More

    ಫೋನ್​ನಲ್ಲೇ ​ಉಮೇಶ್​ ಕತ್ತಿಗೆ ಸಿಎಂ ಕ್ಲಾಸ್!

    ಬೆಂಗಳೂರು: ಕರೊನಾ ವಿಪತ್ತಿನ ನಡುವೆ ರಾಜ್ಯ ಬಿಜೆಪಿಯಲ್ಲಿ ರಾಜಕೀಯ ಬಿರುಸುಗೊಂಡಿದ್ದು, ಬಿಎಸ್​ವೈ ಮತ್ತು ಸರ್ಕಾರದ ವಿರುದ್ಧ ಅಸಮಾಧಾನಿತ ಶಾಸಕರ ಸಭೆ ನಡೆಸಿದ್ದ ಹಿರಿಯ ಶಾಸಕ ಉಮೇಶ್ ಕತ್ತಿ ಮೇಲೆ ಸಿಎಂ ಬಿ.ಎಸ್​. ಯಡಿಯೂರಪ್ಪ ಕಿಡಿಕಾರಿದ್ದಾರೆ. ಅಲ್ಲದೆ ಇಂದು(ಶುಕ್ರವಾರ ) ತಮ್ಮನ್ನು ಭೇಟಿ ಮಾಡುವಂತೆ ಕತ್ತಿ ಸೇರಿ ಇತರ ಶಾಸಕರಿಗೆ ಬುಲಾವ್​ ನೀಡಿದ್ದಾರೆ.

    ಇದನ್ನೂ ಓದಿರಿ ಆನ್​ಲೈನ್​ ತರಗತಿ ಆವಾಂತರ: ಬೆಂಕಿ ಹಚ್ಚಿಕೊಂಡು ಮಹಿಳೆ ಆತ್ಮಹತ್ಯೆ!

    ಭೋಜನಕೂಟದ ನೆಪದಲ್ಲಿ ಗುರವಾರ ರಾತ್ರಿ ಐದು ಜಿಲ್ಲೆಗಳ ಶಾಸಕರನ್ನು ಒಟ್ಟುಗೂಡಿಸಿ ಉಮೇಶ್ ಕತ್ತಿ ನಡೆಸಿದ ಸಭೆಯಲ್ಲಿ ಸಿಎಂ ವಿರುದ್ಧ ಅಸಮಾಧಾನ ಹೊರಹಾಕಿದ್ದರು. ಈ ಬಗ್ಗೆ ಮಾಹಿತಿ ಪಡೆದ ಸಿಎಂ, ಕತ್ತಿಗೆ ದೂರವಾಣಿ ಕರೆ ಮಾಡಿ ತರಾಟೆಗೆ ತೆಗೆದುಕೊಂಡಿದ್ದಾರೆ.

    ನಿಮ್ಮನ್ನು ಮಂತ್ರಿ ಮಾಡ್ತೇನೆ ಎಂದು ಭರವಸೆ ಕೊಟ್ಟಿದ್ದೇನೆ. ನಿಮ್ಮ ತಮ್ಮನಿಗೆ ರಾಜ್ಯಸಭೆ ಟಿಕೆಟ್ ಬಗ್ಗೆ ನನ್ನ ಜತೆ ಚರ್ಚೆ ನಡೆಸಬೇಕಿತ್ತು. ಅದನ್ನು ಬಿಟ್ಟು ಶಾಸಕರ ಗುಂಪು ಕಟ್ಟಿಕೊಂಡು ಸಭೆ ಮಾಡೋದು ಎಷ್ಟು ಸರಿ..? ಎಂದು ಕತ್ತಿಗೆ ಸಿಎಂ ಕೇಳಿದ್ದಾರೆ.

    ಇದನ್ನೂ ಓದಿರಿ ಉಮೇಶ್ ಕತ್ತಿ ಏನೇನೋ ಆಡ್ತಾನೆ, ಆದ್ರೆ ಪಕ್ಷಬಿಡಲ್ಲ…

    ಕರೊನಾದಂತಹ ಸಂದಿಗ್ಧ ಪರಿಸ್ಥಿತಿ ನಿಭಾಯಿಸಲು ಸರ್ಕಾರ ಹೋರಾಡುತ್ತಿದೆ. ಇಂತಹ ವೇಳೆ ಈ ರೀತಿ ಪ್ರತ್ಯೇಕವಾಗಿ ಶಾಸಕರ ಜೊತೆಗೂಡಿ ಸಭೆ ಸೇರೋದು ಸರೀನಾ? ಏನು ಆಗಬೇಕು ಹೇಳಿ ಮಾಡಿಕೊಡೋಣ. ಈ ರೀತಿ ನೀವು ಮಾಡೋದು ಸ್ವಲ್ಪನೂ ಸರಿ ಇಲ್ಲ. ಅದೇನೇ ಇದ್ದರೂ ಬನ್ನಿ ಮಾತನಾಡೋಣ ಎಂದು ಕತ್ತಿಗೆ ತಾಕೀತು ಮಾಡಿದ ಸಿಎಂ, ಇಂದು (ಶುಕ್ರವಾರ) ಭೇಟಿ ಮಾಡುವಂತೆ ಸೂಚಿಸಿದ್ದಾರೆ.

    ಬಸವನಗೌಡ ಯತ್ನಾಳ್, ಮುರಗೇಶ್​ ನfರಾಣಿಗೂ ತಮ್ಮನ್ನು ಭೇಟಿ ಮಾಡುವಂತೆ ಸಿಎಂ ಬುಲಾವ್ ನೀಡಿದ್ದಾರೆ. ಹಾಗಾಗಿ ಈ ಶಾಸಕರು ಯಡಿಯೂರಪ್ಪರನ್ನು ಭೇಟಿ ಮಾಡುವ ಸಾಧ್ಯತೆ ಇದೆ.

    ಇದನ್ನೂ ಓದಿರಿ ಅತೃಪ್ತರ ಸಭೆಯಲ್ಲಿ ಪಾಲ್ಗೊಂಡ ಶಾಸಕರ ಡಿಟೇಲ್ಸ್ ಇಲ್ಲಿದೆ ನೋಡಿ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts