ಮದುವೆ ಸೀಸನ್‌ನಲ್ಲಿ ಗ್ರಾಹಕರಿಗೆ ಶಾಕ್: ನಿನ್ನೆ ಕುಸಿದಿದ್ದ ಚಿನ್ನದ ದರ ಇಂದು ಭಾರಿ ಜಿಗಿತ, ಬೆಂಗಳೂರಲ್ಲಿ ಬಂಗಾರದ ಬೆಲೆ ಎಷ್ಟಿದೆ? Gold rate today

ಬೆಂಗಳೂರಿನಲ್ಲಿ ಇಂದಿನ ದರದ ಪ್ರಕಾರ, 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಬರೋಬ್ಬರಿ 2,400 ರೂಪಾಯಿ ಹೆಚ್ಚಳವಾಗಿದ್ದು, 1,15,400 ರೂಪಾಯಿಗೆ ತಲುಪಿದೆ.
Gold Rate Today
ಸಾಂದರ್ಭಿಕ ಚಿತ್ರ
Published on: 

ಬೆಂಗಳೂರು: ಮದುವೆ ಮತ್ತು ಶುಭ ಸಮಾರಂಭಗಳ ಈ ಸೀಸನ್‌ನಲ್ಲಿ ಆಭರಣ ಖರೀದಿಸಲು ಕಾಯುತ್ತಿದ್ದ ಗ್ರಾಹಕರಿಗೆ ಇಂದು (ನವೆಂಬರ್ 26, 2026) ಚಿನ್ನದ ಮಾರುಕಟ್ಟೆ ಭಾರಿ ಆಘಾತ ನೀಡಿದೆ. ಕಳೆದ ಕೆಲವು ದಿನಗಳಿಂದ ಏರಿಳಿತ ಕಾಣುತ್ತಿದ್ದ ಬಂಗಾರದ ಬೆಲೆ ಇಂದು ಬೆಂಗಳೂರು ಮತ್ತು ಚೆನ್ನೈ ನಗರಗಳಲ್ಲಿ ಒಂದೇ ಸಮನೆ ಭಾರಿ ಏರಿಕೆ ( Gold rate today ) ಕಂಡಿದೆ.

ಬೆಂಗಳೂರಿನಲ್ಲಿ ಇಂದಿನ ದರದ ಪ್ರಕಾರ, 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಬರೋಬ್ಬರಿ 2,400 ರೂಪಾಯಿ ಹೆಚ್ಚಳವಾಗಿದ್ದು, 1,15,400 ರೂಪಾಯಿಗೆ ತಲುಪಿದೆ. ಅದೇ ರೀತಿ 10 ಗ್ರಾಂ 24 ಕ್ಯಾರೆಟ್ ಅಪರಂಜಿ ಚಿನ್ನದ ದರ 2,610 ರೂಪಾಯಿ ಏರಿಕೆಯಾಗಿ 1,25,890 ರೂಪಾಯಿ ಆಗಿದ್ದರೆ, 18 ಕ್ಯಾರೆಟ್ ಚಿನ್ನದ ಬೆಲೆ 1,960 ರೂಪಾಯಿ ಏರಿಕೆಯೊಂದಿಗೆ ಸುಮಾರು 94,420 ರೂಪಾಯಿ ಆಸುಪಾಸಿನಲ್ಲಿದೆ.

Also Read
ಚಿನ್ನದ ಬೆಲೆಯಲ್ಲಿ ₹18,530 ಇಳಿಕೆ! ಬಂಗಾರ ಖರೀದಿಗೆ ಇದು ಸೂಕ್ತ ಸಮಯವೇ? ಈ 3 ದಿನಾಂಕಗಳ ಮೇಲೆ ನಿಮ್ಮ ಕಣ್ಣಿರಲಿ...Gold Rate
Gold Rate Today

ಇನ್ನು ತಮಿಳುನಾಡಿನ ರಾಜಧಾನಿ ಚೆನ್ನೈನಲ್ಲೂ ಚಿನ್ನದ ದರ ಇದೇ ರೀತಿ ಗಗನಮುಖಿಯಾಗಿದೆ. ಚೆನ್ನೈ ಮಾರುಕಟ್ಟೆಯಲ್ಲಿ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 2,400 ರೂಪಾಯಿ ಏರಿಕೆಯೊಂದಿಗೆ 1,15,400 ರೂಪಾಯಿಗೆ ತಲುಪಿದೆ. ಅಲ್ಲದೆ, 10 ಗ್ರಾಂ 24 ಕ್ಯಾರೆಟ್ ಚಿನ್ನದ ದರದಲ್ಲಿ 2,610 ರೂಪಾಯಿ ಹೆಚ್ಚಳವಾಗಿದ್ದು, 1,25,890 ರೂಪಾಯಿಗೆ ಮಾರಾಟವಾಗುತ್ತಿದೆ. ಇದರ ಜತೆಗೆ 18 ಕ್ಯಾರೆಟ್ ಚಿನ್ನದ ಬೆಲೆಯೂ 1,960 ರೂಪಾಯಿ ಏರಿಕೆಯಾಗಿ 94,420 ರೂಪಾಯಿ ತಲುಪುವ ಮೂಲಕ ದಕ್ಷಿಣ ಭಾರತದ ಎರಡೂ ಪ್ರಮುಖ ನಗರಗಳಲ್ಲಿ ಏಕರೂಪದ ಭಾರಿ ಏರಿಕೆ ದಾಖಲಾಗಿದೆ.

ಚಿನ್ನದ ಜತೆಗೆ ಬೆಳ್ಳಿಯ ಬೆಲೆಯೂ ಗ್ರಾಹಕರ ಜೇಬಿಗೆ ಕತ್ತರಿ ಹಾಕುವಂತಿದ್ದು, ಬೆಂಗಳೂರು ಮತ್ತು ಚೆನ್ನೈ ಮಾರುಕಟ್ಟೆಗಳಲ್ಲಿ ಇಂದು ಪ್ರತಿ ಕೆಜಿ ಬೆಳ್ಳಿಯ ದರ 1,65,000 ರೂಪಾಯಿಗಳಷ್ಟಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ದರ ನಿರಂತರವಾಗಿ ಏರಿಳಿತ ಕಾಣುತ್ತಿರುವುದು ದೇಶೀಯ ಮಾರುಕಟ್ಟೆಯ ಮೇಲೆ ನೇರ ಪರಿಣಾಮ ಬೀರುತ್ತಿದೆ.

ಕಳೆದ ಕೆಲವು ವಾರಗಳಿಂದ ಮದುವೆ ಸೀಸನ್ ನಡುವೆಯೂ ಚಿನ್ನದ ಬೆಲೆಯಲ್ಲಿ ತುಸು ಇಳಿಕೆ ಕಂಡುಬಂದಿತ್ತು. ಆ ಸಂದರ್ಭದಲ್ಲಿ 24 ಕ್ಯಾರೆಟ್ ಚಿನ್ನ 1,30,000 ರೂಪಾಯಿ ಹಾಗೂ 22 ಕ್ಯಾರೆಟ್ ಚಿನ್ನ ಸುಮಾರು 1,40,000 ರೂಪಾಯಿಗಳ ಆಸುಪಾಸಿನಲ್ಲಿ ಏರಿಳಿತ ಕಾಣುತ್ತಿತ್ತು.

ಇಲ್ಲಿ ಉಲ್ಲೇಖಿಸಲಾದ ಚಿನ್ನ ಮತ್ತು ಬೆಳ್ಳಿಯ ದರಗಳು ಇಂದು ಬೆಳಿಗ್ಗೆ 8 ಗಂಟೆಯ ವೇಳೆಗೆ ದಾಖಲಾದ ಬೆಲೆಗಳಾಗಿವೆ. ಜಾಗತಿಕ ಮಾರುಕಟ್ಟೆಯ ಬೆಳವಣಿಗೆಗಳಿಗೆ ಅನುಗುಣವಾಗಿ ಬಂಗಾರದ ಬೆಲೆ ಪ್ರತಿ ಕ್ಷಣವೂ ಬದಲಾಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ಆಭರಣ ಖರೀದಿಸಲು ಮುಂದಾಗುವ ಗ್ರಾಹಕರು ಅಂಗಡಿಗಳಿಗೆ ತೆರಳುವ ಮುನ್ನ ಆಯಾ ಸಮಯದ ಲೈವ್ ದರಗಳನ್ನು (Live Prices) ಪರಿಶೀಲಿಸುವುದು ಅತ್ಯಗತ್ಯವಾಗಿದೆ.

Also Read
ಬ್ಯಾಂಕ್‌ನಲ್ಲಿ ಚಿನ್ನ ಅಡವಿಟ್ಟಿದ್ದೀರಾ? ಹಾಗಾದ್ರೆ ಈ ಸುದ್ದಿ ತಪ್ಪದೇ ಓದಿ, ನೋಟಿಸ್ ಬಂದಾಕ್ಷಣ ಇದನ್ನು ಮಾಡದಿದ್ರೆ ಚಿನ್ನ ಹರಾಜು ಗ್ಯಾರಂಟಿ! Gold Loan
Gold Rate Today

ಗಮನಿಸಬೇಕಾದ ಪ್ರಮುಖ ಅಂಶವೆಂದರೆ, ಮೇಲಿನ ದರಗಳು ನಿನ್ನೆಯ ಮಾರುಕಟ್ಟೆಯ ಮುಕ್ತಾಯದ ಬೆಲೆಗಳನ್ನು ಆಧರಿಸಿವೆ. ಇಂದಿನ ದಿನದ ವಹಿವಾಟು ಆರಂಭವಾದಂತೆ ಮಾರುಕಟ್ಟೆಯ ಬೇಡಿಕೆ ಮತ್ತು ಅಂತಾರಾಷ್ಟ್ರೀಯ ಬೆಲೆಗಳಿಗೆ ತಕ್ಕಂತೆ ಚಿನ್ನದ ದರವು ಇನ್ನಷ್ಟು ಏರಿಕೆಯೊಂದಿಗೆ ಅಥವಾ ತುಸು ಇಳಿಕೆಯೊಂದಿಗೆ ಮುಂದುವರಿಯುವ ಸಾಧ್ಯತೆಯಿದೆ. ಹೀಗಾಗಿ ಹೂಡಿಕೆದಾರರು ಮತ್ತು ಮದುವೆಗಾಗಿ ಚಿನ್ನ ಖರೀದಿಸುವವರು ಮಾರುಕಟ್ಟೆಯ ಚಲನವಲನಗಳ ಮೇಲೆ ನಿಗಾ ಇಡುವುದು ಉತ್ತಮ, (ಏಜೆನ್ಸೀಸ್​).