More

    ಪ್ರಜಾಪ್ರಭುತದಲ್ಲಿ ಹತಾಶೆ ಭಾವನೆ: ವೀರಪ್ಪ ಮೊಯಿಲಿ

    ಉಡುಪಿ: ದೇಶದಲ್ಲಿ ಅಸಮಧಾನದ ಲಾವಾರಸ ಹರಿಯುತ್ತಿದೆ. ದುರಾದೃಷ್ಟವಶಾತ್​ ಪ್ರಜಾಪ್ರಭುತದಲ್ಲಿ ಹತಾಶೆ ಭಾವನೆ ಮೂಡುತ್ತಿದೆ. ಜ್ವಾಲಾಮುಖಿ ಯಾವಾಗ ಸ್ಫೋಟಗೊಳ್ಳುತ್ತದೆ ಎಂಬುದನ್ನು ಹೇಳಲು ಸಾಧ್ಯವಿಲ್ಲ ಎಂದು ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯಿಲಿ ಹೇಳಿದರು.

    ಕಾಂಗ್ರೆಸ್​ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 20 ಕೋಟಿ ಜನಸಂಖ್ಯೆ ಹೊಂದಿರುವ ಜನಾಂಗವನ್ನು ಬಿಜೆಪಿ ದೂರ ಮಾಡುತ್ತಿದೆ. ಇತ್ತೀಚೆಗೆ ನಾಗಾಲ್ಯಾಂಡ್​ ನಲ್ಲಿ 4 ಲಕ್ಷ ಮಂದಿ ಮತದಾನ ಬಹಿಷ್ಕರಿಸಿದ್ದಾರೆ. 2019ರಲ್ಲಿ ಸರ್ಜಿಕಲ್​ ಸ್ಟ್ರೆ$ಕ್​ ಮೂಲಕ ದೇಶಭಕ್ತಿ ಭಾವನೆ ಪ್ರಚೋದನೆ ಮಾಡಿ ಗೆಲುವು ಸಾಧಿಸಿದ್ದರು. ಅದೆಲ್ಲವೂ ಚುನಾವಣೆಗಾಗಿ ಮಾಡಿದ ನಾಟಕ ಎಂಬುದಾಗಿ ಅಂದಿನ ಜಮ್ಮು ಕಾಶ್ಮೀರ ಮಾಜಿ ರಾಜ್ಯಪಾಲ ಸತ್ಯಪಾಲ್​ ಮಲಿಕ್​ ಹೇಳಿದ್ದಾರೆ. ಆದರೆ ಈ ಬಾರಿ ಇಂಥ ಗಿಮಿಕ್​ ನಡೆಯುವುದಿಲ್ಲ. ಜನ ಎಚ್ಚತ್ತುಕೊಳ್ಳುತ್ತಿದ್ದಾರೆ ಎಂದರು.

    ಒನ್​ ನೇಶನ್​ & ಒನ್​ ಎಲೆಕ್ಷನ್​ ಅಸಾಧ್ಯ
    2004, 2009, 2014ರಲ್ಲಿ 20 ದಿನದಲ್ಲಿ ಲೋಕಸಭಾ ಚುನಾವಣೆ ಮುಗಿದಿತ್ತು. ಈಗ 60 ದಿನ ತೆಗೆದುಕೊಂಡಿದೆ. ಇನ್ನು ಒನ್​ ನೇಶನ್​ & ಒನ್​ ಎಲೆಕ್ಷನ್​ ಮೋದಿ ಜಾರಿಗೊಳಿಸಿದರೆ ಗ್ರಾಪಂ ನಿಂದ ಪಾರ್ಲಿಮೆಂಟ್​ವರೆಗೆ ಚುನಾವಣೆಗೆ 1 ವರ್ಷವೇ ಬೇಕಾಗಬಹುದು. ಮೋದಿಯವರು ರಾಷ್ಟ್ರದ ಮೇಲೆ ವೈಯಕ್ತಿಕ ಅಭಿಪ್ರಾಯ ಹೇರುತ್ತಿದ್ದಾರೆ. ಯುಪಿಎ ಸರ್ಕಾರದ ಅವಧಿಯಲ್ಲಿ 12 ಕೋಟಿ ಗ್ರಾಹಕರಿಗೆ ಗ್ಯಾಸ್​ ಸಬ್ಸಿಡಿ ನೀಡಲಾಗುತ್ತಿತ್ತು. ಪ್ರಸ್ತುತ ಗ್ಯಾಸ್​ ಸಬ್ಸಿಡಿಯನ್ನು ರದ್ದುಪಡಿಸಲಾಗಿದೆ. 15ನೇ ಹಣಕಾಸು ಆಯೋಗದ ಶಿಾರಸ್ಸಿನಂತೆ 15 ಸಾವಿರ ಕೋಟಿ ರೂ. ಕರ್ನಾಟಕಕ್ಕೆ ಬರಬೇಕು. ಅದನ್ನು ನೀಡದೆ ಅನ್ಯಾಯ ಮಾಡಲಾಗುತ್ತಿದೆ. ಬಿಜೆಪಿ ಈ ಬಾರಿ 150 ರಿಂದ 180 ಸ್ಥಾನ ಮಾತ್ರ ಗಳಿಸಲಿದೆ. ರಾಜ್ಯದಲ್ಲಿ ಈ ಹಿಂದೆ 28 ಸ್ಥಾನ ಕಾಂಗ್ರೆಸ್​ ಗೆದ್ದಿರುವ ಇತಿಹಾಸವಿದ್ದು, ಇದು ಪುನರಾವರ್ತನೆಯಾದರೂ ಆಶ್ಚರ್ಯವಿಲ್ಲ ಎಂದರು.

    ಜನಗಣತಿಯೇ ಮಾಡಿಲ್ಲ
    ಯುಪಿಎ ಸರ್ಕಾರದ ಆಡಳಿತಾವಧಿ ಕೊನೆಯಲ್ಲಿ ಮೀನುಗಾರರನ್ನು ಕೆಟಗರಿ 1 ಮೀಸಲಾತಿಗೆ ಸೇರಿಸಲು ಕ್ಯಾಬಿನೆಟ್​ ಮುಂದೆ ಪ್ರಸ್ತಾವನೆ ಮಂಡಿಸಲಾಗಿತ್ತು. ಆದರೆ ಜನಗಣತಿ ವರದಿ ಲಭ್ಯವಿಲ್ಲದೆ ವಿಳಂಬವಾಗಿತ್ತು. ಎನ್​ ಡಿ ಎ ಸರ್ಕಾರ ಅಧಿಕಾರಕ್ಕೆ ಬಂದು 10 ವರ್ಷವಾದರೂ ಮೀನುಗಾರರಿಗೆ ಮೀಸಲಾತಿ ನೀಡಿಲ್ಲ. ಕಳೆದ 182 ವರ್ಷಗಳಿಂದ ಪ್ರತಿ 10 ವರ್ಷಕ್ಕೊಮ್ಮೆ ದೇಶದಲ್ಲಿ ಜನಗಣತಿ ನಡೆದಿದೆ. ಮೊದಲ ಬಾರಿಗೆ ಎನ್​ ಡಿ ಎ ಸರ್ಕಾರ ಜನಗಣತಿ ಮಾಡಿಲ್ಲ ಎಂದು ಆರೋಪಿಸಿದರು.

    ನಟ ಶಿವರಾಜ್​ ಕುಮಾರ್​, ಶಿವಮೊಗ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್​ ಅಭ್ಯರ್ಥಿ ಗೀತಾ ಶಿವಕುಮಾರ್​, ಮಾಜಿ ಶಾಸಕ ಗೋಪಾಲ ಪೂಜಾರಿ, ಮಾಜಿ ಸಚಿವ ವಿಜಯಕುಮಾರ್​ ಸೊರಕೆ, ಜಿಲ್ಲಾಧ್ಯಕ್ಷ ಅಶೋಕ್​ ಕುಮಾರ್​ ಕೊಡವೂರು, ಕಾರ್ಯಾಧ್ಯಕ್ಷ ಕಿಶನ್​ ಹೆಗ್ಡೆ ಕೊಳ್ಕೆಬೈಲು, ಮುಖಂಡರಾದ ಎಂ.ಎ. ಗೂರ್​, ಉದಯ್​ ಶೆಟ್ಟಿ, ಪ್ರಸಾದ್​ ರಾಜ್​ ಕಾಂಚನ್​, ಭಾಸ್ಕರ ರಾವ್​ ಕಿದಿಯೂರು, ಪಿ.ಆರ್​. ರಾಜು ಮೊದಲಾದವರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts