ಮದುವೆ ಸೀಸನ್‌ ನಡುವೆಯೇ ಮತ್ತೆ ಜಿಗಿಯುತ್ತಿರುವ ಚಿನ್ನ-ಬೆಳ್ಳಿಯ ದರ: ಬೆಂಗಳೂರಲ್ಲಿ ಬಂಗಾರ ಬೆಲೆಯಲ್ಲಿ ಭಾರಿ ಏರಿಕೆ! Gold Rate Today

ನಗರದಲ್ಲಿ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ 1,600 ರೂಪಾಯಿ ಏರಿಕೆಯಾಗಿದ್ದು, ಒಟ್ಟು 1,16,000 ರೂಪಾಯಿಗೆ ತಲುಪಿದೆ. ಅದೇ ರೀತಿ, ಶುದ್ಧ ಚಿನ್ನವಾದ 24 ಕ್ಯಾರೆಟ್‌ನ 10 ಗ್ರಾಂ ದರವು 1,750 ರೂಪಾಯಿ ಹೆಚ್ಚಳವಾಗಿ 1,26,550 ರೂಪಾಯಿಗೆ ಮಾರಾಟವಾಗುತ್ತಿದೆ.
Gold Rate Today
ಸಾಂದರ್ಭಿಕ ಚಿತ್ರ
Published on: 

Gold Rate Today : ಬೆಂಗಳೂರಿನಲ್ಲಿ ಇಂದು ಚಿನ್ನದ ದರ ಗಗನಮುಖಿಯಾಗಿದ್ದು, ಆಭರಣ ಪ್ರಿಯರ ಜೇಬಿಗೆ ಕತ್ತರಿ ಬಿದ್ದಿದೆ. ಮದುವೆ ಸೀಸನ್​ ನಡುವೆಯೇ ಬಂಗಾರದ ಬೆಲೆಯಲ್ಲಿ ಭಾರಿ ಏರಿಕೆ ಕಾಣುತ್ತಿರುವುದು ಗ್ರಾಹಕರಿಗೆ ತಲೆನೋವಾಗಿದೆ. ರಾಜಧಾನಿಯಲ್ಲಿ ಇಂದು ಎಷ್ಟು ಬೆಲೆ ಏರಿಕೆ ಆಗಿದೆ ಎಂಬುದನ್ನು ನಾವೀಗ ತಿಳಿದುಕೊಳ್ಳೋಣ.

ನಗರದಲ್ಲಿ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ 1,600 ರೂಪಾಯಿ ಏರಿಕೆಯಾಗಿದ್ದು, ಒಟ್ಟು 1,16,000 ರೂಪಾಯಿಗೆ ತಲುಪಿದೆ. ಅದೇ ರೀತಿ, ಶುದ್ಧ ಚಿನ್ನವಾದ 24 ಕ್ಯಾರೆಟ್‌ನ 10 ಗ್ರಾಂ ದರವು 1,750 ರೂಪಾಯಿ ಹೆಚ್ಚಳವಾಗಿ 1,26,550 ರೂಪಾಯಿಗೆ ಮಾರಾಟವಾಗುತ್ತಿದೆ. ಇನ್ನು 18 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯಲ್ಲಿ 1,310 ರೂಪಾಯಿ ಏರಿಕೆಯಾಗಿದ್ದು, ಪ್ರಸ್ತುತ 94,910 ರೂಪಾಯಿ ದಾಖಲಾಗಿದೆ.

Also Read
ಬ್ಯಾಂಕ್‌ನಲ್ಲಿ ಚಿನ್ನ ಅಡವಿಟ್ಟಿದ್ದೀರಾ? ಹಾಗಾದ್ರೆ ಈ ಸುದ್ದಿ ತಪ್ಪದೇ ಓದಿ, ನೋಟಿಸ್ ಬಂದಾಕ್ಷಣ ಇದನ್ನು ಮಾಡದಿದ್ರೆ ಚಿನ್ನ ಹರಾಜು ಗ್ಯಾರಂಟಿ! Gold Loan
Gold Rate Today

ತಮಿಳುನಾಡಿನ ರಾಜಧಾನಿ ಚೆನ್ನೈನಲ್ಲೂ ಚಿನ್ನದ ದರ ಬೆಂಗಳೂರಿನಂತೆಯೇ ಭಾರಿ ಏರಿಕೆ ಕಂಡಿದೆ. ಚೆನ್ನೈ ಮಾರುಕಟ್ಟೆಯಲ್ಲಿ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 1,600 ರೂಪಾಯಿ ಹೆಚ್ಚಳದೊಂದಿಗೆ 1,16,000 ರೂಪಾಯಿಗೆ ತಲುಪಿದೆ. ಹಾಗೆಯೇ, 10 ಗ್ರಾಂ 24 ಕ್ಯಾರೆಟ್ ಚಿನ್ನದ ದರ 1,750 ರೂಪಾಯಿ ಏರಿಕೆಯಾಗಿ 1,26,550 ರೂಪಾಯಿಯಾಗಿದ್ದರೆ, 18 ಕ್ಯಾರೆಟ್ ಚಿನ್ನದ ಬೆಲೆ 1,310 ರೂಪಾಯಿ ಏರಿಕೆಯೊಂದಿಗೆ 94,910 ರೂಪಾಯಿಯ ಆಸುಪಾಸಿನಲ್ಲಿದೆ.

ಚಿನ್ನದ ಜತೆಗೆ ಬೆಳ್ಳಿಯ ದರವೂ ಗ್ರಾಹಕರಿಗೆ ಬಿಸಿ ಮುಟ್ಟಿಸಿದ್ದು, ಬೆಂಗಳೂರು ಮತ್ತು ಚೆನ್ನೈ ಎರಡೂ ನಗರಗಳಲ್ಲಿ ಪ್ರತಿ ಕೆಜಿ ಬೆಳ್ಳಿಯ ಬೆಲೆ 1,70,000 ರೂಪಾಯಿಗೆ ಬಂದು ನಿಂತಿದೆ. ಕಳೆದ ಕೆಲವು ವಾರಗಳಿಂದ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ದರದಲ್ಲಿ ನಿರಂತರ ಏರಿಳಿತಗಳು ಕಂಡುಬರುತ್ತಿವೆ. ಮದುವೆ ಸೀಸನ್‌ನಲ್ಲಿ 24 ಕ್ಯಾರೆಟ್ ಚಿನ್ನವು 1,30,000 ರೂಪಾಯಿ ಹಾಗೂ 22 ಕ್ಯಾರೆಟ್ ಚಿನ್ನವು 1,40,000 ರೂಪಾಯಿಯ ಆಸುಪಾಸಿನಲ್ಲಿ ತೀವ್ರ ಏರಿಳಿತ ಕಂಡು ಇತ್ತೀಚೆಗೆ ತುಸು ಇಳಿಕೆಯಾಗಿತ್ತು; ಆದರೆ ಇಂದು ಮತ್ತೆ ಏರಿಕೆಯ ಹಾದಿ ಹಿಡಿದಿದೆ.

Also Read
ಡೆಬಿಟ್ ಕಾರ್ಡ್ ಬಳಸುವಾಗ ಅಪ್ಪಿತಪ್ಪಿ ಈ ತಪ್ಪುಗಳನ್ನು ಮಾಡಲೇಬೇಡಿ... ಈ 6 ವಿಚಾರಗಳು ನಿಮ್ಮ ಗಮನಕ್ಕಿರಲಿ! Debit Card
Gold Rate Today

ಇಲ್ಲಿ ಉಲ್ಲೇಖಿಸಲಾಗಿರುವ ದರಗಳು ಬೆಳಗ್ಗೆ 8 ಗಂಟೆಯ ಮಾರುಕಟ್ಟೆ ಅಂಕಿಅಂಶಗಳಾಗಿದ್ದು, ನಿನ್ನೆಯ ಮುಕ್ತಾಯದ ದರಗಳನ್ನು ಆಧರಿಸಿವೆ. ಅಂತಾರಾಷ್ಟ್ರೀಯ ಮಾರುಕಟ್ಟೆಯ ಬೆಳವಣಿಗೆಗಳಿಗೆ ಅನುಗುಣವಾಗಿ ದಿನದ ಪ್ರತಿ ಕ್ಷಣವೂ ಚಿನ್ನ ಮತ್ತು ಬೆಳ್ಳಿಯ ಬೆಲೆಗಳಲ್ಲಿ ಬದಲಾವಣೆಯಾಗುವ ಸಾಧ್ಯತೆಯಿರುತ್ತದೆ. ಹೀಗಾಗಿ, ಇಂದು ಚಿನ್ನಾಭರಣ ಖರೀದಿಸಲು ಯೋಜಿಸುತ್ತಿರುವ ಗ್ರಾಹಕರು ಆಭರಣ ಮಳಿಗೆಗಳಿಗೆ ಭೇಟಿ ನೀಡುವ ಮುನ್ನ ಆಯಾ ಸಮಯದ ನೇರ ದರಗಳನ್ನು ಖಚಿತಪಡಿಸಿಕೊಳ್ಳುವುದು ಸೂಕ್ತ, (ಏಜೆನ್ಸೀಸ್​).