More

    ಪತ್ರಕರ್ತರನ್ನು ಮುಂಚೂಣಿ ಕೋವಿಡ್​ ವಾರಿಯರ್ಸ್​ ಎಂದು ಘೋಷಿಸಿದ ಸಿಎಂ

    ಭುಬನೇಶ್ವರ್ : ಕರೊನಾ ಮಿತಿಮೀರಿ ಹರಡುತ್ತಿರುವ ಈ ಸಂದರ್ಭದಲ್ಲೂ ಸರ್ಕಾರಿ ಕಛೇರಿ, ಕೋರ್ಟ್, ಆಸ್ಪತ್ರೆ, ಸ್ಮಶಾನ ಆದಿಯಾಗಿ ಸ್ಥಳಕ್ಕೆ ಭೇಟಿ ನೀಡಿ ಜನರಿಗೆ ವಸ್ತುಸ್ಥಿತಿಯನ್ನು ವರದಿ ಮಾಡುತ್ತಿರುವವರು ಪತ್ರಕರ್ತರು. ಈ ಸೇವೆಯನ್ನು ಗುರುತಿಸಿ ಒಡಿಶಾ ಸಿಎಂ ನವೀನ್ ಪಟ್​ನಾಯಕ್ ಅವರು ರಾಜ್ಯದ ಪತ್ರಕರ್ತರನ್ನು ಮುಂಚೂಣಿ ಕೋವಿಡ್ ವಾರಿಯರ್ಸ್ ಎಂದು ಘೋಷಿಸಿದ್ದಾರೆ.

    “ಕಾರ್ಯನಿರತ ಪರ್ತಕರ್ತರು ಕೋವಿಡ್​ ಸಂಬಂಧಿತ ವಿಚಾರಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುತ್ತಾ, ಅನಿಯಮಿತವಾಗಿ ಸುದ್ದಿ ವರದಿಗಳನ್ನು ಒದಗಿಸುತ್ತಾ ರಾಜ್ಯಕ್ಕೆ ಮಹತ್ವದ ಸೇವೆ ಮಾಡುತ್ತಿದ್ದಾರೆ. ಕೋವಿಡ್ ವಿರುದ್ಧದ ಯುದ್ಧದಲ್ಲಿ ಅವರು ಮಹಾನ್​ ಬೆಂಬಲವಾಗಿದ್ದಾರೆ” ಎಂದು ಸಿಎಂ ಪಟ್​ನಾಯಕ್ ಹೇಳಿದ್ದಾರೆ ಎನ್ನಲಾಗಿದೆ.

    ಇದನ್ನೂ ಓದಿ: ಮಾಜಿ ಸೇನಾಧಿಕಾರಿ, ನಟ ಬಿಕ್ರಮ್​ಜೀತ್​ ಕನ್ವರ್​​ಪಾಲ್ ಕರೊನಾಗೆ ಬಲಿ

    ನಿನ್ನೆಯ ದಿನ, ಕರೊನಾ ಸೋಂಕಿತರಾಗಿದ್ದ ಪ್ರೀತಿಮನ್ ಮೋಹಪಾತ್ರ ಎಂಬ ಹಿರಿಯ ಪತ್ರಕರ್ತರು ಚಿಕಿತ್ಸೆ ಫಲಿಸದೆ ಭುಬನೇಶ್ವರದ ಖಾಸಗಿ ಆಸ್ಪತ್ರೆಯೊಂದರಲ್ಲಿ ಸಾವಪ್ಪಿದ್ದಾರೆ. ಈವರೆಗೆ ರಾಜ್ಯದಲ್ಲಿ 12 ಪತ್ರಕರ್ತರು ಕರೊನಾಕ್ಕೆ ಬಲಿಯಾಗಿದ್ದಾರೆ ಎನ್ನಲಾಗಿದೆ.

    ಒಡಿಶಾದಲ್ಲಿ ಕಳೆದ 24 ಗಂಟೆಗಳಲ್ಲಿ 10,402 ಹೊಸ ಕರೊನಾ ಪ್ರಕರಣಗಳು ಮತ್ತು 14 ಸಂಬಂಧಿತ ಸಾವುಗಳು ವರದಿಯಾಗಿವೆ. ರಾಜ್ಯದಲ್ಲಿ 67,800 ಆ್ಯಕ್ಟೀವ್ ಪ್ರಕರಣಗಳಿವೆ ಎಂದು ರಾಜ್ಯ ಆರೋಗ್ಯ ಇಲಾಖೆ ತಿಳಿಸಿದೆ. ಈ ಏರಿಕೆಯ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಮೇ 5 ರಿಂದ 19 ರವರೆಗೆ 14 ದಿನಗಳ ಲಾಕ್​ಡೌನ್ ​ಘೋಷಿಸಿದೆ. (ಏಜೆನ್ಸೀಸ್)

    VIDEO | ಡಿಎಂಕೆ ಪಕ್ಷಕ್ಕೆ ಮುನ್ನಡೆ : ಬೀದಿಗಿಳಿದು ಸಂಭ್ರಮ ಆಚರಿಸಿದ ಬೆಂಬಲಿಗರು

    ಕೇರಳದ ತ್ರಿಸ್ಸೂರ್​ನಲ್ಲಿ ಬಿಜೆಪಿಯ ಸುರೇಶ್ ಗೋಪಿ ಮುನ್ನಡೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts