More

    ರಾಹುಲ್ ಗಾಂಧಿ ಮೇಲೆ ಕಾಂಗ್ರೆಸ್‌ಗೇ ವಿಶ್ವಾಸವಿಲ್ಲ: ಅರುಣ್

    ಶಿವಮೊಗ್ಗ: ದೇಶದ ಆಂತರಿಕ ಸುರಕ್ಷತೆ, ಆರ್ಥಿಕ ವ್ಯವಸ್ಥೆ, ಅಂತ್ಯೋದಯ ಬಗ್ಗೆ ಪ್ರಚಾರದ ವೇಳೆ ಬಿಜೆಪಿ ಪ್ರಸ್ತಾಪ ಮಾಡುತ್ತಿದೆ. ಆದರೆ ಕಾಂಗ್ರೆಸ್ ಲೋಕಸಭೆ ಚುನಾವಣೆಯನ್ನು ಸ್ಥಳೀಯ ಸಂಸ್ಥೆ ಚುನಾವಣೆ ಎಂದು ಭಾವಿಸಿದಂತಿದೆ. ಹೀಗಾಗಿ ಪ್ರಾದೇಶಿಕ ಸಂಗತಿಗಳ ಬಗ್ಗೆ ಚರ್ಚೆ ಮಾಡುತ್ತಿದೆ ಎಂದು ಬಿಜೆಪಿ ರಾಜ್ಯ ಕಾರ್ಯದರ್ಶಿ ಡಿ.ಎಸ್.ಅರುಣ್ ಲೇವಡಿ ಮಾಡಿದರು.

    ಕಾಂಗ್ರೆಸ್‌ನವರಿಗೆ ದೇಶದ ವಿಷಯಕ್ಕಿಂತ ಪ್ರಾದೇಶಿಕ ವಿಚಾರಗಳೇ ಮುಖ್ಯವಾಗಿವೆ. ರಾಹುಲ್ ಗಾಂಧಿ ಬಗ್ಗೆ ಯಾರಿಗೂ ವಿಶ್ವಾಸವೇ ಇಲ್ಲದಂತಾಗಿದೆ. ಅಲ್ಲಿ ಸಮರ್ಪಕ ನಾಯಕತ್ವವೇ ಇಲ್ಲ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಟೀಕಿಸಿದರು.
    ಉದ್ಯೋಗ ಸೃಷ್ಟಿಯಾಗುತ್ತಿಲ್ಲ ಎಂದು ಕಾಂಗ್ರೆಸ್‌ನ ಪ್ರಮುಖ ಆರೋಪ. ಆದರೆ ಅಂಕಿ ಅಂಶಗಳ ಪ್ರಕಾರ 10 ವರ್ಷಗಳ ಹಿಂದೆ 5 ಕೋಟಿ ಉದ್ಯಮಗಳಿದ್ದವು. ಈಗ ಅದರ ಸಂಖ್ಯೆ. 6.30 ಕೋಟಿಗೆ ತಲುಪಿದೆ. ಇದರಿಂದ ಕನಿಷ್ಠ ಆರು ಕೋಟಿ ಜನರಿಗೆ ಉದ್ಯೋಗ ದೊರೆತಿದೆ ಎಂದು ವಿವರಿಸಿದರು.
    ಪ್ರಬಲ ರಾಷ್ಟ್ರವನ್ನಾಗಿ ರೂಪಿಸಲು ಬಿಜೆಪಿ ಇನ್ನಿಲ್ಲದ ಪ್ರಯತ್ನ ಮಾಡಿದೆ. ವಿಶ್ವದ 5ನೇ ದೊಡ್ಡ ಆರ್ಥಿಕ ಶಕ್ತಿಯಾಗಿ ದೇಶ ಬೆಳೆದಿದೆ. ಕೃಷಿ, ವ್ಯಾಪಾರ, ಉದ್ಯೋಗಕ್ಕೆ ಆದ್ಯತೆ ನೀಡಲಾಗಿದೆ. ದೇಶದ ಆಂತರಿಕ ಸುರಕ್ಷತೆ ಉತ್ತಮವಾಗಿದೆ. ರಾಜ್ಯ ಸರ್ಕಾರದ ಬೋಗಸ್ ಬಜೆಟ್‌ನಂತೆ ಕೇಂದ್ರ ಸರ್ಕಾರ ಬಜೆಟ್ ರೂಪಿಸಿಲ್ಲ ಎಂದು ಹೇಳಿದರು.
    ಸಂಸದ ಬಿ.ವೈ.ರಾಘವೇಂದ್ರ ಸೇರಿ ರಾಜ್ಯದ 27 ಸಂಸದರು ಅವರವರ ಕ್ಷೇತ್ರದಲ್ಲಿ ಅಭಿವೃದ್ಧಿ ಮಾಡಿದ್ದಾರೆ. ಕೇಂದ್ರದಿಂದ ಅನುದಾನವನ್ನೂ ತಂದಿದ್ದಾರೆ. ಅದರಲ್ಲೂ ಬಿ.ವೈ.ರಾಘವೇಂದ್ರ ಶಿವಮೊಗ್ಗ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಮಾಡಿದ್ದಾರೆ ಎಂದರು.
    ಮಾಜಿ ಎಂಎಲ್‌ಸಿ ಆರ್.ಕೆ.ಸಿದ್ದರಾಮಣ್ಣ, ಬಿಜೆಪಿ ಜಿಲ್ಲಾ ವಕ್ತಾರ ಜ್ಯೋತಿಪ್ರಕಾಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವರಾಜ್, ಮಾಜಿ ಶಾಸಕ ಕೆ.ಜಿ.ಕುಮಾರಸ್ವಾಮಿ, ಪ್ರಮುಖರಾದ ರಮೇಶ್, ಕೆ.ವಿ.ಅಣ್ಣಪ್ಪ, ಶರತ್ ಕಲ್ಯಾಣಿ ಸುದ್ದಿಗೋಷ್ಠಿಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts