More

    ಕಾಮನ್‌ವೆಲ್ತ್ ಭಾರ ಎತ್ತುವ ಸ್ಪರ್ಧೆಯಲ್ಲಿ ಕುಂದಾಪುರದ ಗುರುರಾಜ್‌ಗೆ ಬೆಳ್ಳಿ ಪದಕ

    ಕುಂದಾಪುರ: ಉಜ್ಬೇಕಿಸ್ತಾನದಲ್ಲಿ ಗುರುವಾರ ಸಂಜೆ ನಡೆದ ವಿಶ್ವಮಟ್ಟದ ಕಾಮನ್‌ವೆಲ್ತ್ ಚಾಂಪಿಯನ್‌ಶಿಪ್ ವೆಯ್ಟ ಲಿಪ್ಟ್ ವಿಭಾಗದಲ್ಲಿ ಕುಂದಾಪುರ ತಾಲೂಕು ವಂಡ್ಸೆ ಗ್ರಾಮದ ಜಡ್ಡು ಗುರುರಾಜ ಪೂಜಾರಿ ಬೆಳ್ಳಿ ಪದಕ ಪಡೆದುಕೊಂಡಿದ್ದಾರೆ.

    2022ರ ಇಂಗ್ಲೆಡ್‌ನಲ್ಲಿ ನಡೆಯುವ ಕಾಮನ್‌ವೆಲ್ತ್ ವೆಯ್ಟ ಲಿಪ್ಟ್ ಸ್ಪರ್ಧೆ ಹಿನ್ನೆಲೆಯಲ್ಲಿ ವಿಶ್ವಮಟ್ಟದಲ್ಲಿ ನಡೆಯುವ ಅರ್ಹತಾ ಪಂದ್ಯ ಇದಾಗಿದ್ದು, ಗುರುರಾಜ್ ಮೊದಲ ಬಾರಿ 61 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿದ್ದಾರೆ. ವೆಯ್ಟ ಲಿಫ್ಟಿಂಗ್‌ನಲ್ಲಿ 117 ಸ್ನ್ಯಾಚ್, 148 ಕ್ಲೀನ್ ಮತ್ತು ಜೆರ್ಕ್ ಪಾಯಿಂಟ್ ದಾಖಲಿಸಿ ಬೆಳ್ಳಿ ಪದಕ ತನ್ನದಾಗಸಿಕೊಂಡಿದ್ದು, ಒಟ್ಟು 265 ಕೇಜಿ ಭಾರ ಎತ್ತಿದ್ದಾರೆ.
    ಸ್ಪರ್ಧೆಯಲ್ಲಿ ಒಟ್ಟು 16 ಜನ ಪಾಲ್ಗೊಂಡಿದ್ದು, ಮಲೇಷಿಯಾ ದೇಶದ ಸ್ಪರ್ಧಿ ಪ್ರಥಮ ಸ್ಥಾನ ಪಡೆದುಕೊಂಡಿದ್ದು, ಗುರುರಾಜ್ ಕಡಿಮೆ ಅಂತರದಲ್ಲಿ ಚಿನ್ನದ ಪದಕದಿಂದ ವಂಚಿತರಾಗಿದ್ದಾರೆ.

    ಉಜ್ಬೇಕಿಸ್ತಾನ್ ದೇಶದಲ್ಲಿ ನಡೆದ ಸ್ಪರ್ಧೆ ಕಾಮನ್‌ವೆಲ್ತ್ ಚಾಂಪಿಯನ್‌ಶಿಪ್, 2022ರಲ್ಲಿ ಇಂಗ್ಲೆಂಡ್‌ನಲ್ಲಿ ನಡೆಯಲಿರುವ ಕಾಮನ್‌ವೆಲ್ತ್ ಗೇಮ್ಸ್ ಅರ್ಹತಾ ಸುತ್ತಿನ ಪಂದ್ಯವಾಗಿದೆ. ಉಡುಪಿ ಜಿಲ್ಲೆ ಕುಂದಾಪುರ ತಾಲೂಕು ವಂಡ್ಸೆ ಗ್ರಾಮ ಜೆಡ್ಡು ಮಹಾಬಲ ಪೂಜಾರಿ ಹಾಗೂ ಪದ್ದು ಪೂಜಾರಿ ಪುತ್ರ ಗುರುರಾಜ್ ವಾಯುಸೇನೆ ಉದ್ಯೋಗಿಯಾಗಿದ್ದಾರೆ.

    ಸೌತ್ ಏಷಿಯನ್ ಗೇಮ್ಸ್‌ನಲ್ಲಿ 56 ಕೇಜಿ ವಿಭಾಗದಲ್ಲಿ ಸ್ಪರ್ಧಿಸಿ ಒಟ್ಟು 241ಕೆ.ಜಿ ಭಾರ ಎತ್ತಿದ ಗುರುರಾಜ್ ಸ್ನಾಚ್ ವಿಭಾಗದಲ್ಲಿ 104ಕೆ.ಜಿ ಹಾಗೂ ಕ್ಲೀನ್ ಆ್ಯಂಡ್ ಜರ್ಕ್‌ನಲ್ಲಿ 137 ಕೆ.ಜಿ ಎತ್ತಿದ್ದರು. ಸ್ಟೋರ್ಟ್ಸ್ ಕೋಟಾದಲ್ಲಿ ಭಾರತೀಯ ವಾಯುಸೇನೆಗೆ ಆಯ್ಕೆಯಾಗಿರುವ ಗುರುರಾಜ್ ಪಟಿಯಾಲ ನ್ಯಾಷನಲ್ ತರಬೇತಿ ಕೇಂದ್ರದಲ್ಲಿ ತರಬೇತಿ ಪಡೆಯುತ್ತಿದ್ದಾರೆ. 2016 ಮತ್ತು 2018ರಲ್ಲಿ ನಡೆದ ಕಾಮನ್‌ವೆಲ್ತ್ ಸ್ಪರ್ಧೆಯಲ್ಲಿ ಗುರುರಾಜ್ ಪ್ರಥಮ ಸ್ಥಾನ ಪಡೆದಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts