More

    ಕ್ರೀಡೆಗಳ ತವರಲ್ಲಿ ಮೈದಾನಕ್ಕೆ ಬರ

    ಮಡಿಕೇರಿ:

    ಭೌಗೋಳಿಕವಾಗಿ ವಿಶಿಷ್ಟ ಜಿಲ್ಲೆಯಾಗಿರುವ ಕೊಡಗಿನಿಂದ ಕ್ರೀಡಾ ಕ್ಷೇತ್ರಕ್ಕೆ ಸಾಕಷ್ಟು ಕೊಡುಗೆ ಸಿಕ್ಕಿದೆ. ಸೀಮಿತ ಸವಲತ್ತುಗಳ ನಡುವೆಯೇ ಇಲ್ಲಿನ ಕ್ರೀಡಾ ಪ್ರತಿಭೆಗಳು ಅಂತಾರಾಷ್ಟ್ರೀಯ ಮಟ್ಟದಲ್ಲೂ ಮಿಂಚುತ್ತಿವೆ. ಕ್ರೀಡಾ ಮೂಲಭೂತ ಸೌಕರ್ಯಗಳನ್ನು ಒದಗಿಸುವಂತೆ ಹಿಂದಿನಿಂದಲೂ ಸ್ಥಳೀಯ ಕ್ರೀಡಾಭಿಮಾನಿಗಳು ಸಂಬಂಧಿಸಿದವರ ಮುಂದೆ ಬೇಡಿಕೆ ಇಡುತ್ತಾ ಬರುತ್ತಿದ್ದಾರೆ.

    ಕೊಡಗಿನಲ್ಲಿ ಜಿಲ್ಲಾ ಕೇಂದ್ರ ಮಡಿಕೇರಿ ಸೇರಿದಂತೆ ಕೆಲವು ಕಡೆಗಳಲ್ಲಿ ಮಾತ್ರ ಬೆರಳೆಣಿಕೆಯಷ್ಟು ಸುಸಜ್ಜಿತ ಕ್ರೀಡಾಂಗಣಗಳು ಇವೆ. ಉಳಿದೆಡೆಗಳಲ್ಲಿ ಕ್ರೀಡಾಪಟುಗಳ ಅಭ್ಯಾಸಕ್ಕೆ ಕಚ್ಚಾ ಆಟದ ಮೈದಾನಗಳೇ ಗತಿ. ಮತ್ತೆ ಕೆಲವು ಕಡೆಗಳಲ್ಲಿ ಈ ಸೌಲಭ್ಯವೂ ಇಲ್ಲ. ಬಹುತೇಕ ಊರುಗಳಲ್ಲಿ ಶಾಲಾ-ಕಾಲೇಜುಗಳ ಆಟದ ಮೈದಾನವೇ ಕ್ರೀಡಾಪಟುಗಳ ಪಾಲಿನ ಅಭ್ಯಾಸದ ಜಾಗಗಳಾಗಿದೆ. ಗ್ರಾಮೀಣ ಪ್ರದೇಶಗಳಲ್ಲಂತೂ ಭತ್ತದ ಗದ್ದೆಗಳನ್ನು ಆಟದ ಮೈದಾನವನ್ನಾಗಿ ಬಳಸಿಕೊಳ್ಳುವ ಅನಿವಾರ್ಯತೆ ಇದೆ.

    ಕೌಟುಂಬಿಕ ಪಂದ್ಯಾವಳಿಗಳ ಮೂಲಕವೂ ಸದ್ದು ಮಾಡುವ ಕೊಡಗಿನಲ್ಲಿ ಹಾಕಿ ಅಥವಾ ಕ್ರಿಕೆಟ್ ಆಡಲು ಸೂಕ್ತ ಮೈದಾನದ ಕೊರತೆ ಇದೆ. ಆತಿಥ್ಯ ವಹಿಸಿಕೊಳ್ಳುವ ಕುಟುಂಬಗಳೇ ತಮ್ಮ ಸರದಿ ಬಂದಾಗ ಲಕ್ಷಾಂತರ ರೂ. ವ್ಯಯಿಸಿ ಮೈದಾನಗಳನ್ನು ಸಿದ್ದಪಡಿಸಿಕೊಳ್ಳುವುದು, ಆಟಗಾರರ ಗ್ಯಾಲರಿ ನಿರ್ಮಿಸಿಕೊಳ್ಳುವುದು ಸೇರಿದಂತೆ ಅಗತ್ಯ ಸೌಲಭ್ಯಗಳ ವ್ಯವಸ್ಥೆ ಮಾಡಿಕೊಳ್ಳುತ್ತಾರೆ.

    ಪ್ರತಿ ವರ್ಷ ಬೇಸಿಗೆ ಬಂತೆಂದರೆ ಸಾಕು ಕೊಡಗಿನಲ್ಲಿ ಕ್ರೀಡಾಕೂಟಗಳ ಸಂಭ್ರಮ ಗರಿಗೆದರುತ್ತದೆ. ಆದರೆ ಜಿಲ್ಲೆಯಲ್ಲಿ ಸುಸಜ್ಜಿತ ಕ್ರೀಡಾಂಗಣಗಳ ಕೊರತೆ ಇದೆ. ಕ್ರೀಡಾಕೂಟದ ಸಿಂಹಪಾಲು ಹಣವನ್ನು ಸಂಘಟಕರು ಮೈದಾನ ಸಜ್ಜುಗೊಳಿಸಲು ವ್ಯಯಿಸಬೇಕಾಗುತ್ತದೆ. ಕ್ರೀಡಾ ಜಿಲ್ಲೆ ಹೆಗ್ಗಳಿಕೆಯ ಕೊಡಗಿನಲ್ಲಿ ಕನಿ?್ಠ ಹೋಬಳಿಗೆ ಒಂದಾದರೂ ಉತ್ತಮ ಗುಣಮಟ್ಟದ ಕ್ರೀಡಾಂಗಣ ಬೇಕು ಎನ್ನುವುದು ಸ್ಥಳೀಯರ ಬೇಡಿಕೆ. ಈ ಬಗ್ಗೆ ವಿಜಯವಾಣಿ ಓದುಗರು ಹಂಚಿಕೊಂಡ ಅಭಿಪ್ರಾಯಗಳು ಇಲ್ಲಿದೆ.

    ಗ್ರಾಮೀಣ ಭಾಗದಲ್ಲಿ ಎಲೆಮರೆ ಕಾಯಿಯಂತಿರುವ ಕ್ರೀಡಾ ಪ್ರತಿಭೆಗಳನ್ನು ಗುರುತಿಸಲು ಸುಸಜ್ಜಿತ ಮೈದಾನಗಳ ಅವಶ್ಯಕತೆಯಿದೆ. ಕ್ರೀಡಾಜಿಲ್ಲೆ ಎಂಬ ಹೆಸರಿದೆ. ಮೈದಾನಗಳ ದುರಸ್ತಿಗೆ ಹೆಚ್ಚಿನ ಅನುದಾನ ಸಿಗಲೇಬೇಕು. ಈ ನಿಟ್ಟಿನಲ್ಲಿ ಕ್ರೀಡಾಪಟುಗಳು ಸರ್ಕಾರಕ್ಕೆ ಮನವಿ ಮಾಡಿಕೊಳ್ಳಬೇಕು.
    ಶೀಲಾ ಡಿಸೋಜ, ಸದಸ್ಯರು, ಸೋಮವಾರಪೇಟೆ ಪಟ್ಟಣ ಪಂಚಾಯಿತಿ

    ದೈಹಿಕ ಹಾಗು ಮಾನಸಿಕ ಬೆಳೆವಣಿಗೆಗೆ ವಿದ್ಯಾರ್ಥಿಗಳು ಕ್ರೀಡಾಚಟುವಟಿಕೆಯಲ್ಲಿ ತೊಡಗಿಕೊಳ್ಳಬೇಕು. ಸರ್ಕಾರಿ ಶಾಲೆಗಳ ಮೈದಾನಗಳು ಹಾಳಾಗಿವೆ. ಸುಸಜ್ಜಿತ ಮೈದಾನಗಳಿಲ್ಲದೆ ಕ್ರೀಡಾಪಟುಗಳಿಗೆ ಸಮಸ್ಯೆಯಾಗಿದೆ. ಪ್ರತಿ ಶಾಲೆಗಳ ಮೈದಾನಗಳನ್ನು ಸುಸಜ್ಜಿತಗೊಳಿಸಬೇಕು.
    ಚಂದನ ಸುಬ್ರಮಣಿ, ಫೋಟೋಗ್ರಾಫರ್, ಸೋಮವಾರಪೇಟೆ

    ಸಿದ್ದಾಪುರ, ಮಾಲ್ದಾರೆ ವ್ಯಾಪ್ತಿಯಲ್ಲಿ ಸಾವಿರಾರು ಕ್ರೀಡಾಪಟುಗಳಿದ್ದರೂ, ಒಂದೇ ಒಂದು ಮೈದಾನ ಇಲ್ಲ. ಸಾರ್ವಜನಿಕ ಮೈದಾನದ ಕೊರತೆಯಿಂದಾಗಿ ಕ್ರೀಡಾಕೂಟಗಳು ಆಯೋಜನೆಗೊಳ್ಳುತ್ತಿಲ್ಲ. ನಾವು ಎರಡು ಬಾರಿ ಗದ್ದೆಯನ್ನು ಮೈದಾನ ಮಾಡಿ ಕೆ.ಸಿ.ಎಲ್. ಕ್ರಿಕೆಟ್ ಪಂದ್ಯಕೂಟ ನಡೆಸಿದ್ದು, ಗದ್ದೆಯನ್ನು ಮೈದಾನವಾಗಿ ಪರಿವರ್ತನೆ ಮಾಡಲು ಸುಮಾರು ೫ ಲಕ್ಷ ರೂ.ಗಳ?್ಟು ಖರ್ಚು ಮಾಡಬೇಕಾಗುತ್ತದೆ. ಆದ್ದರಿಂದ ಆರ್ಥಿಕ ಹೊರೆಯಿಂದಾಗಿ ಕಳೆದ ಮೂರ್ನಾಲ್ಕು ವ?ರ್ಗಳಿಂದ ಕೆ.ಸಿ.ಎಲ್. ಪಂದ್ಯಾಟ ನಡೆಸಲಾಗುತ್ತಿಲ್ಲ.
    ಮುಸ್ತಾಫ, ಕೆ.ಸಿ.ಎಲ್. ಸಂಸ್ಥಾಪಕ, ಸಿದ್ದಾಪುರ

    ಕೊಡಗಿನಲ್ಲಿ ಬೇಸಿಗೆಯಲ್ಲಿ ಎಲ್ಲೆಡೆ ಕ್ರೀಡೆಯ ಕಲರವ ಆರಂಭವಾಗುತ್ತದೆ. ಒಂದು ಕ್ರೀಡೆಯನ್ನು ಆಯೋಜಿಸಬೇಕಾದರೆ ಆಯೋಜಕರು ಹರಸಾಹಸ ಪಡಬೇಕಾದ ಪರಿಸ್ಥಿತಿ ಇದ್ದು, ಕ್ರಿಕೆಟ್, ಕಬಡ್ಡಿ ಮತ್ತಿತರ ಕ್ರೀಡೆಗಳಿಗೆ ಸಂಬಂಧಿಸಿದಂತಹ ಯಾವುದೇ ಕ್ರೀಡಾಂಗಣ ಇಲ್ಲದಿರುವುದು ಒಂದು ದೊಡ್ಡ ಸಮಸ್ಯೆ. ಆಯೋಜಕರು ಆಟದ ಮೈದಾನ ಸಿದ್ಧಪಡಿಸಲು, ಮೈದಾನ ಸಮತಟ್ಟು ಮಾಡಲು ಹಾಗೂ ಕ್ರೀಡಾಪಟುಗಳಿಗೆ ಮತ್ತು ಪ್ರೇಕ್ಷಕರಿಗೆ ನೆರಳಿನ ವ್ಯವಸ್ಥೆ ಮಾಡಲು ಶಾಮಿಯಾನ, ಕುಡಿಯುವ ನೀರಿನ ವ್ಯವಸ್ಥೆ, ಆಸನ ವ್ಯವಸ್ಥೆ ಮುಂತಾದ ಸೌಕರ್ಯಗಳನ್ನು ಸಿದ್ಧಪಡಿಸಲು ಪ್ರತಿವ?ರ್ ದೊಡ್ಡ ಮೊತ್ತವನ್ನು ವ್ಯಯ ಮಾಡಬೇಕಾಗುತ್ತದೆ. ಆದ್ದರಿಂದ ತಾಲೂಕುಗಳಲ್ಲಿ ಒಂದಾದರೂ ಸುಸಜ್ಜಿತವಾದ ಕ್ರೀಡಾಂಗಣ ನಿರ್ಮಾಣವಾದರೆ ಕ್ರೀಡೆಗಳಿಗೆ ದೊಡ್ಡ ಮಟ್ಟದ ಪ್ರೋತ್ಸಾಹ ಹಾಗೂ ಆಯೋಜಕರಿಗೆ ಅನಗತ್ಯವಾಗಿ ಒದುಗುವ ದೊಡ್ಡ ಮಟ್ಟದ ಹೊರೆ ಕಡಿಮೆಯಾಗುತ್ತದೆ
    ಎಲಿಯಾಸ್, ಚಿಟ್ಟಡೆ ಗ್ರಾಮ, ವಿರಾಜಪೇಟೆ

    ಕೊಡಗಿನಲ್ಲಿ ಬೇಸಿಗೆ ಪ್ರಾರಂಭವಾಗಿ ಮಕ್ಕಳಿಗೆ ಪರೀಕ್ಷೆ ಮುಗಿಯುವಾಗ ವಿವಿಧ ಕ್ರೀಡಾಕೂಟಗಳು ಶುರುವಾಗಿರುತ್ತದೆ. ಅದಕ್ಕಾಗಿ ಕ್ರೀಡಾಂಗಣ ನಿರ್ಮಾಣಕ್ಕೆ ಆಯೋಜಕರು ಅಪಾರ ಹಣ ವೆಚ್ಚ ಮಾಡಬೇಕಾಗುತ್ತದೆ. ಕ್ರೀಡಾಕೂಟ ಮುಗಿದ ನಂತರ ನಿರ್ವಹಣೆ ಇಲ್ಲದೆ ಕ್ರೀಡಾಂಗಣಗಳು ಹಾಳಾಗುತ್ತದೆ. ಯಾವುದೋ ಒಂದು ನಿಗದಿತ ಆಟಕ್ಕೆ ಅನುಕೂಲವಾಗುವಂತೆ ಸಿದ್ಧಪಡಿಸುವುದರಿಂದ ಅದನ್ನು ಬೇರೆ ಆಟೋಟಗಳಿಗೆ ಬಳಸಲಾಗುವುದಿಲ್ಲ. ಇದರ ಬದಲಿಗೆ ಪ್ರತಿ ಹೋಬಳಿ ಮಟ್ಟದಲ್ಲಿ ಶಾಶ್ವತವಾದ ಉತ್ತಮ ಗುಣಮಟ್ಟದ ಕ್ರೀಡಾಂಗಣ ನಿರ್ಮಿಸಿ ಅದರ ನಿರ್ವಹಣೆಯನ್ನು ಸಂಘ ಸಂಸ್ಥೆಗಳು ಅಥವಾ ಯುವಜನ ಮತ್ತು ಕ್ರೀಡಾ ಇಲಾಖೆಗೆ ವಹಿಸಿ ನಿರಂತರವಾಗಿ ಉಪಯೋಗಿಸುವಂತೆ ಮಾಡಿದರೆ ಅನುಕೂಲ.
    ನಳಿನಿ ಪಿ.ಕೆ., ನಿವೃತ್ತ ಪ್ರಾಂಶುಪಾಲರು, ಚೇರಂಬಾಣೆ

    ಕೊಡಗು ಜಿಲ್ಲೆ ಸೇನೆ ಮತ್ತು ಕ್ರೀಡಾಪಟುಗಳ ತವರು. ಇಂತಹ ಜಿಲ್ಲೆಯಲ್ಲಿ ಸುಸಜ್ಜಿತ ಕ್ರೀಡಾಂಗಣ ಇಲ್ಲದಿರುವುದರಿಂದ ಕ್ರೀಡಾ ಪ್ರತಿಭೆ ಅನಾವರಣವಾಗುವುದಕ್ಕೆ ತೊಂದರೆಯಾಗುತ್ತಿದೆ. ಕುಶಾಲನಗರ ಅತ್ಯಂತ ವೇಗವಾಗಿ ಬೆಳೆಯುತ್ತಿರುವುದರಿಂದ ಸುಸಜ್ಜಿತವಾದ ಒಳಾಂಗಣ ಮತ್ತು ಹೊರಾಂಗಣ ಕ್ರೀಡಾಂಗಣ ನಿರ್ಮಿಸುವ ಅವಶ್ಯಕತೆ ಖಂಡಿತ ಇದೆ. ಜನಪ್ರತಿನಿಧಿಗಳು ತಕ್ಷಣ ಈ ವಿಚಾರದಲ್ಲಿ ನಿರ್ಧಾರ ಕೈಗೊಳ್ಳಬೇಕಾಗಿದೆ.
    ಕೆ.ಬಿ. ಮೋಹನ್, ನೋಟರಿ, ಕುಶಾಲನಗರ.

    ಕೊಡಗಿನಲ್ಲಿ ಕ್ರೀಡಾಪಟುಗಳಿಗೆ ಕೊರತೆ ಇಲ್ಲ. ಆದರೆ ಅಭ್ಯಾಸ ಮಾಡಲು ಸುಸಜ್ಜಿತ ಕ್ರೀಡಾಂಗಣವಿಲ್ಲದ ಕಾರಣ ಎ?್ಟೋ ಆಟಗಾರರ ಪ್ರತಿಭೆ ಅನಾವರಣಗೋಳ್ಳುವುದೇ ಇಲ್ಲ. ಪ್ರತಿ ಹೋಬಳಿಗೂ ಕ್ರೀಡಾಂಗಣ ದೊರೆತರೆ ಎಲ್ಲರಿಗೂ ಅವಕಾಶ ಸಿಗುತ್ತದೆ ಮತ್ತು ಆಟಗಾರರು ಅಭ್ಯಾಸ ಮಾಡಲು ಬೇರೆ ಎಲ್ಲೋ ಹೊರಗೆ ಹೋಗುವ ಅವಶ್ಯಕತೆ ಇರುವುದಿಲ್ಲ. ಕ್ರೀಡಾಕೂಟಗಳ ಆಯೋಜನೆಗಳಿಗೆ ಹೆಚ್ಚು ಹಣ ವ್ಯಯಿಸುವ ಅವಶ್ಯಕತೆಯೂ ಇರುವುದಿಲ್ಲ.
    ಸವಿತಾ ಪ್ರತಾಪ್, ಶಿಕ್ಷಕಿ, ಶ್ರೀ ವಿಘ್ನೇಶ್ವರ ಬಾಲಕಿಯರ ಪದವಿ ಪೂರ್ವ ಕಾಲೇಜು, ಶನಿವಾರಸಂತೆ

    ಸುತ್ತ ಮುತ್ತ ಕ್ರೀಡಾ ಪ್ರತಿಭೆಗಳಿದ್ದು ಪ್ರತಿಭೆಗಳಿಗೆ ಅವಕಾಶ ಕಲ್ಪಿಸಲು ಒಂದು ಬೃಹತ್ ಆಟದ ಮೈದಾನ ಅವಶ್ಯಕತೆ ಇದೆ. ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಿ ಮುಂದಿನ ದಿನಗಳಲ್ಲಿ ನಮ್ಮ ಹೋಬಳಿಯಲ್ಲಿ ಒಂದು ಆಟದ ಮೈದಾನದ ಕೊರತೆಯನ್ನು ನೀಗಿಸಲಿ ಎಂದು ಆಶಿಸುತ್ತೇವೆ.
    ಗೀತಾ, ಮೈಸ್ ಕಂಪ್ಯೂಟರ್ ಶಿಕ್ಷಣ ಕೇಂದ್ರ, ಶನಿವಾರಸಂತೆ

    ಕೊಡಗಿನಲ್ಲಿ ಕ್ರೀಡೆ ಎಂದಿಗೂ ಜನಪ್ರಿಯ. ಕೊಡಗಿನ ಜನತೆ ಶತಮಾನಗಳಿಂದಲೂ ಕ್ರೀಡೆಗೆ ಮಹತ್ವ ನೀಡುತ್ತಾ ಬಂದಿದ್ದಾರೆ. ಕ್ರೀಡೆಯಲ್ಲಿ ಭಾಗವಹಿಸುವವರಿಗೆ ಮತ್ತು ನೋಡಲು ಬರುವ ಪ್ರೇಕ್ಷಕರಿಗೆ ಕ್ರೀಡೆ ವೀಕ್ಷಿಸಲು ಬೇಕಾದ ಅನುಕೂಲತೆ ಒದಗಿಸಬೇಕು. ಈ ನಿಟ್ಟಿನಲ್ಲಿ ಬೇಡಿಕೆಯನ್ನು ಪೂರೈಸುವುದು ಸಂಬಂಧ ಪಟ್ಟವರ ಆದ್ಯ ಕರ್ತ್ಯವಾಗಿರುತ್ತದೆ.
    ರಜೀಯಾ, ಶಿಕ್ಷಕಿ, ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ, ಶನಿವಾರಸಂತೆ

    ಭವಿಷ್ಯದಲ್ಲಿ ಕೊಡಗಿನಲ್ಲಿ ಸುಸಜ್ಜಿತ ಕ್ರೀಡಾಂಗಣಗಳಿ ನಿರ್ಮಿಸುವ ಪ್ರಸ್ತಾವನೆ ಇದೆ. ಮಡಿಕೇರಿ ಮ್ಯಾನ್ಸ್‌ಕಾಂಪೋಂಡ್‌ನಲ್ಲಿ ಸ್ಟೇಡಿಯಂ ನಿರ್ಮಾಣಕ್ಕೆ ಸಂಬಂಧಿಸಿದಂತೆ ಅಂದಾಜು ಪಟ್ಟಿ ಸಲ್ಲಿಸಲು ಕೆಆರ್‌ಐಡಿಎಲ್‌ಗೆ ಕೇಳಿಕೊಳ್ಳಲಾಗಿದೆ. ಮಡಿಕೇರಿ ತಾಲೂಕು ಚೆಂಬು ಗ್ರಾಮದಲ್ಲಿ ಆಟದ ಮೈದಾನ ನಿರ್ಮಾಣಕ್ಕೆ ಕಳೆದ ತಿಂಗಳು ೪ ಎಕರೆ ಜಾಗ ನಮ್ಮ ಇಲಾಖೆಗೆ ಹಸ್ತಾಂತರ ಆಗಿದೆ. ಹೋಬಳಿ ಮಟ್ಟದಲ್ಲೂ ಉತ್ತಮ ಆಟದ ಮೈದಾನ ನಿರ್ಮಿಸುವ ಚಿಂತನೆ ಜನಪ್ರತಿನಿಧಿಗಳು ಹಂಚಿಕೊಂಡಿದ್ದಾರೆ.
    ವಿಸ್ಮಯಿ, ಉಪನಿರ್ದೇಶಕಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts