More

    ಅಡಕೆ ಗಿಡ ಕಡಿದ ಆರ್​ಎಫ್​ಒ ವಿರುದ್ಧ ಕ್ರಮಕ್ಕೆ ಸಂಕ್ರಾಂತಿ ಗಡುವು

    ತೀರ್ಥಹಳ್ಳಿ: ಬೀಸು ಗ್ರಾಮದಲ್ಲಿ ಅಡಕೆ ಗಿಡಗಳನ್ನು ಕಡಿದ ಅರಣ್ಯಾಧಿಕಾರಿಯ ವಿರá-ದ್ಧ ಜ.15ರ ಒಳಗೆ ಕ್ರಮ ಜರುಗಿಸಬೇಕು. ಇಲ್ಲವಾದಲ್ಲಿ ಮುಂದಿನ ತೀರ್ವನವನ್ನು ನಾವೇ ತೆಗೆದುಕೊಳ್ಳಬೇಕಾಗುತ್ತದೆ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಹೇಳಿದರು.

    ಡಿ.19ರಂದು ಬೀಸು ಗ್ರಾಮದ ಸ.ನಂ.21ರಲ್ಲಿ ನೆಡಲಾಗಿದ್ದ ಅಡಕೆ ಗಿಡಗಳನ್ನು ಕಡಿದ ಪ್ರಕರಣವನ್ನು ಖಂಡಿಸಿ ಕಾಂಗ್ರೆಸ್ ಪಕ್ಷದ ವತಿಯಿಂದ ಆಯೋಜಿಸಲಾಗಿದ್ದ ಪಾದಯಾತ್ರೆಯ ನೇತೃತ್ವ ವಹಿಸಿ ನಂತರ ಪಟ್ಟಣದ ಅರಣ್ಯ ಇಲಾಖೆ ಕಚೇರಿ ಎದುರು ನಡೆದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿ, ಅರಣ್ಯ ಇಲಖೆಯವರು ಅಡಕೆ ಗಿಡ ಕಡಿದ ಜಾಗದಲ್ಲೇ ಕಾಂಗ್ರೆಸ್ ಪಕ್ಷದ ವತಿಯಿಂದ ಶ್ರಮದಾನ ನಡೆಸಿ ಅಡಕೆ ಗಿಡಗಳನ್ನು ನೆಡುತ್ತೇವೆ. ಮತ್ತು ಅಗಳು ತೆಗೆದಿರುವ ಜಾಗದಲ್ಲಿ ಕಾಡು ಜಾತಿಯ ಗಿಡಗಳನ್ನೂ ನೆಡುತ್ತೇವೆ ಎಂದು ಜಿಲ್ಲಾ ಅರಣ್ಯಾಕಾರಿಗಳಿಗೂ ತಿಳಿಸಿರುವುದಾಗಿ ಹೇಳಿದರು.

    ಅಡಕೆ ಗಿಡ ನೆಟ್ಟ ಜಾಗವನ್ನು ರಂಜನ್​ಕುಮಾರ್ ಕುಟುಂಬ ಹತ್ತಾರು ವರ್ಷಗಳ ಹಿಂದಿನಿಂದಲೇ ರೂಡಿಸಿಕೊಂಡು ಬಂದಿದ್ದರು. ಇದೇ ಗ್ರಾಮದಲ್ಲಿ ರಾಜಶೇಕರ್ ಎಂಬುವವರು 10 ಎಕರೆ ಅರಣ್ಯ ಭೂಮಿ ಸೇರಿ 20 ಎಕರೆ ಒತ್ತುವರಿ ಮಾಡಿದ್ದಾರೆ. ರಂಜನ್ ದಾಯಾದಿಗಳೂ 15 ಎಕರೆಗೂ ಮಿಕ್ಕಿ ಒತ್ತುವರಿ ಮಾಡಿಕೊಂಡಿದ್ದಾರೆ. ಆದರೆ ಇವರೆಲ್ಲಾ ಬಿಜೆಪಿ ಪಕ್ಷದ ಬೆಂಬಲಿಗರು ಎಂಬ ಕಾರಣಕ್ಕೆ ಮೌನ ವಹಿಸಲಾಗಿದೆ. ರಂಜನ್ ಪತ್ನಿ ಕಾಂಗ್ರೆಸ್ ಪಕ್ಷದವರು ಎಂಬ ಕಾರಣಕ್ಕೆ ಅಕಾರಿಗಳನ್ನು ಬಳಸಿ ಈ ದೌರ್ಜನ್ಯವನ್ನು ಎಸಗಲಾಗಿದೆ. 99% ರೈತರು ಅಲ್ಪಸ್ವಲ್ಪವಾದರೂ ಬಗರ್​ಹುಕುಂ ಮಾಡಿರುತ್ತಾರೆ ಎಲ್ಲವನ್ನೂ ತೆರವುಗೊಳಿಸುತ್ತಾರೆಯೇ ಎಂದೂ ಪ್ರಶ್ನಿಸಿದರು.

    ಘಟನೆ ನಡೆದ ದಿನ ಶಾಸಕರು ಊರಿನಲ್ಲಿಯೇ ಇದ್ದರು. ಚುನಾವಣೆಯ ದೃಷ್ಟಿಯಿಂದ ಸದರಿ ಅಕಾರಿಯ ವಿರುದ್ದ ಕ್ರಮ ಜರುಗಿಸಲು ಸಿಎಂ ಜೊತೆ ಮಾತನಾಡಿದ್ದೇನೆ ಎಂಬುದು ಕೇವಲ ಜನರ ಕಣ್ಣೊರೆಸುವ ತಂತ್ರಗಾರಿಕೆಯಾಗಿತ್ತು. ನಮ್ಮ ಅಭ್ಯರ್ಥಿಯನ್ನು ಚುನಾವಣಾ ಕಣದಿಂದ ಹಿಮ್ಮೆಟ್ಟಿಸುವುದು ಅವರ ಉದ್ದೇಶವಾಗಿತ್ತು. ಒಂದೊಮ್ಮೆ ತೆರವು ಮಾಡಬೇಕಿದ್ದರೆ ಎರಡು ದಿನ ತಡೆಯಲು ಸಾಧ್ಯ ಇರಲಿಲ್ಲವೇ ಎಂದರಲ್ಲದೇ 10 ಲಕ್ಷ ಹಣ ನೀಡಿ ಇಲ್ಲಿಗೆ ಬಂದಿರುವ ಸದರಿ ಆರ್​ಎಫ್​ಓ ನಮಗೆ ಒತ್ತಡ ಇತ್ತು ಎಂದು ನನ್ನಲ್ಲಿಯೇ ಹೇಳಿಕೊಂಡಿದ್ದಾರೆ. ಇದು ಬಿಜೆಪಿ ಕಡೆಯಿಂದ ಆಗಿರುವ ಚುನಾವಣಾ ಒತ್ತಡವಾಗಿತ್ತು. ಇದೇ ರೀತಿ ತಾಲೂಕಿನ ಬೇರೆ ಕಡೆಗಳಲ್ಲೂ ನಮ್ಮ ಪಕ್ಷದವರ ಮೇಲೆ ಒತ್ತಡ ಹೇರಲಾಗಿತ್ತು ಎಂದೂ ಆರೋಪಿಸಿದರು.

    ಕಾಂಗ್ರೆಸ್ಸಿನ ತೀರ್ಥಹಳ್ಳಿ ಘಟಕದ ಅದ್ಯಕ್ಷ ಕೆಸ್ತೂರು ಮಂಜುನಾಥ್ ಮಾತನಾಡಿ, ರಾಜ್ಯಕ್ಕೆ ಮಾದರಿಯಾಗಿ 10 ವರ್ಷ ಕಾರ್ಯ ನಿರ್ವಹಿಸಿದ್ದ ಕಿಮ್ಮನೆ ರತ್ನಾಕರ್ ಅವಯ ನಂತರ ಕ್ಷೇತ್ರದಾದ್ಯಂತ ಬಿಜೆಪಿಯೇತರರಿಗೆ ಸದಾ ಕಿರುಕುಳ ನೀಡಲಾಗುತ್ತಿದೆ. ಅಕಾರಿಗಳು ರಾಜಕಾರಣಿಗಳ ಕೈಗೊಂಬೆಗಳಾಗದೇ ನ್ಯಾಯೋಚಿತವಾಗಿ ನಡೆದುಕೊಳ್ಳಬೇಕು ಎಂದರು.

    ಶನಿವಾರ ಬೆಳಿಗ್ಗೆ 8.30 ಕ್ಕೆ ಸರಿಯಾಗಿ ಬೀಸು ಗ್ರಾಮದಲ್ಲಿ ಅಡಕೆ ಗಿಡ ತೆರವುಗೊಳಿಸಿದ ಜಾಗದಿಂದ ಸುಮಾರು 22 ಕಿಮೀ ದೂರದ ಪಾದಯಾತ್ರೆಯನ್ನು ಆರಂಭಿಸಲಾಗಿತ್ತು. ಪಟ್ಟಣಕ್ಕೆ ಆಗಮಿಸುವ ವೇಳೆ ಪಾದಯಾತ್ರೆಯಲ್ಲಿ ನೂರಾರು ಮಂದಿ ಇದ್ದರು. ಅರಣ್ಯ ಇಲಾಖೆ ಕಚೇರಿ ಎದುರು ಆರ್​ಎಫ್​ಓ ಪ್ರತಿಕ್ರತಿಯನ್ನು ದಹನ ಮಾಡಲಾಯ್ತು.

    ಪ್ರತಿಭಟನೆಯಲ್ಲಿ ಜಿಲ್ಲಾ ಕಾಂಗ್ರೆಸ್ ಅದ್ಯಕ್ಷ ಎಚ್.ಎಸ್.ಸುಂದರೇಶ್, ತೀರ್ಥಹಳ್ಳಿ ಗ್ರಾಮಾಂತ್ರ ಘಟಕದ ಅದ್ಯಕ್ಷ ಮುಡುಬಾ ರಾಘವೇಂದ್ರ, ಕೆಪಿಸಿಸಿ ಸದಸ್ಯ ಜಿ.ಎಸ್.ನಾರಾಯಣರಾವ್, ಜಿಪಂ ಸದಸ್ಯೆ ಕಲ್ಪನಾ ಪದ್ಮನಾಭ್, ಮಾಜಿ ಸದಸ್ಯರಾದ ಹಾರೋಗುಳಿಗೆ ಪದ್ಮನಾಭ್, ಪಿ.ವಿ. ಮಹಾಬಲೇಶ್, ಎಪಿಎಂಸಿ ಸದಸ್ಯ ಹಸಿರುಮನೆ ಮಹಾಬಲೇಶ್ ಮುಂತಾದವರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts