More

    ಕೂರ್ಗ್ ಮಾದರಿಯಲ್ಲಿ ಸಂಡೂರು ಪ್ರವಾಸಿ ತಾಣವಾಗಲಿ: ಅರಣ್ಯ ಸಚಿವ ಆನಂದ ಸಿಂಗ್ ಆಶಯ

    ಸಂಡೂರು: ಉತ್ತರ ಕರ್ನಾಟಕದ ಮಲೆನಾಡು ಎಂದು ಖ್ಯಾತಿ ಗಳಿಸಿರುವ ಸಂಡೂರು, ಕೂರ್ಗ್ ಮಾದರಿಯಲ್ಲಿ ಪ್ರವಾಸಿ ತಾಣವಾಗಬೇಕು ಎಂದು ಅರಣ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆನಂದ ಸಿಂಗ್ ಹೇಳಿದರು.

    ಪಟ್ಟಣದ ಬಸ್ ಡಿಪೋ ಆವರಣದಲ್ಲಿ ಜಿಲ್ಲಾಡಳಿತ, ಎನ್‌ಎಂಡಿಸಿ ಸಿಎಸ್‌ಆರ್ ನಿಧಿಯಲ್ಲಿ ಅಮೃತ ವಾಹಿನಿ ಯೋಜನೆಯಡಿ ಸಂಚಾರಿ ಆರೋಗ್ಯ ಘಟಕಗಳನ್ನು ಶನಿವಾರ ಲೋಕಾರ್ಪಣೆಗೊಳಿಸಿ ಮಾತನಾಡಿದರು. ಪಕ್ಕದಲ್ಲೇ ವಿಶ್ವ ಪಾರಂಪರಿಕ ತಾಣ ಹಂಪಿಯಿದ್ದು, ಸಂಡೂರು ಸಹ ಪ್ರವಾಸಿ ತಾಣವಾದರೆ ಪ್ರವಾಸೋದ್ಯಮ ಅಭಿವೃದ್ಧಿ ಜತೆಗೆ ಉದ್ಯೋಗ ಸೃಷ್ಟಿಯಾಗಲಿದೆ. ಮುಂದಿನ ದಿನಗಳಲ್ಲಿ ಹೊಸಪೇಟೆ-ಸಂಡೂರು ಅವಳಿ ನಗರಗಳಾಗಲಿವೆ ಎಂದರು. ಗರ್ಭಿಣಿಯರು, ಬಾಣಂತಿಯರು, ಮಕ್ಕಳು, ವೃದ್ಧರು ಹಳ್ಳಿಗಳಿಂದ ಪಟ್ಟಣದ ಆಸ್ಪತ್ರೆಗೆ ಬರಲು ಸಮಸ್ಯೆಯಾಗುತ್ತದೆ. ಹೀಗಾಗಿ ಅಮೃತ ವಾಹಿನಿ ಯೋಜನೆಯಡಿ ಮೊಬೈಲ್ ಮೆಡಿಕಲ್ ಯೂನಿಟ್ ಆರಂಭಿಸಿದ್ದು, ಈ ವಾಹನ ಹಳ್ಳಿ-ಹಳ್ಳಿಗೆ ತೆರಳಿ ಆರೋಗ್ಯ ಸೇವೆ ಒದಗಿಸಲಿದೆ ಎಂದರು.

    ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಮಾತನಾಡಿ, ಒಟ್ಟು 10 ಸಂಚಾರಿ ಆರೋಗ್ಯ ಘಟಕಗಳು ನಿಗದಿತ ದಿನಗಳಂದು ಆಯಾ ಗ್ರಾಮಗಳಿಗೆ ತೆರಳಿ ಸೇವೆ ನೀಡಲಿವೆ. ಇದರಲ್ಲಿ ವೈದ್ಯ, ನರ್ಸ್ ಮತ್ತು ಔಷಧಗಳಿರುತ್ತವೆ. ಜಿಲ್ಲೆಯ ಎಲ್ಲ ಪಿಎಚ್‌ಸಿಗಳ ಉನ್ನತೀಕರಣ ಮಾಡಲಾಗುವುದು. ಅದಕ್ಕಾಗಿ 18 ಆಂಬುಲೆನ್ಸ್ ಖರೀದಿ ಪ್ರಕ್ರಿಯೆ ನಡೆದಿದೆ ಎಂದು ತಿಳಿಸಿದರು.

    ಸಂಡೂರು ತಾಲೂಕಿನ ಬಡ ಮಕ್ಕಳಿಗೆ ಎಲ್‌ಕೆಜಿಯಿಂದ ಪಿಜಿವರೆಗೆ ಉಚಿತ ಶಿಕ್ಷಣ ನೀಡುವ ಗುರಿ ಹೊಂದಲಾಗಿದೆ. ಎಸ್ಸೆಸ್ಸೆಲ್ಸಿ-ಪಿಯುಸಿ ಓದಿ ಮನೆಯಲ್ಲಿ ಉಳಿದಿರುವ ತಾಲೂಕಿನ 3800 ಯುವಜನತೆಗೆ ಕೌಶಲಾಭಿವೃದ್ಧಿ ತರಬೇತಿ ನೀಡಿ ಸ್ವಯಂ ಉದ್ಯೋಗಾವಕಾಶ ಕಲ್ಪಿಸಬೇಕು.
    | ಇ.ತುಕಾರಾಮ್ ಶಾಸಕ, ಸಂಡೂರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts