ಟ್ಯಾಕ್ಸ್ ಟೆರರಿಸಮ್​ನಿಂದ ಟ್ಯಾಕ್ಸ್ ಟ್ರಾನ್ಸಪರೆನ್ಸಿಗೆ ಬದಲಾಗಿದೆ ಭಾರತ- ಪ್ರಧಾನಿ ನರೇಂದ್ರ ಮೋದಿ

Modi
Published on

ನವದೆಹಲಿ : ಕಳೆದ ಆರು ವರ್ಷಗಳಲ್ಲಿ ಆಗಿರುವ ತೆರಿಗೆ ಸುಧಾರಣಾ ಕ್ರಮಗಳ ಕಾರಣ ಭಾರತ, ಟ್ಯಾಕ್ಸ್ ಟೆರರಿಸಮ್​ನಿಂದ ಟ್ಯಾಕ್ಸ್ ಟ್ರಾನ್ಸಪರೆನ್ಸಿಗೆ ಬದಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಬುಧವಾರ ಹೇಳಿದ್ದಾರೆ. ಅವರು ಕಟಕ್​ನಲ್ಲಿರುವ ಇನ್​ಕಮ್​ಟ್ಯಾಕ್ಸ್ ಅಪ್ಪಿಲೇಟ್​ ನ ಕಚೇರಿ ಕಂ ವಸತಿ ಸಂಕೀರ್ಣವನ್ನು ಉದ್ಘಾಟಿಸಿ ಮಾತನಾಡಿದರು.

ಕಳೆದ ಸರ್ಕಾರಗಳ ಅವಧಿಯಲ್ಲಿ ಟ್ಯಾಕ್ಸ್ ಟೆರರಿಸಂ ಸಾಮಾನ್ಯ ವಿಚಾರವಾಗಿತ್ತು. ಸ್ವಾತಂತ್ರ್ಯೋತ್ತರ ಭಾರತದಲ್ಲಿ ತೆರಿಗೆದಾರ ಮತ್ತು ತೆರಿಗೆ ಸಂಗ್ರಾಹಕನ ಸಂಬಂಧ ಹೇಗಿತ್ತು ಎಂದರೆ ಶೋಷಣೆಗೊಳಗಾದವ ಮತ್ತು ಶೋಷಕ ನಡುವಿನ ಸಂಬಂಧದಂತೆ ಇತ್ತು. ಹಂತ ಹಂತವಾಗಿ ಈ ವ್ಯವಸ್ಥೆಯನ್ನು ತೊಡೆದು ಹಾಕಿ, ಫೇಸ್​ಲೆಸ್​, ತ್ವರಿತ ಕಾರ್ಯ ನಡೆಯುವಂತ ಡಿಜಿಟಲ್ ವೇದಿಕೆಯನ್ನು ಸೃಷ್ಟಿಸಲಾಗಿದೆ. ಇಲ್ಲಿ ಮಾನವ ಹಸ್ತಕ್ಷೇಪ ಕಡಿಮೆ ಇದೆ.

ಈಗ ದೇಶ ಅದನ್ನು ಅಲ್ಲೆ ಬಿಟ್ಟು ಟ್ಯಾಕ್ಸ್ ಟ್ರಾನ್ಸಪರೆನ್ಸಿ ಕಡೆಗೆ ಹೆಜ್ಜೆ ಹಾಕಿದೆ. ನಾವು ಸುಧಾರಣೆಯ ಪರಿಕಲ್ಪನೆಯನ್ನು ದೇಶದ ಮುಂದಿಟ್ಟು, ಅದನ್ನು ಅನುಷ್ಠಾನಗೊಳಿಸಿ, ಕಾರ್ಯಶೀಲವಾಗುವಂತೆ ಮಾಡಿದೆವು. ಈ ನಮ್ಮ ಪ್ರಯತ್ನ ಬದಲಾವಣೆಯನ್ನು ತಂದಿತು. ಟೆಕ್ನಾಲಜಿಯನ್ನು ಬಳಸಿಕೊಂಡು ವ್ಯವಸ್ಥೆಯನ್ನು ಸುಧಾರಿಸಿದ್ದು, ತೆರಿಗೆದಾರ ಮತ್ತು ತೆರಿಗೆಸಂಗ್ರಾಹಕರ ನಡುವೆ ಉತ್ತಮ ವಿಶ್ವಾಸ ಮೂಡುವಂತೆ ಮಾಡಿದ್ದೇವೆ ಎಂದು ಮೋದಿ ಹೇಳಿದರು. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net