More

    ಕನ್ನಡಿಗರ ಕೈಗೆ ಚೊಂಬು ನೀಡಿದ ಕಾಂಗ್ರೆಸ್ : ಕುಮಾರಸ್ವಾಮಿ ವ್ಯಂಗ್ಯ

    ಮೈಸೂರು: ‘ಸರ್ಕಾರದ ಖಜಾನೆ ಖಾಲಿಯಾಗಿದೆ, ದಯವಿಟ್ಟು ತುಂಬಿಕೊಡಿ’ ಎಂದು ಕಾಂಗ್ರೆಸ್ ನಾಯಕರು ಜಾಹೀರಾತು ನೀಡುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರ ಬಳಿ ಮನವಿ ಮಾಡುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ವ್ಯಂಗ್ಯವಾ ಡಿದರು.

    ನಗರದಲ್ಲಿ ಶನಿವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕೋವಿಡ್ ಕಾಲದಲ್ಲೂ ರಾಜ್ಯದ ಖಜಾನೆ ಸುಭೀಕ್ಷವಾಗಿತ್ತು. ಕಾಂಗ್ರೆಸ್‌ನ ಅಪಪ್ರಚಾರದ ನಡುವೆಯೂ ಖಜಾನೆಯನ್ನು ಬಿಜೆಪಿ ಉತ್ತಮ ಸ್ಥಿತಿಯಲ್ಲಿ ಇಟ್ಟಿತ್ತು. ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಖಜಾನೆ ಖಾಲಿ ಮಾಡಿ ಕನ್ನಡಿಗರ ಕೈಗೆ ಖಾಲಿ ಚೊಂಬು ನೀಡಿದ್ದಾರೆ. ಆ ಖಾಲಿ ಚೊಂಬನ್ನು ತುಂಬಿಕೊಡಿ ಎಂದು ಮೋದಿ ಅವರಲ್ಲಿ ಕಾಂಗ್ರೆಸ್ ನಾಯಕರು ಕೇಳುತ್ತಿದ್ದಾರೆ ಎಂದರು.

    ಹಾಸನದಲ್ಲಿ ಶುಕ್ರವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಬಿರುಗಾಳಿ ಎಬ್ಬಿಸಿದ್ದಾರೆ ! ಇಂದು ಮಂಡ್ಯ ಕ್ಷೇತ್ರದಲ್ಲಿ ಬಿರುಗಾಳಿ ಎಬ್ಬಿಸಲು ಬಂದಿದ್ದಾರೆ! ಅಯ್ಯೋ ಬಿರುಗಾಳಿ ಎಬ್ಬಿಸಲಿ ಬಿಡಿ. ‘ಸೂರ್ಯ, ಚಂದ್ರ ಇರುವುದು ಎಷ್ಟು ಸತ್ಯವೂ ಕುಮಾರಸ್ವಾಮಿ ಸೋಲುವುದು ಅಷ್ಟೇ ಸತ್ಯ’ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಅಯ್ಯೋ ಪಾಪ, ಫಲಿತಾಂಶ ಬಂದ ದಿನ ಸೂರ್ಯ, ಚಂದ್ರರನ್ನು ಏನು ಮಾಡಬೇ ಕೋ ಗೊತ್ತಾಗುತ್ತಿಲ್ಲ ಎಂದು ವ್ಯಂಗ್ಯವಾಡಿದರು.

    ಕಾಂಗ್ರೆಸ್‌ಗೆ ಜೆಡಿಎಸ್‌ಅನ್ನು ಕಂಡರೆ ಭಯ ಅದಕ್ಕೆ ನಮ್ಮ ವಿರುದ್ಧ ಮಾತನಾಡುತ್ತಿದ್ದಾರೆ. ಕಾಟಾಚಾರಕ್ಕೆ ಬಿಜೆಪಿಯು ಜೆಡಿಎಸ್ ನೊಂದಿಗೆ ಮೈತ್ರಿ ಮಾಡಿಕೊಂಡಿದೆ ಎಂದು ಕಾಂಗ್ರೆಸ್ ನಾಯಕರು ಅಂದುಕೊಂಡಿದ್ದರು. ಆದರೆ, ಬಿಜೆಪಿ ಹಾಗೂ ಜೆಡಿಎಸ್ ಕಾರ್ಯಕರ್ತರ ಹೊಂದಾಣಿಕೆ ತುಂಬಾ ಚೆನ್ನಾಗಿ ಆಗಿದೆ. ಇದು ಕಾಂಗ್ರೆಸ್‌ಗೆ ಭಯ ತರಿಸಿದೆ. ಮಂಡ್ಯದಲ್ಲಿ ಕಾಂಗ್ರೆಸ್ ನಾಯಕರು ನನ್ನನ್ನು ಸೋಲಿಸಲು ಶ್ರಮ ಹಾಕಿ ತಂತ್ರ ಹೆಣೆಯುತ್ತಿದ್ದಾರೆ. ಮಂಡ್ಯದ ಜನರು ನನ್ನನ್ನು ಕಾಪಾಡುವ ಧೈರ್ಯ ತುಂಬಿದ್ದಾರೆ. ಹಾಗಾಗಿ ಕಾಂಗ್ರೆಸ್ ತಂತ್ರಗಳು ಫಲ ಕೊಡುವುದಿಲ್ಲ. ಅಧಿಕಾರದ ದರ್ಪ, ಹಣದ ದರ್ಪ ಮಂಡ್ಯದ ಜನರ ಮುಂದೆ ನಡೆಯಲ್ಲ ಎಂದರು.

    ಮಂಡ್ಯದಲ್ಲಿ ಸಂಸದೆ ಸುಮಲತಾ ಅಂಬರೀಶ್ ಚುನಾವಣಾ ಪ್ರಚಾರ ಕೈಗೊಳ್ಳುವ ವಿಚಾರವಾಗಿ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಸುಮಲತಾ ಬಿಜೆಪಿ ಸೇರಿದ್ದಾರೆ. ಹಾಗಾಗಿ ಬಿಜೆಪಿಯವರು ಎಲ್ಲೆಲ್ಲಿ ಸೂಚಿಸುತ್ತಾರೋ ಅಲ್ಲಲ್ಲಿ ಅವರು ಪ್ರಚಾರ ನಡೆಸುತ್ತಾರೆ. ಚುನಾವಣಾ ಪ್ರಚಾರಕ್ಕೆ ಇನ್ನೂ ನಾಲ್ಕು ದಿನ ಇದ್ದು, ಮಂಡ್ಯದಲ್ಲೂ ಸುಮಲತಾ ಪ್ರಚಾರ ಕೈಗೊಳ್ಳಲು ಬಿಜೆಪಿ ನಾಯಕರು ಸಮಯ ನಿಗದಿ ಮಾಡಬಹುದು ಎಂದರು.

    ನೇಹಾ ಹತ್ಯೆ ವಿಚಾರದಲ್ಲಿ ಕಾಂಗ್ರೆಸ್ ನಡೆದುಕೊಂಡ ರೀತಿಯನ್ನು ನೋಡಿದರೆ ಹಿಂದು ಹೆಣ್ಣು ಮಕ್ಕಳ ಬಗ್ಗೆ ಕಾಂಗ್ರೆಸ್‌ನ ಮನಸ್ಥಿತಿ ಅರ್ಥವಾಗುತ್ತದೆ. ಕಾಂಗ್ರೆಸ್ ಈ ಪ್ರಕರಣದಲ್ಲಿ ಜನರ ಮುಂದೆ ನಗ್ನವಾಗಿದೆ. ಹತ್ಯೆ ಪ್ರಕರಣದ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಬಹಳ ಬೇಜಾವಾಬ್ದಾರಿಯಾಗಿ ಮಾತನಾಡುತ್ತಿದ್ದಾರೆ. ಒಂದು ವರ್ಗದ ಓಲೈಕೆಯಿಂದಲೇ ಈ ರೀತಿ ಘಟನೆಗಳು ರಾಜ್ಯದಲ್ಲಿ ನಡೆಯುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಪ್ರಧಾನಿ ನರೇಂದ್ರ ಮೋದಿ ಪರವಾಗಿ ಹಾಡು ಬರೆದರು ಅಂತ ಯುವಕನ ಮೇಲೆ ಮಾಡಿದ್ದಾರೆ ಅಂದರೆ ಪರಿಸ್ಥಿತಿ ಯಾವ ಹಂತಕ್ಕೆ ಹೋಗಿರಬಹುದು ನೋಡಿ. ಮೊದಲು ಟಿವಿಗಳಲ್ಲಿ ರಾತ್ರಿ ಹತ್ತು ಗಂಟೆ ನಂತರ ಅಫರಾದ ಸುದ್ದಿ ತೋರಿಸುತ್ತಿದ್ದರು. ಇದೀಗ ಬೆಳಗ್ಗಿನಿಂದಲೇ ಅಪರಾಧ ಸುದ್ದಿ ತೋರಿಸುವ ಸ್ಥಿತಿ ಬಂದಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಯಾವ ಸ್ಥಿತಿಗೆ ತಲುಪಿದೆ ಎಂಬುದಕ್ಕೆ ಇದೇ ಸಾಕ್ಷಿ ಎಂದು ಟೀಕಿಸಿದರು.

    ಸುತ್ತೂರು ಮಠಕ್ಕೆ ನಾನು ಭೇಟಿ ನೀಡಿರುವುದಕ್ಕೂ ಈಗ ಕೆಲವರಿಗೆ ಸ್ಪಷ್ಟೀಕರಣ ನೀಡಬೇಕಾದ ಸ್ಥಿತಿ ಬಂದಿದೆ. ಮೈಸೂರಿಗೆ ಬಂದಾ ಗಲೆಲ್ಲ ಸುತ್ತೂರು ಮಠಕ್ಕೆ ಭೇಟಿ ನೀಡುತ್ತೇನೆ. ಮಠವನ್ನು ನಾವು ಎಂದಿಗೂ ರಾಜಕೀಯಕ್ಕೆ ಬಳಸಿಕೊಂಡಿಲ್ಲ. ಇಂದು ನನ್ನೊಂದಿಗೆ ಮಂಡ್ಯದ ಕೆಲವು ಮುಖಂಡರು ಆಗಮಿಸಿದ್ದಾರೆ. ಎಲ್ಲರು ಸ್ವಾಮೀಜಿಯ ಆಶೀರ್ವಾದ ಪಡೆದಿದ್ದೇವೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts