More

    ದೇವಸ್ಥಾನ ಪ್ರವೇಶ ನಿರ್ಬಂಧಿಸಿದ್ದಕ್ಕೆ ಖಂಡನೆ

    ಶಿಗ್ಗಾಂವಿ: ರಾಮನಗರ ಜಿಲ್ಲೆಯ ಚನ್ನಮಾನಹಳ್ಳಿಯಲ್ಲಿ ದಲಿತ ಬಾಲಕಿಗೆ ದೇವಸ್ಥಾನ ಪ್ರವೇಶ ನಿರ್ಬಂಧಿಸಿ, ಜಾತಿ ನಿಂದನೆ ಮಾಡಿದ್ದನ್ನು ಖಂಡಿಸಿ ಕರ್ನಾಟಕ ದಲಿತ ವಿಮೋಚನಾ ತಾಲೂಕು ಸಮಿತಿ ವತಿಯಿಂದ ಪಟ್ಟಣದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿ, ತಹಸೀಲ್ದಾರ್ ಸಂತೋಷ ಹಿರೇಮಠ ಮೂಲಕ ಸಿಎಂಗೆ ಮನವಿ ಸಲ್ಲಿಸಲಾಯಿತು.

    ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳು ರಾಜ್ಯದಲ್ಲಿ ದಿನೇದಿನೇ ಹೆಚ್ಚುತ್ತಿವೆ. ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರು ಯಾವುದೇ ರೀತಿಯ ಕಾನೂನು ಅರಿವು, ಅಸ್ಪೃಶ್ಯತೆ ನಿಮೂಲನೆಗೆ ಜಾಗೃತಿ ಮೂಡಿಸದಿರುವುದರಿಂದ ಮೇಲಿಂದ ಮೇಲೆ ಇಂಥ ಪ್ರಕರಣ ನಡೆಯುತ್ತಿವೆ. ದಲಿತ ಬಾಲಕಿ ತನ್ನ ಮನೆ ಹತ್ತಿರದಲ್ಲಿದ್ದ ಮಾರಮ್ಮನ ದೇವಸ್ಥಾನದ ಬಳಿಯ ನಲ್ಲಿಯ ನೀರಿಗೆ ಹೋದಾಗ ದೇವಸ್ಥಾನದ ಪೂಜಾರಿ ಮತ್ತು ಆತನ ಸಹೋದರಿ ಇಬ್ಬರೂ ಸೇರಿ ಜಾತಿ ನಿಂದನೆ ಮಾಡಿ ಅಪಮಾನ ಮಾಡಿದ್ದಾರೆ. ಇದನ್ನು ಪ್ರಶ್ನಿಸಿದ ಬಾಲಕಿಯ ಚಿಕ್ಕಪ್ಪ ಮತ್ತು ಆತನ ಸ್ನೇಹಿತನ ಮೇಲೂ ಹಲ್ಲೆ ಮಾಡಿದ್ದಾರೆ. ಇವರ ಮೇಲೆ ಕಠಿಣ ಕ್ರಮ ಜರಗಿಸಬೇಕು. ಚನ್ನಮಾರನಹಳ್ಳಿ ದಲಿತ ಜನಾಂಗಕ್ಕೆ ರಕ್ಷಣೆ ನೀಡಬೇಕೆಂದು ಮನವಿಯಲ್ಲಿ ತಿಳಿಸಿದ್ದಾರೆ.

    ಸಮಿತಿ ತಾಲೂಕು ಅಧ್ಯಕ್ಷ ಮಂಜುನಾಥ ಬಾಲಪ್ಪನವರ, ಯಲ್ಲಪ್ಪ ಅಂದಲಗಿ, ಫಕೀರೇಶ ದೊಡ್ಡಮನಿ, ದುರಗಪ್ಪ ಹಿಂದಿನಮನಿ, ಫಕೀರೇಶ ದೊಡ್ಡಮನಿ, ಸಂತೋಷ ಮಾದರ, ಫಕೀರೇಶ ಹರಿಜನ, ಸಂಜೀವ ಪಾಳೇದ, ಪಕೀರೇಶ ಮಾದರ, ನಾಗಪ್ಪ ಮಾದರ, ರಮೇಶ ಕೊದಡ್ಡಿ, ಶಾಂತಪ್ಪ ಕೆಂಚಣ್ಣವರ, ಅನಿಲ ದೊಡ್ಡಮನಿ, ಮಂಜುನಾಥ ಮಾದರ, ಮಹೇಶ ಕೆಳಗಿನಮನಿ, ಮಂಜುನಾಥ ಸೂಕಪ್ಪನವರ ಸೇರಿದಂತೆ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts