More

    ಕನ್ನಡ ಸಾಹಿತ್ಯ ಸವಾಲು ಮೆಟ್ಟಿ ನಿಂತಿದೆ; ರಾಯಚೂರು ವಿವಿ ಕುಲಪತಿ ಡಾ.ಹರೀಶ ರಾಮಸ್ವಾಮಿ ಅಭಿಮತ

    ಮಸ್ಕಿ ತಾಲೂಕು ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ

    ಮಸ್ಕಿ: ಘನಮಠೇಶ್ವರ ಶಿವಯೋಗಿಗಳ ವೇದಿಕೆ: ಕನ್ನಡ ಸಾಹಿತ್ಯ ಎದುರಾದ ಹಲವು ಸವಾಲುಗಳನ್ನು ಮೆಟ್ಟಿನಿಂತು ಅಚಲವಾಗಿ ನಿಂತಿದೆ ಎಂದು ರಾಯಚೂರು ವಿವಿ ಕುಲಪತಿ ಡಾ.ಹರೀಶ ರಾಮಸ್ವಾಮಿ ಹೇಳಿದರು.

    ಪಟ್ಟಣದ ಭ್ರಮರಾಂಬ ದೇವಸ್ಥಾನದ ಸಾನಬಾಳ ರಾಮಣ್ಣ ಮಂಟಪದಲ್ಲಿನ ಘನಮಠೇಶ್ವರ ಶಿವಯೋಗಿಗಳ ವೇದಿಕೆಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ತಾಲೂಕು ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.

    ಮಹಾರಾಷ್ಟ್ರದ ಗಡಿ ಭಾಗಗಳಲ್ಲಿ ಮರಾಠಿ ಮತ್ತು ಕನ್ನಡ ಭಾಷೆ ಹೆಸರಿನಲ್ಲಿ ಗೊಂದಲಗಳು ಜೀವಂತವಾಗಿವೆ. ಆದರೆ, ರಾಯಚೂರು ಗಡಿ ಭಾಗದಲ್ಲಿ ಕನ್ನಡ ಮತ್ತು ತೆಲುಗು ನಡುವೆ ಅಂತಹ ಸಂಘರ್ಷ ಇಲ್ಲ. ಇಲ್ಲಿ ಭಾಷಾ ಸಾಮರಸ್ಯ ಕಂಡು ಬರುತ್ತಿದೆ. ಈ ಸಾಮರಸ್ಯ ಮಹಾರಷ್ಟ್ರದವರಿಗೆ ಮಾದರಿ ಆಗಬೇಕು ಎಂದರು. ಹಿಂದೆ ಗಾಂಧಿನಗರಕ್ಕೂ ಕಾದಂಬರಿಕಾರರಿಗೆ ನಂಟಿತ್ತು. ಅನೇಕ ಕಾದಂಬರಿಗಳು ಸಿನಿಮಾ ಆಗುತ್ತಿದ್ದವು. ಈಗ ಅದು ಕಂಡು ಬರುತ್ತಿಲ್ಲ. ಟಿವಿಯಲ್ಲಿನ ದಾರಾವಾಹಿಗಳು ಕುಟುಂಬ ಒಡೆಯುವ, ಜಗಳ ಹಚ್ಚುವ, ಜನರ ದಾರಿತಪ್ಪಿಸುವ ಸಾಹಿತ್ಯ ಸೃಷ್ಟಿಸುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದರು.

    ಮೈಸೂರು ಭಾಗದಲ್ಲಿ ಕುವೆಂಪು, ಧಾರವಾಡ ಭಾಗದಲ್ಲಿ ಬೇಂದ್ರೆ ಇದ್ದಾರೆ. ಕಲ್ಯಾಣ ಕರ್ನಾಟಕದಲ್ಲಿ ಯಾರಿದ್ದಾರೆಂದು ಅನೇಕ ಸಾಹಿತಿಗಳು ಗೇಲಿ ಮಾಡುತ್ತಿದ್ದರು. ಆದರೆ, ಅವರಿಗೆ ಗೊತ್ತಿಲ್ಲ. ಕುವೆಂಪು, ಬೇಂದ್ರೆ ಬಾಲಕರಿದ್ದಾಗಲೇ ಈ ಭಾಗದಲ್ಲಿ ಆದಿ ಆಮತೆಪ್ಪ, ಸಾನಬಾಳ ರಾಮಣ್ಣ ನಂತ ಹ 18 ಜನ ಮಹಾಕವಿಗಳು ಇದ್ದರು ಎಂದು ಡಾ.ಬಸವರಾಜ ಸಬರದ ಹೇಳೀದರು.

    ಸಂತೆಕೆಲ್ಲೂರಿನ ಗುರುಬಸವ ಮಹಾಸ್ವಾಮಿ, ಮಾಜಿ ಶಾಸಕ ಪ್ರತಾಪಗೌಡ ಪಾಟೀಲ ಕಸಾಪ ತಾಲೂಕು ಅಧ್ಯಕ್ಷ ಘನಸಮಠದಯ್ಯ ಸಾಲಿಮಠ ಮಾತನಾಡಿದರು. ಮಸ್ಕಿಯ ಗಚ್ಚಿನಮಠದ ವರರುದ್ರಮುನಿ ಶಿವಾಚಾರ್ಯರು, ಪುರಸಭೆ ಅಧ್ಯಕ್ಷೆ ವಿಜಯಲಕ್ಷ್ಮೀ ಬಸನಗೌಡ ಪಾಟೀಲ, ಉಪಾಧ್ಯಕ್ಷೆ ಕವಿತಾ ಮಾಟೂರು, ತಾಪಂ ಅಧ್ಯಕ್ಷ ಶಿವಣ್ಣ ವೆಂಕಟಾಪುರ, ಮುಖಂಡರಾದ ಮಾಹದೇವಪ್ಪಗೌಡ ಪಾಟೀಲ, ಜಿಪಂ ಮಾಜಿ ಅಧ್ಯಕ್ಷ ಶ್ರೀಶೈಲಪ್ಪ ಬ್ಯಾಳಿ, ಸಾಹಿತಿ ಮಹಾಂತೇಶ ಮಸ್ಕಿ ಇತರರು ಇದ್ದರು.

    ಸಮ್ಮೇಳನದ ಸರ್ವಾಧ್ಯಕ್ಷ ಶರಭಯ್ಯಸ್ವಾಮಿ ಗಣಾಚಾರ ಅವರನ್ನು ಸಾರೋಟದಲ್ಲಿ ಮೆರವಣಿಗೆಯಲ್ಲಿ ಕರೆತರಲಾಯಿತು. ತಹಸೀಲ್ದಾರ ಬಲರಾಮ ಕಟ್ಟಿಮನಿ ಮೆರವಣಿಗೆಗೆ ಚಾಲನೆ ನೀಡಿದರು. ಮಾಜಿ ಶಾಸಕ ಪ್ರತಾಪಗೌಡ ಪಾಟೀಲ, ತುಂಗಭದ್ರ ಕಾಡಾದ ಮಾಜಿ ಅಧ್ಯಕ್ಷ ಬಸನಗೌಡ ತುರ್ವಿಹಾಳ ಅಧ್ಯಕ್ಷರನ್ನು ಸನ್ಮಾನಿಸಿದರು. ನಂತರ ಮಾತನಾಡಿದ ಸರ್ವಾಧ್ಯಕ್ಷರು, ನಂದವಾಡಗಿ ಏತ ನೀರಾವರಿ ಯೋಜನೆಯಂತೆ 5ಎ ಕಾಲುವೆ ಅನುಷ್ಠಾನ ಮಾಡಿದರೆ ಇಲ್ಲಿನ ನೆಲ ಬಂಗಾರವಾಗುತ್ತದೆ. ಮಸ್ಕಿ, ಉದ್ಬಾಳ, ಸಾನಬಾಳ, ಬುದ್ದಿನ್ನಿ ಗ್ರಾಮಗಳಲ್ಲಿ ಬಂಗಾರದ ನಿಕ್ಷೇಪ ಇದ್ದು, ರಾಜ್ಯ ಸರ್ಕಾರ ಗಣಿಗಾರಿಕೆ ಆರಂಭಿಸಬೇಕು ಎಂದು ಒತ್ತಾಯಿಸಿದರು.

    ಕನ್ನಡ ಸಾಹಿತ್ಯ ಸವಾಲು ಮೆಟ್ಟಿ ನಿಂತಿದೆ; ರಾಯಚೂರು ವಿವಿ ಕುಲಪತಿ ಡಾ.ಹರೀಶ ರಾಮಸ್ವಾಮಿ ಅಭಿಮತ
    ಕನ್ನಡ ಸಾಹಿತ್ಯ ಸವಾಲು ಮೆಟ್ಟಿ ನಿಂತಿದೆ; ರಾಯಚೂರು ವಿವಿ ಕುಲಪತಿ ಡಾ.ಹರೀಶ ರಾಮಸ್ವಾಮಿ ಅಭಿಮತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts