ಷೇರುಪೇಟೆಯಲ್ಲಿ ಮಹಾ ಪತನ: ಹೆಚ್ಚು ಲಾಭ ಗಳಿಸಲು ಹೋಗಿ ಹೂಡಿಕೆದಾರರಿಗೆ ಬರೋಬ್ಬರಿ 3 ಲಕ್ಷ ಕೋಟಿ ರೂ. ನಷ್ಟ! Stock Market Crash

ಕಳೆದ ಶುಕ್ರವಾರದ ವಹಿವಾಟಿನ ಅಂತ್ಯಕ್ಕೆ ಬಿಎಸ್‌ಇ (BSE) ಪಟ್ಟಿಯಲ್ಲಿರುವ ಎಲ್ಲಾ ಕಂಪನಿಗಳ ಒಟ್ಟು ಮಾರುಕಟ್ಟೆ ಬಂಡವಾಳ ಮೌಲ್ಯ 5,14,18,275 ಕೋಟಿ ರೂಪಾಯಿಗಳಷ್ಟಿತ್ತು. ಆದರೆ ಸೋಮವಾರ ಮಧ್ಯಾಹ್ನ 12 ಗಂಟೆಯ ವೇಳೆಗೆ ಅದು 5,11,00,012 ಕೋಟಿ ರೂಪಾಯಿಗೆ ಕುಸಿದಿದ್ದು, ಕೇವಲ ಕೆಲವೇ ಗಂಟೆಗಳಲ್ಲಿ ಹೂಡಿಕೆದಾರರು 3 ಲಕ್ಷ ಕೋಟಿ ರೂಪಾಯಿಗೂ ಹೆಚ್ಚು ನಷ್ಟ ಅನುಭವಿಸಿದ್ದಾರೆ.
Stock Market Crash
ಸಾಂದರ್ಭಿಕ ಚಿತ್ರ
Published on: 

ಮುಂಬೈ: ಕಳೆದ ಕೆಲವು ವಾರಗಳಿಂದ ಸತತ ಏರಿಕೆಯ ಹಾದಿಯಲ್ಲಿದ್ದ ಭಾರತೀಯ ಷೇರು ಮಾರುಕಟ್ಟೆಯಲ್ಲಿ ಸೋಮವಾರ (ನವೆಂಬರ್ 23, 2026) ಆರಂಭಿಕ ವಹಿವಾಟಿನಲ್ಲೇ ಭಾರಿ ಕುಸಿತ ( Stock Market Crash ) ಕಂಡುಬಂದಿದ್ದು, ಹೂಡಿಕೆದಾರರ ಬರೋಬ್ಬರಿ 3 ಲಕ್ಷ ಕೋಟಿ ರೂಪಾಯಿಗೂ ಅಧಿಕ ಸಂಪತ್ತು ಕರಗಿಹೋಗಿದೆ. ಮುಂಬೈ ಷೇರುಪೇಟೆ ಸೂಚ್ಯಂಕ (ಸೆನ್ಸೆಕ್ಸ್) ದಿನದ ಗರಿಷ್ಠ ಮಟ್ಟದಿಂದ 1,600ಕ್ಕೂ ಹೆಚ್ಚು ಅಂಕಗಳ ಕುಸಿತ ಕಂಡರೆ, ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ನಿಫ್ಟಿ 50) 25,600ರ ಮಟ್ಟಕ್ಕಿಂತ ಕೆಳಕ್ಕೆ ಜಾರಿದೆ.

ಕಳೆದ ಶುಕ್ರವಾರದ ವಹಿವಾಟಿನ ಅಂತ್ಯಕ್ಕೆ ಬಿಎಸ್‌ಇ (BSE) ಪಟ್ಟಿಯಲ್ಲಿರುವ ಎಲ್ಲಾ ಕಂಪನಿಗಳ ಒಟ್ಟು ಮಾರುಕಟ್ಟೆ ಬಂಡವಾಳ ಮೌಲ್ಯ 5,14,18,275 ಕೋಟಿ ರೂಪಾಯಿಗಳಷ್ಟಿತ್ತು. ಆದರೆ ಸೋಮವಾರ ಮಧ್ಯಾಹ್ನ 12 ಗಂಟೆಯ ವೇಳೆಗೆ ಅದು 5,11,00,012 ಕೋಟಿ ರೂಪಾಯಿಗೆ ಕುಸಿದಿದ್ದು, ಕೇವಲ ಕೆಲವೇ ಗಂಟೆಗಳಲ್ಲಿ ಹೂಡಿಕೆದಾರರು 3 ಲಕ್ಷ ಕೋಟಿ ರೂಪಾಯಿಗೂ ಹೆಚ್ಚು ನಷ್ಟ ಅನುಭವಿಸಿದ್ದಾರೆ. ಮಧ್ಯಾಹ್ನ 12:20ರ ಸುಮಾರಿಗೆ ಸೆನ್ಸೆಕ್ಸ್ 955 ಅಂಕಗಳ ಕುಸಿತದೊಂದಿಗೆ 82,972ರಲ್ಲಿ ವಹಿವಾಟು ನಡೆಸುತ್ತಿದ್ದರೆ, ನಿಫ್ಟಿ 280 ಅಂಕಗಳನ್ನು ಕಳೆದುಕೊಂಡು 25,519ಕ್ಕೆ ಇಳಿದಿದೆ.

Also Read
ಖಾಸಗಿ ಚಾಟ್​ ಸೋರಿಕೆ ಬೆನ್ನಲ್ಲೇ ಮಿಸ್ ಯೂನಿವರ್ಸ್ ವಿಯೆಟ್ನಾಂಗೆ ಬಿಗ್​ ಶಾಕ್​: ಸೌಂದರ್ಯ ಪಟ್ಟ ಕಳೆದುಕೊಂಡ ಚೆಲುವೆ..! Nguyen Quynh Anh
Stock Market Crash

ದಿಢೀರ್​ ಕುಸಿತಕ್ಕೆ ಕಾರಣ ಏನು?

ಮಾರುಕಟ್ಟೆಯ ಈ ದಿಢೀರ್ ಕುಸಿತಕ್ಕೆ 'ಲಾಭ ಗಳಿಕೆ'ಯೇ (Profit Booking) ಪ್ರಮುಖ ಕಾರಣವಾಗಿದೆ. ಅದೇನೆಂದರೆ, ಈ ತಿಂಗಳು ಮಾರುಕಟ್ಟೆಯು ತೀವ್ರವಾಗಿ ಏರಿಕೆ ಕಂಡಿದ್ದು, ಸೂಚ್ಯಂಕಗಳು ತಮ್ಮ ಹಿಂದಿನ ದಾಖಲೆಯ ಗರಿಷ್ಠ ಮಟ್ಟವನ್ನು ಸಮೀಪಿಸಿದ್ದವು. ಸತತ ನಾಲ್ಕು ವಾರಗಳ ಕಾಲ ಲಾಭದ ಓಟದಲ್ಲಿದ್ದ ಮಾರುಕಟ್ಟೆಯಲ್ಲಿ, ಹೂಡಿಕೆದಾರರು ಮತ್ತಷ್ಟು ಏರಿಕೆಗಾಗಿ ಕಾಯುವ ಬದಲು ಗರಿಷ್ಠ ಮಟ್ಟದಲ್ಲಿ ಷೇರುಗಳನ್ನು ಮಾರಾಟ ಮಾಡಿ ಲಾಭವನ್ನು ಜೇಬಿಗಿಳಿಸಿಕೊಳ್ಳಲು ಮುಂದಾಗಿದ್ದು ಮಾರುಕಟ್ಟೆಯಲ್ಲಿ ಒತ್ತಡ ಸೃಷ್ಟಿಸಿತು.

ಇದರ ಜತೆಗೆ ಬ್ಯಾಂಕಿಂಗ್ ವಲಯದ ಷೇರುಗಳ ಕುಸಿತವು ಮಾರುಕಟ್ಟೆಗೆ ಮತ್ತಷ್ಟು ಪೆಟ್ಟು ನೀಡಿತು. ಎಚ್‌ಡಿಎಫ್‌ಸಿ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಆಕ್ಸಿಸ್ ಬ್ಯಾಂಕ್, ಪಂಜಾಬ್ ನ್ಯಾಷನಲ್ ಬ್ಯಾಂಕ್, ಕೆನರಾ ಬ್ಯಾಂಕ್ ಮತ್ತು ಬ್ಯಾಂಕ್ ಆಫ್ ಬರೋಡಾದಂತಹ ಪ್ರಮುಖ ಬ್ಯಾಂಕ್‌ಗಳ ಷೇರುಗಳಲ್ಲಿ ಭಾರಿ ಮಾರಾಟ ಕಂಡುಬಂದಿದ್ದರಿಂದ 'ಬ್ಯಾಂಕ್ ನಿಫ್ಟಿ' ತೀವ್ರವಾಗಿ ಕುಸಿಯಿತು. ಸೂಚ್ಯಂಕಗಳಲ್ಲಿ ಹಣಕಾಸು ವಲಯದ ಷೇರುಗಳು ಹೆಚ್ಚಿನ ಪ್ರಾಬಲ್ಯ ಹೊಂದಿರುವುದರಿಂದ, ಇವುಗಳ ಕುಸಿತ ಇಡೀ ಮಾರುಕಟ್ಟೆಯ ಮೇಲೆ ದೊಡ್ಡ ಪರಿಣಾಮ ಬೀರಿತು.

ಅಮೆರಿಕದ ಬಡ್ಡಿ ದರದ ಆತಂಕ

ಅಂತಾರಾಷ್ಟ್ರೀಯ ಬೆಳವಣಿಗೆಗಳು ಮತ್ತು ರೂಪಾಯಿ ಮೌಲ್ಯದ ಕುಸಿತವೂ ಹೂಡಿಕೆದಾರರ ಆತಂಕಕ್ಕೆ ಕಾರಣವಾಗಿದೆ. ಅಮೆರಿಕದ ಫೆಡರಲ್ ರಿಸರ್ವ್ ಮತ್ತೆ ಬಡ್ಡಿದರ ಏರಿಕೆ ಮಾಡಬಹುದು ಎಂಬ ಹೊಸ ಆತಂಕವು ಜಾಗತಿಕ ಮಾರುಕಟ್ಟೆಯ ಉತ್ಸಾಹವನ್ನು ಕುಂದಿಸಿದೆ. ಅಮೆರಿಕದಲ್ಲಿ ಬಡ್ಡಿದರ ಹೆಚ್ಚಾದರೆ ಭಾರತದಂತಹ ಉದಯೋನ್ಮುಖ ಮಾರುಕಟ್ಟೆಗಳಿಂದ ವಿದೇಶಿ ಹೂಡಿಕೆ ಹೊರಹೋಗುವ ಸಾಧ್ಯತೆ ಇರುತ್ತದೆ. ಮತ್ತೊಂದೆಡೆ, ರೂಪಾಯಿ ಮೌಲ್ಯ ದುರ್ಬಲಗೊಂಡಿರುವುದು ಆಮದು ವೆಚ್ಚ ಮತ್ತು ಹಣದುಬ್ಬರದ ಭೀತಿಯನ್ನು ಹೆಚ್ಚಿಸಿರುವುದು ಕೂಡ ವಿದೇಶಿ ಹೂಡಿಕೆದಾರರನ್ನು ಎಚ್ಚರಿಕೆಯ ಹೆಜ್ಜೆ ಇಡುವಂತೆ ಮಾಡಿದೆ.

Also Read
ಸತತವಾಗಿ ಕುಸಿಯುತ್ತಿದ್ದ ಚಿನ್ನದ ಬೆಲೆಯಲ್ಲಿ ಇಂದು ಭಾರಿ ಏರಿಕೆ: ಬೆಂಗಳೂರಿನಲ್ಲಿ ಇಂದಿನ ಬಂಗಾರದ ದರ ಎಷ್ಟಿದೆ? Gold Rate Today
Stock Market Crash

ತಾಂತ್ರಿಕ ಅಂಶಗಳನ್ನು ಗಮನಿಸಿದರೆ, ನಿಫ್ಟಿ 50 ಸೂಚ್ಯಂಕವು 26,000 ಮಟ್ಟವನ್ನು ದಾಟಲು ವಿಫಲವಾಗಿರುವುದು ಕೂಡ ಕುಸಿತಕ್ಕೆ ಕಾರಣವಾಗಿದೆ. ಆ ಮಟ್ಟದ ಬಳಿ ವೇಗ ಕಡಿಮೆಯಾಗಿರುವುದರಿಂದ ವ್ಯಾಪಾರಿಗಳು ಲಾಭ ಗಳಿಕೆಗೆ ಮುಂದಾಗಿದ್ದಾರೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಸೋಮವಾರದ ಈ ಕುಸಿತದ ಹೊರತಾಗಿಯೂ ಮಾರುಕಟ್ಟೆಯ ಒಟ್ಟಾರೆ ಪ್ರವೃತ್ತಿ ಸಕಾರಾತ್ಮಕವಾಗಿಯೇ ಇದೆ. ಆದಾಗ್ಯೂ, ಮುಂದಿನ ದಿನಗಳಲ್ಲಿ ಜಾಗತಿಕ ಬಡ್ಡಿದರದ ಸೂಚನೆಗಳು, ವಿದೇಶಿ ನಿಧಿಯ ಹರಿವು ಮತ್ತು ನಿಫ್ಟಿ ಮತ್ತೆ 26,000 ಮಟ್ಟವನ್ನು ದಾಟಲಿದೆಯೇ ಎಂಬುದರ ಮೇಲೆ ಹೂಡಿಕೆದಾರರು ತೀವ್ರ ನಿಗಾ ಇಡಲಿದ್ದಾರೆ, (ಏಜೆನ್ಸೀಸ್​).