ನೇಣು ಬಿಗಿದು ಟ್ಯಾಂಕ್‌ನಿಂದ ಹಾರಿ ಆತ್ಮಹತ್ಯೆ

Hanging
Published on

ಕಾರ್ಕಳ: ಕುತ್ತಿಗೆಗೆ ನೇಣು ಬಿಗಿದು ಟ್ಯಾಂಕ್ ಮೇಲಿನಿಂದ ಜಿಗಿದು ಟಿಪ್ಪರ್ ಚಾಲಕ, ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಈರಣ್ಣ(40) ಎಂಬುವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 6 ವರ್ಷಗಳಿಂದ ಕಾರ್ಕಳದಲ್ಲಿ ವಾಸವಾಗಿದ್ದು, ಟಿಪ್ಪರ್ ಚಾಲಕನಾಗಿ ಕೆಲಸ ಮಾಡಿಕೊಂಡಿದ್ದರು. ಕುಕ್ಕುಂದೂರು ಗ್ರಾಮದ ಕಾರ್ಕಳ ಕಾಂಗ್ರೆಸ್ ಕಚೇರಿ ಬಳಿ ಮೈದಾನದಲ್ಲಿರುವ ನೀರಿನ ಟ್ಯಾಂಕ್ ಮೇಲಿನ ಕಬ್ಬಿಣದ ಪಟ್ಟಿಗೆ ಎರಡು ಟವೆಲ್‌ಗಳನ್ನು ಜೋಡಿಸಿ ಕುತ್ತಿಗೆಗೆ ನೇಣು ಬಿಗಿದು ಮೇಲಿನಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net