More

    ಕಾಂಗ್ರೆಸ್​ ಹಾಗೂ ಸಿದ್ದರಾಮಯ್ಯಗೆ ರಾಮನ ಶಾಪ ತಟ್ಟಲಿದೆ: ಈಶ್ವರಪ್ಪ

    ವಿಜಯಪುರ: ಗೋವಿನ ಶಾಪದಿಂದ ಕಾಂಗ್ರೆಸ್ ಅಧಿಕಾರ ಕಳೆದುಕೊಂಡಿತು. ಇದೀಗ ರಾಮನ ಮಂದಿರದ ಲೆಕ್ಕ ಕೇಳುವ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್‌ಗೆ ಶಾಪ ತಟ್ಟಲಿದೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ವಾಗ್ದಾಳಿ ನಡೆಸಿದರು.

    ರಾಮನ ಶಾಪದಿಂದಾಗಿ ಕಾಂಗ್ರೆಸ್ ಅಡ್ರೆಸ್ ಇಲ್ಲದಂತಾಗಲಿದೆ. ಈ ಹಿಂದೆ ಅಹಿಂದ ಹೆಸರು ಹೇಳಿಕೊಂಡು ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ಅವರಿಂದ ಯಾರೊಬ್ಬರ ಉದ್ದಾರವೂ ಆಗಲಿಲ್ಲ. ಮುಸ್ಲಿಂರನ್ನು ಸಂತೃಪ್ತಿ ಪಡೆಸಲು ಹಿಂದೂ ಯುವಕರ ಕಗ್ಗೊಲೆಗಳು ಆಗಿವೆ. ಈಗ ರಾಮ ಮಂದಿರದ ಬಗ್ಗೆ ಲೆಕ್ಕ ಕೇಳುವ ಇವರಿಗೆ ರಾಮನ ಶಾಪ ಬಿಡಲ್ಲ ಎಂದು ಗುರುವಾರ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.

    ಹಿಂದುಳಿದವರನ್ನು, ದಲಿತರನ್ನು ಉದ್ದಾರ ಮಾಡುತ್ತೇನೆ ಎಂದು ಅಧಿಕಾರಕ್ಕೆ ಬಂದವರು ಮಾಡಲಿಲ್ಲ. ಹಿಂದುಳಿದ ಹಾಗೂ ದಲಿತರು ಕಾಂಗ್ರೆಸ್ ಹಾಗೂ ಸಿದ್ದರಾಮಯ್ಯ ಅವರನ್ನು ನಂಬಲಿಲ್ಲ. ಚುನಾವಣೆಯಲ್ಲಿ ಅವರ ಕೈ ಬಿಟ್ಟರು. ಚಾಮುಂಡೇಶ್ವರಿಯಲ್ಲಿ ಸೋತರೂ ಸಿದ್ದರಾಮಯ್ಯ ಇನ್ನೂ ಮುಂದಿನ ಮುಖ್ಯಮಂತ್ರಿ ಎನ್ನುತ್ತಾರೆ. ಕಾಂಗ್ರೆಸ್ ಪಕ್ಷದವರೇ ಸಿದ್ದರಾಮಯ್ಯ ಮುಂದಿನ ಸಿಎಂ ಅಭ್ಯರ್ಥಿ ಅಂತಾ ಹೇಳ್ತಿಲ್ಲ. ಡಿಕೆಶಿ ಕೂಡ ಸಿದ್ದರಾಮಯ್ಯ ಮುಂದಿನ ಸಿಎಂ ಅಭ್ಯರ್ಥಿ ಅಂತಾ ಹೇಳ್ತಿಲ್ಲ. ಸತೀಶ ಜಾರಕಿಹೊಳಿ ಹಾಗೂ ಖರ್ಗೆ ‘ಹಿಂದ’ ಸಮಾವೇಶ ನಮ್ಮ ತಲೆಯಲ್ಲೇ ಇಲ್ಲ ಎನ್ನುತ್ತಾರೆ. ಹೀಗಾಗಿ ಸಿದ್ದರಾಮಯ್ಯ ಸಿಎಂ ಸ್ಥಾನದ ಮೇಲೆ ಕಣ್ಣಿಟ್ಟಿರುವ ಸಿದ್ದರಾಮಯ್ಯ ಕನಸು ಮನಸ್ಸಿನಲ್ಲೂ ಮುಖ್ಯಮಂತ್ರಿಯಾಗಲ್ಲ ಎಂದರು.

    ಯತ್ನಾಳಗೆ ಕಿವಿಮಾತು: ಸರ್ಕಾರದಲ್ಲಿ ಯಾವುದೇ ಗೊಂದಲಗಳಿಲ್ಲ. ಎಲ್ಲ ಇಲಾಖೆಗಳು ನಿರೀಕ್ಷೆ ಮೀರಿ ಕೆಲಸ ಮಾಡುತ್ತಿವೆ ಎಂದ ಈಶ್ವರಪ್ಪ, ಶಾಸಕ ಬಸನಗೌಡ ಪಾಟೀಲ ಯತ್ನಾಳ ಹಿಂದೂತ್ವದ ಪ್ರಮುಖ ಶಕ್ತಿ. ಸಿಎಂ ಯಡ್ಡಿಯೂರಪ್ಪ ಹಾಗೂ ಅವರ ಪುತ್ರ ವಿಜಯೇಂದ್ರನ ಮೇಲಿನ ಆರೋಪಗಳ ಬಗ್ಗೆ ಪಕ್ಷದ ಚೌಕಟ್ಟಿನಲ್ಲಿ ಚರ್ಚೆ ಮಾಡಲಿ. ಅದು ಬಿಟ್ಟು ಮಾಧ್ಯಮಗಳ ಮುಂದೆ ಸಾರ್ವಜನಿಕವಾಗಿ ಮಾತನಾಡಬೇಡಿ ಎಂದು ಯತ್ನಾಳಗೆ ಹೇಳಿದ್ದೇನೆ. ಇನ್ನೊಂದು ಬಾರಿ ಹೇಳುತ್ತೇನೆ ಎಂದರು. (ವಿಜಯವಾಣಿ)

    ಮತ್ತೆ ಏರಿತು ಎಲ್​ಪಿಜಿ ಸಿಲಿಂಡರ್​ ದರ! ಒಂದೇ ತಿಂಗಳಲ್ಲಿ 100 ರೂಪಾಯಿ ಏರಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts