More

    ಜೋಳ ಖರೀದಿ ಮಿತಿ ಬದಲಿಸಲು ಮುಖ್ಯಮಂತ್ರಿಗೆ ಪತ್ರ ಬರೆದ ಮಸ್ಕಿ ಶಾಸಕ ಆರ್.ಬಸನಗೌಡ ತುರ್ವಿಹಾಳ

    ಸಿಂಧನೂರು: 2021-22 ನೇ ಸಾಲಿನ ಜೋಳ ಖರೀದಿ ಮಿತಿ ಬದಲಾಯಿಸಿ, ರೈತರು ಬೆಳೆದ ಎಲ್ಲ ಜೋಳವನ್ನು ಖರೀದಿ ಕೇಂದ್ರ ಮೂಲಕ ಖರೀದಿಸಲು ಕ್ರಮಕೈಗೊಳ್ಳಬೇಕು ಎಂದು ಮಸ್ಕಿ ಶಾಸಕ ಆರ್.ಬಸನಗೌಡ ತುರ್ವಿಹಾಳ ಸಿಎಂಗೆ ಪತ್ರ ಬರೆದಿದ್ದಾರೆ.

    ಸಿಂಧನೂರು, ಮಸ್ಕಿ ವ್ಯಾಪ್ತಿಯಲ್ಲಿ 40 ಸಾವಿರ ಎಕರೆ ಪ್ರದೇಶದಲ್ಲಿ ರೈತರು ಜೋಳ ಬೆಳೆದಿದ್ದಾರೆ. ಕೆಲವು ಕಡೆಗಳಲ್ಲಿ ಅತಿವೃಷ್ಟಿ ಆಗಿದೆ. ಈಗ ಜೋಳದ ಬೆಳೆ ರೈತರ ಕೈಗೆ ಬಂದಿದ್ದು ವಾರದಲ್ಲಿ ಮಾರುಕಟ್ಟೆಗೆ ಬರಲಿದೆ. ಈಗಾಗಲೇ ಜೋಳ ನೋಂದಣಿ ಪ್ರಕ್ರಿಯೆ ಆರಂಭಿಸಲಾಗಿದೆ. ಜ.22 ರಿಂದ ಖರೀದಿ ಕೇಂದ್ರ ಆರಂಭವಾಗಲಿದೆ. ಆದರೆ ಸರ್ಕಾರ ನಿಗದಿಪಡಿಸಿರುವ ಜೋಳದ ಖರೀದಿಯು ರೈತರಿಗೆ ತೊಂದರೆಯಾಗಿದೆ. ಒಬ್ಬ ರೈತನಿಗೆ ಕೇವಲ 20 ಕ್ವಿಂಟಾಲ್ ಖರೀದಿಸುವ ಬಗ್ಗೆ ಪ್ರಸ್ತಾಪಿಸಲಾಗಿದೆ. ಆದರೆ ಪ್ರತಿ ರೈತರು ಎಕರೆಗೆ 25-30 ಕ್ವಿಂಟಾಲ್ ಜೋಳ ಬೆಳೆದಿದ್ದಾರೆ. ಕಳೆದ ವರ್ಷ ಪ್ರತಿ ಎಕರೆಗೆ 15 ಕ್ವಿಂಟಾಲ್ ಜೋಳ ಖರೀದಿಸಲಾಗಿತ್ತು. ಎಲ್ಲ ರೈತರು ಖರೀದಿ ಕೇಂದ್ರಕ್ಕೆ ಜೋಳವನ್ನು ಕೊಟ್ಟಿದ್ದರೂ, ಈ ಬಾರಿ ಖರೀದಿ ನಿಯಮ ಬದಲಾಯಿಸಿರುವುದು ಸರಿಯಲ್ಲ. ಕೂಡಲೇ ಖರೀದಿ ಮಿತಿ ಬದಲಾಯಿಸಿ, ರೈತರು ಬೆಳೆದ ಎಲ್ಲ ಜೋಳದ ಬೆಳೆ ಖರೀದಿಸಲು ಅಗತ್ಯ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts