More

    ಅಹಂಕಾರದಿಂದ ಹೊರ ಬಂದು ಸಮಾಜಕ್ಕೆ ಸಹಕಾರಿಯಾಗಿ

    ಎನ್.ಆರ್.ಪುರ: ಮನುಷ್ಯ ಅಹಂಕಾರದಿಂದ ಹೊರ ಬಂದು ಸಮಾಜಕ್ಕೆ ಸಹಕಾರಿಯಾಗಿ ಬಾಳಬೇಕು ಎಂದು ತಾಲೂಕು ಸಿರಿಗನ್ನಡ ವೇದಿಕೆ ಅಧ್ಯಕ್ಷೆ ಕೆ.ಪಿ.ಮೀನಾಕ್ಷಿ ಕಾಂತರಾಜ್ ಹೇಳಿದರು.
    ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸಿರಿಗನ್ನಡ ವೇದಿಕೆ ತಾಲೂಕು ಘಟಕದ ಆಶ್ರಯದಲ್ಲಿ , ಕರ್ನಾಟಕ ಏಕೀಕರಣ 50ರ ನಿತ್ಯೋತ್ಸವ ಕಾರ್ಯಕ್ರಮದ ಅಂಗವಾಗಿ ಆಯೋಜಿಸಿದ್ದ ಡಿವಿಜಿಯವರ ಕಗ್ಗದ ಗಂಟು ಇಣುಕು ನೋಟ ಕುರಿತ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
    ಪ್ರತಿಯೊಬ್ಬರೂ ಸಮಾಜಕ್ಕೆ ತಮ್ಮದೇ ಆದ ಕೊಡುಗೆ ನೀಡುವ ದೃಢ ಸಂಕಲ್ಪ ಮಾಡಬೇಕು. ನಾವೆಲ್ಲರೂ ಸಮಾಜದ ಒಂದು ಭಾಗವಾಗಿದ್ದು, ಸಮಾಜ ಸುಸ್ಥಿಯಲ್ಲಿರಬೇಕಾದರೆ ನಾವೆಲ್ಲರೂ ಜವಾಬ್ದಾರಿಯುತವಾಗಿ ಬದುಕಬೇಕು. ಕನ್ನಡ ಉಳಿವಿಗೆ ಶ್ರಮಿಸಬೇಕು. ಕನ್ನಡದ ಕವಿಗಳನ್ನು ಗೌರವಿಸಿ, ಅವರ ಪುಸ್ತಕ, ಪದ್ಯಗಳನ್ನು ಓದುವ ಹವ್ಯಾಸ ಮೈಗೂಡಿಸಿಕೊಳ್ಳಬೇಕು ಎಂದರು.
    ಕಗ್ಗದ ಇಣುಕು ನೋಟ ಕುರಿತು ಉಪನ್ಯಾಸಕ ಆಲ್ಮಕ್ಕಿ.ಎನ್.ಸತೀಶ್ ಉಪನ್ಯಾಸ ನೀಡಿ, ಜ್ಞಾನಕ್ಕಾಗಿ ಓದಬೇಕು. ಜ್ಞಾನದಿಂದ ವಿವೇಕ, ವಿನಯ ಪಡೆಯಬೇಕು. ಅಂತಹ ವಿನಯದ ಜೀವನ ಸಾಗಿಸಿದವರು ಡಿವಿಜಿಯವರು. ಎಂದಿಗೂ ತಾನು ಒಬ್ಬ ಕವಿ ಎಂಬ ಗರ್ವ ತೋರಿದವರಲ್ಲ.ಅವರು ಮಂಕುತಿಮ್ಮನ ಕಗ್ಗದಲ್ಲಿ 945 ಪದ್ಯಗಳನ್ನು ಬರೆದಿದ್ದಾರೆ. ಕಗ್ಗವನ್ನು ಅರಿತರೆ ಸ್ವರ್ಗವಿದೆ ಎಂದು ತಿಳಿಸಿದರು.
    ಹೆಸರು, ಹೆಸರು, ಕೀರ್ತಿಗಾಗಿ ಏಕೆ ಸಾಯುತ್ತೀಯಾ, ಕಸದೊಳಗೆ ಕಸವಾಗಿ, ಮಣ್ಣೊಳಗೆ ಮಣ್ಣಾಗಿ ಹೋಗುವೆ. ಕೋಟ್ಯಾಂತರ ಜೀವಿಗಳಲ್ಲಿ ಮಾನವ ಅಣು ಮಾತ್ರ ಎಂದು ಕಗ್ಗದಲ್ಲಿ ಡಿವಿಜಿಯವರು ವರ್ಣಿಸಿದ್ದಾರೆ. ಗುರುಶಿಷ್ಯ ಅನ್ನುವ ಪಟ್ಟ ಬೇಡ, ನಿನಗೆ ನೀನೇ ಗುರು, ನಿನ್ನ ಯೋಚನೆ, ತೀರ್ಮಾನ, ನಿರ್ಧಾರ ನಿನ್ನದೇ ಆಗಿರಲಿ.ಯಾರ ಒತ್ತಡಕ್ಕೂ ನೀನು ಸಿಲಕುಬೇಡ ಎಂಬ ಡಿವಿಜಿ ಅವರ ಕಗ್ಗದ ಸಾಲುಗಳು ಎಷ್ಟು ಗರ್ಭಿತವಾಗಿವೆ. ಇದನ್ನು ವಿದ್ಯಾರ್ಥಿಗಳು ಅರಿಯಬೇಕು ಎಂದರು.
    ಪ್ರಾಚಾರ್ಯೆ ಸರಸ್ವತಿ ಮಾಯನಾಡಿ, ಪ್ರತಿಯೊಬ್ಬರೂ ಕನ್ನಡ ಭಾಷೆಯನ್ನು ಪ್ರೀತಿಸಬೇಕು.ವಿದ್ಯಾರ್ಥಿಗಳು ಹೆಚ್ಚು ಕನ್ನಡ ಸಾಹಿತ್ಯ ಓದುವುದರಿಂದ ಹೆಚ್ಚು ಜ್ಞಾನ ಸಂಪಾದಿಸಬಹುದು ಎಂದು ತಿಳಿಸಿದರು.
    ಯುವ ಬರಹಗಾರ ಹೊನ್ನೇಕುಡಿಗೆ ಎಲ್ದೋ,, ಉಪನ್ಯಾಸಕರಾದ ಡೇವೀಸ್, ಮೈಲಾರಪ್ಪ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts