ಆಭರಣ ಪ್ರಿಯರಿಗೆ ಗುಡ್​ ನ್ಯೂಸ್​: ಮತ್ತೆ ಕುಸಿದ ಚಿನ್ನದ ದರ! ಬೆಂಗಳೂರಲ್ಲಿ ಇಂದು ಬಂಗಾರದ ಬೆಲೆ ಎಷ್ಟಿದೆ? Gold Rate Today

ಬೆಂಗಳೂರಿನಲ್ಲಿ ಇಂದಿನ ಚಿನ್ನದ ದರವನ್ನು ಗಮನಿಸುವುದಾದರೆ, 22 ಕ್ಯಾರೆಟ್ ಆಭರಣ ಚಿನ್ನದ 10 ಗ್ರಾಂ ಬೆಲೆಯಲ್ಲಿ ಬರೋಬ್ಬರಿ 2,950 ರೂಪಾಯಿ ಇಳಿಕೆಯಾಗಿದ್ದು, ಪ್ರಸ್ತುತ 1,14,200 ರೂಪಾಯಿಗೆ ತಲುಪಿದೆ.
Gold Rate Today
ಸಾಂದರ್ಭಿಕ ಚಿತ್ರ
Published on: 

ಬೆಂಗಳೂರು: ಮದುವೆ ಸೀಸನ್ ನಡುವೆಯೇ ಚಿನ್ನ ಮತ್ತು ಬೆಳ್ಳಿ ಖರೀದಿದಾರರಿಗೆ ಭರ್ಜರಿ ಸಿಹಿಸುದ್ದಿ ಸಿಕ್ಕಿದೆ. ನವೆಂಬರ್ 25, 2026ರ ಇಂದು ಬೆಂಗಳೂರು ಮತ್ತು ಚೆನ್ನೈ ಮಾರುಕಟ್ಟೆಗಳಲ್ಲಿ ಬಂಗಾರದ ದರದಲ್ಲಿ ( Gold Rate Today ) ಭಾರಿ ಇಳಿಕೆ ಕಂಡುಬಂದಿದ್ದು, ಗ್ರಾಹಕರ ಮುಖದಲ್ಲಿ ಮಂದಹಾಸ ಮೂಡಿಸಿದೆ.

ಬೆಂಗಳೂರಿನಲ್ಲಿ ಇಂದಿನ ಚಿನ್ನದ ದರವನ್ನು ಗಮನಿಸುವುದಾದರೆ, 22 ಕ್ಯಾರೆಟ್ ಆಭರಣ ಚಿನ್ನದ 10 ಗ್ರಾಂ ಬೆಲೆಯಲ್ಲಿ ಬರೋಬ್ಬರಿ 2,950 ರೂಪಾಯಿ ಇಳಿಕೆಯಾಗಿದ್ದು, ಪ್ರಸ್ತುತ 1,14,200 ರೂಪಾಯಿಗೆ ತಲುಪಿದೆ. ಅದೇ ರೀತಿ, 24 ಕ್ಯಾರೆಟ್ ಶುದ್ಧ ಚಿನ್ನದ 10 ಗ್ರಾಂ ದರದಲ್ಲಿ 3,170 ರೂಪಾಯಿ ಕುಸಿತ ಕಂಡುಬಂದಿದ್ದು, 1,24,580 ರೂಪಾಯಿಗೆ ಮಾರಾಟವಾಗುತ್ತಿದೆ. ಇನ್ನು 18 ಕ್ಯಾರೆಟ್ ಚಿನ್ನದ 10 ಗ್ರಾಂ ಬೆಲೆಯಲ್ಲೂ 2,410 ರೂಪಾಯಿ ಇಳಿಕೆಯಾಗಿದ್ದು, ಇಂದಿನ ದರ ಸುಮಾರು 93,440 ರೂಪಾಯಿಗಳಷ್ಟಿದೆ.

Also Read
ಚಿನ್ನದ ಬೆಲೆಯಲ್ಲಿ ₹18,530 ಇಳಿಕೆ! ಬಂಗಾರ ಖರೀದಿಗೆ ಇದು ಸೂಕ್ತ ಸಮಯವೇ? ಈ 3 ದಿನಾಂಕಗಳ ಮೇಲೆ ನಿಮ್ಮ ಕಣ್ಣಿರಲಿ...Gold Rate
Gold Rate Today

ನೆರೆಯ ತಮಿಳುನಾಡಿನ ರಾಜಧಾನಿ ಚೆನ್ನೈನಲ್ಲೂ ಸಹ ಚಿನ್ನದ ಬೆಲೆಯಲ್ಲಿ ಇದೇ ರೀತಿಯ ಭಾರಿ ಇಳಿಕೆ ದಾಖಲಾಗಿದೆ. ಚೆನ್ನೈನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ದರ 2,950 ರೂಪಾಯಿ ಇಳಿಕೆಯಾಗಿ 1,14,200 ರೂಪಾಯಿಗೆ ತಲುಪಿದ್ದರೆ, 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 3,170 ರೂಪಾಯಿ ಕಡಿಮೆಯಾಗಿ 1,24,580 ರೂಪಾಯಿ ಆಗಿದೆ. ಅಲ್ಲದೆ, 18 ಕ್ಯಾರೆಟ್ 10 ಗ್ರಾಂ ಬಂಗಾರದ ದರ 2,410 ರೂಪಾಯಿ ಇಳಿಕೆಯೊಂದಿಗೆ 93,440 ರೂಪಾಯಿಗೆ ನಿಂತಿದೆ.

ಇನ್ನು ಬೆಳ್ಳಿ ದರದ ವಿಷಯಕ್ಕೆ ಬಂದರೆ, ಬೆಂಗಳೂರು ಮತ್ತು ಚೆನ್ನೈ ಎರಡೂ ನಗರಗಳಲ್ಲಿ ಇಂದು ಪ್ರತಿ ಕೆಜಿ ಬೆಳ್ಳಿ 1,65,000 ರೂಪಾಯಿಗೆ ಮಾರಾಟವಾಗುತ್ತಿದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಏರಿಳಿತಗಳ ಪರಿಣಾಮವಾಗಿ ಕಳೆದ ಕೆಲವು ವಾರಗಳಿಂದ ಮದುವೆ ಸೀಸನ್ ನಡುವೆಯೂ ಚಿನ್ನದ ಬೆಲೆಯಲ್ಲಿ ಇಳಿಕೆಯ ಹಾದಿ ಕಂಡುಬರುತ್ತಿದೆ. ಕಳೆದ ಕೆಲವು ದಿನಗಳಲ್ಲಿ 24 ಕ್ಯಾರೆಟ್ ಚಿನ್ನವು 10 ಗ್ರಾಂಗೆ 1,30,000 ರೂಪಾಯಿ ಹಾಗೂ 22 ಕ್ಯಾರೆಟ್ ಚಿನ್ನವು 1,40,000 ರೂಪಾಯಿ ಆಸುಪಾಸಿನಲ್ಲಿ ಏರಿಳಿತ ಕಾಣುತ್ತಿತ್ತು. ಇದೀಗ ಬೆಲೆ ಮತ್ತಷ್ಟು ತಗ್ಗಿರುವುದು ಆಭರಣ ಪ್ರಿಯರಿಗೆ ಮತ್ತು ಹೂಡಿಕೆದಾರರಿಗೆ ಉತ್ತಮ ಅವಕಾಶ ಒದಗಿಸಿದೆ.

Also Read
ಬ್ಯಾಂಕ್‌ನಲ್ಲಿ ಚಿನ್ನ ಅಡವಿಟ್ಟಿದ್ದೀರಾ? ಹಾಗಾದ್ರೆ ಈ ಸುದ್ದಿ ತಪ್ಪದೇ ಓದಿ, ನೋಟಿಸ್ ಬಂದಾಕ್ಷಣ ಇದನ್ನು ಮಾಡದಿದ್ರೆ ಚಿನ್ನ ಹರಾಜು ಗ್ಯಾರಂಟಿ! Gold Loan
Gold Rate Today

ಇಲ್ಲಿ ಉಲ್ಲೇಖಿಸಲಾಗಿರುವ ದರಗಳು ಇಂದು ಬೆಳಗ್ಗೆ 8 ಗಂಟೆಯ ವೇಳೆಗೆ ದಾಖಲಾದ ಬೆಲೆಗಳಾಗಿವೆ. ಜಾಗತಿಕ ಮಾರುಕಟ್ಟೆಯ ಚಲನವಲನಗಳಿಗೆ ಅನುಗುಣವಾಗಿ ಚಿನ್ನದ ಬೆಲೆಗಳು ಪ್ರತಿ ಕ್ಷಣವೂ ಬದಲಾಗುತ್ತಿರುತ್ತವೆ. ಈ ದರಗಳು ನಿನ್ನೆಯ ಮಾರುಕಟ್ಟೆಯ ಮುಕ್ತಾಯದ ಬೆಲೆಗಳನ್ನು ಆಧರಿಸಿದ್ದು, ಇಂದಿನ ವಹಿವಾಟಿನ ಅವಧಿಯಲ್ಲಿ ಬೆಲೆಗಳು ಮತ್ತಷ್ಟು ಇಳಿಕೆಯಾಗುವ ಅಥವಾ ಏರಿಕೆಯಾಗುವ ಸಾಧ್ಯತೆ ಇರುವುದರಿಂದ, ಖರೀದಿದಾರರು ಮಳಿಗೆಗೆ ತೆರಳುವ ಮುನ್ನ ಆಯಾ ಸಮಯದ ಲೈವ್ ದರಗಳನ್ನು ಪರಿಶೀಲಿಸುವುದು ಉತ್ತಮ, (ಏಜೆನ್ಸೀಸ್​).