More

    ಸ್ಪರ್ಧಾತ್ಮಕ ಪರೀಕ್ಷೆಗೆ ವಿಷಯ ಸಂಗ್ರಹ ಅತ್ಯಗತ್ಯ; ಎಡಿಸಿ ದುರಗೇಶ ಸಲಹೆ

    ರಾಯಚೂರು: ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತಮ ಸಾಧನೆಗೆ ವಿಷಯ ಸಂಗ್ರಹದ ಜತೆಗೆ ನಿರಂತರ ಓದು ಅಗತ್ಯವಾಗಿದ್ದು, ದಿನಪತ್ರಿಕೆಗಳನ್ನು ನಿಯಮಿತವಾಗಿ ಗಮನಿಸುವುದು ಮುಖ್ಯವಾಗಿದೆ ಎಂದು ಅಪರ ಜಿಲ್ಲಾಧಿಕಾರಿ ದುರಗೇಶ ಸಲಹೆ ನೀಡಿದರು. ಕನ್ನಡ ಭವನದಲ್ಲಿ ಭಾರತ ಜ್ಞಾನ ವಿಜ್ಞಾನ ಸಮಿತಿ, ಶಿಕ್ಷಣ ಕಿರಣ ಸಂಸ್ಥೆಯಿಂದ ಕೆಎಎಸ್‌ನಲ್ಲಿ ತೇರ್ಗೆಡೆ ಹೊಂದಿರುವ ಜಿಲ್ಲೆಯ ಅಭ್ಯರ್ಥಿಗಳಿಗಾಗಿ ಶನಿವಾರ ಏರ್ಪಡಿಸಿದ್ದ ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

    ಯಾವ ರೀತಿ ಅಭ್ಯಾಸ ಮಾಡಬೇಕು ಎನ್ನುವ ಕುರಿತು ಮಾರ್ಗದರ್ಶನ ಪಡೆದಲ್ಲಿ ಶಿಸ್ತುಬದ್ಧ ಅಭ್ಯಾಸ ಸಾಧ್ಯ ಎಂದರು. ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿಭಾವಂತರಿದ್ದಾರೆ. ಅವರಿಗೆ ಸೂಕ್ತ ಮಾರ್ಗದರ್ಶನದ ಅವಶ್ಯಕತೆಯಿದೆ. ಆಯ್ಕೆಯಾಗಿರುವ ಅಭ್ಯರ್ಥಿಗಳು ಜನರ ಸಮಸ್ಯೆಗಳಿಗೆ ಸ್ಪಂದನೆ ನೀಡುವುದರ ಜತೆಗೆ ಮೇಲಧಿಕಾರಿಗಳಿಗೆ ಸಹಕಾರ ನೀಡುವ ಕೆಲಸ ಮಾಡಬೇಕು ಎಂದು ಹೇಳಿದರು.

    ಜಿಪಂ ಯೋಜನಾಧಿಕಾರಿ ಡಾ.ಟಿ.ರೋಣಿ, ಡಯಟ್ ಪ್ರಾಚಾರ್ಯ ಮಲ್ಲಿಕಾರ್ಜುನ ಸ್ವಾಮಿ ಮಾತನಾಡಿದರು. ಕೆಎಎಸ್‌ನಲ್ಲಿ ತೇರ್ಗಡೆ ಹೊಂದಿದ ಕೃಷ್ಣಾ ಶಾವಂತಗೇರಿ, ಪ್ರಾಣೇಶ, ಸೋಮಶೇಖರ, ಲಕ್ಷ್ಮಿದೇವಿ, ಶ್ವೇತಾ, ಗಂಗಾಧರ, ಭೀಮನಗೌಡ, ಮಾಳಿಂಗರಾಯ, ಜ್ಞಾನಪ್ಪ, ಮಲ್ಲಯ್ಯ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು. ನಗರಸಭೆ ಸದಸ್ಯ ಜಯಣ್ಣ, ಶಿಕ್ಷಣ ಕಿರಣ ಸಂಸ್ಥೆ ಅಧ್ಯಕ್ಷ ಹನುಮಂತಪ್ಪ ಗವಾಯಿ, ಭಾರತ ಜ್ಞಾನ ವಿಜ್ಞಾನ ಸಮಿತಿ ಸಂಚಾಲಕ ಸೈಯದ್ ಹಫೀಜುಲ್ಲಾ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಸವರಾಜ ನಾಗಡದಿನ್ನಿ, ಸಾಹಿತಿ ವೀರಹನುಮಾನ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts