದರೂ ಸಾಕಾರಗೊಳಿಸಬೇಕು.

    | ಉದ್ಯೋಗಾಕಾಂಕ್ಷಿ ತುಮಕೂರು

    ಸಮನ್ಸ್ ನೀಡಲು ಬಂದಿದ್ದ ಪೊಲೀಸ್​, ಅತ್ಯಾಚಾರ ಮಾಡಿದ, ಗರ್ಭಪಾತವನ್ನೂ ಮಾಡಿಸಿದ; ವಿಡಿಯೋ ವೈರಲ್​…

    ಈತ ಇನ್ನು ಬೆಂಗಳೂರಲ್ಲಿ ಕಾಣಿಸಿಕೊಳ್ಳುವಂತಿಲ್ಲ; 10 ವರ್ಷಗಳಿಂದ ಅಬ್ಬರಿಸಿದವ ಇನ್ನೊಂದು ವರ್ಷ ರಾಜಧಾನಿಯಲ್ಲಿ ಇರುವಂತಿಲ್ಲ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts