More

    ಗುತ್ತಲ ಪಪಂನಲ್ಲಿ ಕಾಂಗ್ರೆಸ್​ಗೆ ಅಧಿಕಾರ ನಿಶ್ಚಿತ

    ಗುತ್ತಲ: ಕೇವಲ 8 ತಿಂಗಳು ಅವಧಿ ಬಾಕಿ ಇರುವ ಇಲ್ಲಿನ ಪಟ್ಟಣ ಪಂಚಾಯಿತಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ನಿಗದಿಯಾಗಿದ್ದು, ಮತ್ತೊಮ್ಮೆ ಕಾಂಗ್ರೆಸ್ ಅಧಿಕಾರ ಹಿಡಿಯವುದು ಬಹುತೇಕ ಖಚಿತವಾಗಿದೆ.

    ಪಟ್ಟಣ ಪಂಚಾಯಿತಿ ಮೊದಲ ಅವಧಿ ಮುಗಿದು 22 ತಿಂಗಳ ಬಳಿಕ ಎರಡನೇ ಅವಧಿಯ ಮೀಸಲಾತಿ ಪ್ರಕಟವಾಗಿದೆ. ಇದರ ಬೆನ್ನಲ್ಲೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನದ ಚುನಾವಣೆಗೆ ತಹಸೀಲ್ದಾರ್ ಅವರನ್ನು ಚುನಾವಣಾಧಿಕಾರಿಯನ್ನಾಗಿ ನೇಮಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

    ಪಪಂನ 18 ಸದಸ್ಯರಲ್ಲಿ 12 ಕಾಂಗ್ರೆಸ್, 4 ಬಿಜೆಪಿ, 2 ಪಕ್ಷೇತರ ಸದಸ್ಯರಿದ್ದಾರೆ. ಅಧ್ಯಕ್ಷ ಸ್ಥಾನ ಹಿಂದುಳಿದ ಅ ವರ್ಗದ ಮಹಿಳೆಗೆ ಮೀಸಲಾಗಿದೆ. 18 ಸದಸ್ಯರಲ್ಲಿ ಕೇವಲ ಇಬ್ಬರು ಹಿಂದುಳಿದ ಅ ವರ್ಗದ ಮಹಿಳೆ ಮೀಸಲಿನಲ್ಲಿ ಆಯ್ಕೆಯಾಗಿದ್ದರು. ಇದರಲ್ಲಿ 1ನೇ ವಾರ್ಡ್​ನ ಕಾಂಗ್ರೆಸ್ ಸದಸ್ಯೆ ದುರ್ಗಮ್ಮ ಮರಡಿ 2 ತಿಂಗಳ ಹಿಂದೆ ಅನಾರೋಗ್ಯದಿಂದ ಮೃತಪಟ್ಟಿದ್ದಾರೆ. ಇನ್ನೋರ್ವ ಕಾಂಗ್ರೆಸ್ ಸದಸ್ಯೆ 7ನೇ ವಾರ್ಡ್​ನ ಹಸ್ಮತಬಿ ರಿತ್ತಿ ಅವರಿಗೆ ಅಧ್ಯಕ್ಷ ಸ್ಥಾನ ಅನಾಯಾಸವಾಗಿ ಒಲಿಯಲಿದೆ.

    ಉಪಾಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿ ಮಹಿಳೆಗೆ ಮೀಸಲಾಗಿದೆ. ಕಾಂಗ್ರೆಸ್​ನವರಾದ 3ನೇ ವಾರ್ಡ್​ನ ಸದಸ್ಯೆ ಅನ್ನಪೂರ್ಣ ಬಂಡಿವಡ್ಡರ ಹಾಗೂ 18ನೇ ವಾರ್ಡ್​ನ ಸವಿತಾ ಲಮಾಣಿ ಅರ್ಹರು. ಈ ಇಬ್ಬರೂ ಈಗಾಗಲೇ ಅಧ್ಯಕ್ಷರಾಗಿ ಅಧಿಕಾರ ಅನುಭವಿಸಿದ್ದಾರೆ. ಈ ಇಬ್ಬರಲ್ಲಿ ಒಬ್ಬರು ಹುದ್ದೆಗೇರುವುದು ಅನಿವಾರ್ಯ.

    ಪಟ್ಟಣ ಪಂಚಾಯಿತಿಗೆ ಎರಡೆರಡು ಬಾರಿ ಮೀಸಲಾತಿ ಬದಲಾಗಿ 3ನೇ ಬಾರಿಗೆ ಅಂತಿಮವಾಗಿದೆ. ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನದ ಚುನಾವಣೆ ದಿನಾಂಕ ಅ. 12ರ ನಂತರ ನಿಗದಿಯಾಗುವ ಸಾಧ್ಯತೆಯಿದೆ. ಒಟ್ಟಿನಲ್ಲಿ 22 ತಿಂಗಳು ವನವಾಸದ ನಂತರ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಲಿದೆ. ಅತ್ಯಂತ ಕಡಿಮೆ ಅವಧಿಯವರೆಗೆ ಮಾತ್ರ ಅಧಿಕಾರ ಅನುಭವಿಸುವ ಅನಿವಾರ್ಯತೆ ಎದುರಾಗಿದೆ.

    ಸುಮಾರು 22 ತಿಂಗಳು ಕಾಲ ಆಡಳಿತ ಮಂಡಳಿ ಅಧಿಕಾರ ಇರಲಿಲ್ಲ. ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನ ಮೀಸಲಾತಿ ಗೊಂದಲದಿಂದ 22 ತಿಂಗಳ ಕಾಲ ಹೆಸರಿಗಷ್ಟೇ ಸದಸ್ಯತ್ವ ಇತ್ತು. ಕಾರಣ ಈ 22 ತಿಂಗಳ ಅವಧಿಯನ್ನು ನಮಗೆ ಮುಂದೆ ಕಲ್ಪಿಸಿಕೊಡುವ ಬಗ್ಗೆ ರಾಜ್ಯ ಸರ್ಕಾರ ಚಿಂತಿಸಬೇಕಿದೆ.

    | ಗುಡ್ಡಪ್ಪ ಗೊರವರ, ಪ.ಪಂ. ಸದಸ್ಯ ಗುತ್ತಲ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts