More

    ನೆಮ್ಮದಿಯ ಬದುಕಿಗೆ ಧರ್ಮ ಪಾಲನೆ ಅಗತ್ಯ

    ಬೈಲಹೊಂಗಲ: ಶಾಂತಿ, ನೆಮ್ಮದಿಯ ಬದುಕಿಗೆ ಧರ್ಮ ಪಾಲನೆ ಅಗತ್ಯವಿದೆ. ಅದನ್ನರಿತು ಬಾಳಬೇಕು ಎಂದು ಶಾಖಾ ಮೂರುಸಾವಿರಮಠದ ಪೀಠಾಧಿಪತಿ ಪ್ರಭುನೀಲಕಂಠ ಸ್ವಾಮೀಜಿ ಹೇಳಿದ್ದಾರೆ.

    ಪಟ್ಟಣದ ರಾಯಣ್ಣ ವೃತ್ತದಲ್ಲಿ ವೀರಶೈವ ಲಿಂಗಾಯತ ಸಮುದಾಯದಿಂದ ಸೋಮವಾರ ನಡೆದ ಜಗದ್ಗುರು ರೇಣುಕಾಚಾರ್ಯ ಜಯಂತ್ಯುತ್ಸವದಲ್ಲಿ ರೇಣುಕಾಚಾರ್ಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು.

    ಸಮಾಜದಲ್ಲಿ ಸರ್ವರ ಬಾಳಿಗೆ ಆಚಾರ್ಯರು, ಋಷಿಮುನಿಗಳು, ಸಂತರು, ಶರಣರು ಕೊಟ್ಟ ಕೊಡುಗೆ ಅಪಾರ. ಸನಾತನ ಹಿಂದು ಧರ್ಮಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಜಗದ್ಗುರು ರೇಣುಕಾಚಾರ್ಯರು ಸಿದ್ಧಾಂತ ಶಿಖಾಮಣಿಯನ್ನು ಜನರಿಗೆ ಬೋಧಿಸಿದ್ದಲ್ಲದೆ ಸಮಾನತೆಯಿಂದ ಬದುಕುವ ಸಂದೇಶ ನೀಡಿದ್ದಾರೆ ಎಂದರು.

    ಡಾ. ಮಹಾಂತಯ್ಯಶಾಸ್ತ್ರಿ ಆರಾದ್ರಿಮಠ ಮಾತನಾಡಿ, ವೀರಶೈವ ಲಿಂಗಾಯತ ಧರ್ಮದ ಪೂರ್ವಾಚಾರ್ಯರ ಜಯಂತಿ ಮಹೋತ್ಸವ ಆಚರಿಸುವ ಜತೆಗೆ ಸಮಾಜದ ಬಲವರ್ಧನೆಗೆ ಒಲ್ಲರೂ ಒಗ್ಗಟ್ಟಾಗಬೇಕಿದೆ ಎಂದರು. ಸಮಾಜ ಮುಖಂಡ ಪ್ರಮೋದಕುಮಾರ ವಕ್ಕುಂದಮಠ ಅಧ್ಯಕ್ಷತೆ ವಹಿಸಿದ್ದರು. ಸೋಮನಾಥ ಸೊಪ್ಪಿಮಠ, ಸಿ.ಕೆ. ಯರಗಟ್ಟಿಮಠ, ಮಲ್ಲಿಕಾರ್ಜುನ ವಕ್ಕುಂದಮಠ, ಶಿವು ಶೀಲಯ್ಯನವರಮಠ, ದಯಾನಂದ ಮುಪ್ಪಯನವರಮಠ, ವಿ.ಆರ್. ಹಿರೇಮಠ, ಸಿ.ಜಿ. ಅಷ್ಟಗಿಮಠ, ಎಂ.ವಿ.ಸಾಲಿಮಠ, ಜಿ.ಕೆ. ಮುನವಳ್ಳಿ, ಬಿ.ಜಿ. ಹಿರೇಮಠ, ಎಸ್.ವಿ. ತೋರಗಲ್ಲಮಠ, ಬಸವರಾಜ ಸಾಲಿಮಠ, ಮಹಾಂತೇಶ ಖರ್ಜಗಿಮಠ, ಡಾ. ಹಿರೇಮಠ, ದಯಾನಂದ ಚಿಕ್ಕಮಠ, ಗಂಗಾಧರ ಸಾಲಿಮಠ, ಎಸ್.ಬಿ. ಬೂದಯ್ಯನವರಮಠ, ಸಿದ್ದಯ್ಯ ಹಿರೇಮಠ, ಮಲ್ಲಿಕಾರ್ಜುನ ಏಣಗಿಮಠ, ಬಸವರಾಜ ಪುರಾಣಿಕಮಠ ಇತರರು ಇದ್ದರು. ಸಾರ್ವಜನಿಕರಿಗೆ ಪ್ರಸಾದ ವಿತರಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts