More

    ಅಂಜನಾದ್ರಿಗೆ ಆಗಮಿಸಿದ ಸಿಎಂ
    ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ

    ಕೊಪ್ಪಳ‌: ಸಿಎಂ‌ ಬಸವರಾಜ ಬೊಮ್ಮಾಯಿ ಇಂದು ಬೆಳಗ್ಗೆ ಹನುಮನ ಜನ್ಮ ಸ್ಥಾನ ಗಂಗಾವತಿ ತಾಲೂಕಿನ ಅಂಜನಾದ್ರಿ ಬೆಟ್ಟಕ್ಕೆ ಭೇಟಿ ನೀಡಿ ಆಂಜನೇಯನಿಗೆ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದರು.

    ದೇವಸ್ಥಾನ ಆಡಳಿತ ಮಂಡಳಿ ಪೂರ್ಣ ಕುಂಭ, ನಾದಸ್ವರ, ಕಳಸ ಬೆಳಗುವ ಮೂಲಕ ಸಿಎಂಗೆ ಸ್ವಾಗತ ಕೋರಿದರು. ಬೆಟ್ಟದ ಕೆಳ‌ಭಾಗದಲ್ಲಿನ ಆಂಜನೇಯನಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಅಂಜನಾದ್ರಿ ಅಭಿವೃದ್ಧಿಗೆ ಸರ್ಕಾರ 120 ಕೋಟಿ ರೂ. ಅನುದಾನ ಮೀಸಲಿಟ್ಟಿದೆ. ಸಮಗ್ರ ಅಭಿವೃದ್ಧಿಗೆ ಯೋಜನೆ ರೂಪಿಸಿದ್ದು,  2022ರ ಆಗಸ್ಟ್ ನಲ್ಲಿ‌ ಬೆಟ್ಟಕ್ಕೆ ಭೇಟಿ ನೀಡಿದ್ದ ಬೊಮ್ಮಾಯಿ ಪೂಜೆ ಸಲ್ಲಿಸಿ ಕಾಮಗಾರಿ ಆರಂಭಿಸುವ ಭರವಸೆ ನೀಡಿದ್ದರು.

    ಇಂದು ವಿವಿಧ ಕಾಮಗಾರಿಗಳಿಗೆ ಪೂಜೆ ನೆರವೇರಿಸುವ ಮೂಲಕ ಕಾಮಗಾರಿ ಆರಂಭಿಸುವ ಭರವಸೆ ಮೂಡಿಸಿದ್ದಾರೆ. ಆರಂಭಿಕವಾಗಿ ಪ್ರದಕ್ಷಿಣ ಪಥ, ಶಾಪಿಂಗ್ ಕಾಂಪ್ಲೆಕ್ಸ್, ಸಾರ್ವಜನಿಕ ಶೌಚಗೃಹ, ಪ್ರವಾಸಿ ಮಂದಿರ ಕಾಮಗಾರಿಗೆ ಶಿಲನ್ಯಾಸ ನೆರವೇರಿಸಿದರು‌.

    ಬಳಿಕ ಮಾತನಾಡಿಸ ಸಿಎಂ, ಸದ್ಯ 20 ಕೋಟಿ ಅನುದಾನದಲ್ಲಿ ಪ್ರವಾಸಿ ಮಂದಿರ, ಶೌಚಗೃಹ, ಪ್ರಸಾದ ನಿಲಯ, ಶಾಪಿಂಗ್ ಕಾಂಪ್ಲೆಕ್ಸ್ ನಿರ್ಮಿಸಲಾಗುವುದು. ಮುಂದಿನ ದಿನಗಳಲ್ಲಿ 100 ಕೋಟಿ ರೂ. ಮೊತ್ತದಲ್ಲಿ ರೋಪ್ ವೇ ಸೇರಿ ಇತರ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವುದಾಗಿ ತಿಳಿಸಿದರು.

    ಪೂಜೆ ನಂತರ ಗಂಗಾವತಿ ನಗರದ ಎಪಿಎಂಸಿ ಆವರಣದಲ್ಲಿ ಜಿಲ್ಲಾ ಮಟ್ಟದ ಫಲಾನುಭವಿಗಳ ಸಮಾವೇಶ ಆಯೋಜಿಸಿದ್ದು, ಅದರಲ್ಲಿ ಸಿಎಂ ಭಾಗಿಯಾಗಲಿದ್ದಾರೆ.‌ ಸಚಿವರಾದ ಆನಂದ ಸಿಂಗ್, ಹಾಲಪ್ಪ‌‌ ಆಚಾರ್, ಮುನಿರತ್ನ, ಸಂಸದ ಸಂಗಣ್ಣ ಕರಡಿ, ಶಾಸಕರಾದ ಪರಣ್ಣ ಮುನವಳ್ಳಿ, ಬಸವರಾಜ ದಢೇಸುಗೂರು, ಅಮರೇಗೌಡ ಬಯ್ಯಾಪುರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts