More

    ಡಿ.30ರಂದು ಉಡುಪಿಯ ಯತಿದ್ವಯರಿಗೆ ನಾಗರಿಕ ಗೌರವ

    ಶಿವಮೊಗ್ಗ: ಉಡುಪಿ ಶ್ರೀಕೃಷ್ಣನ ಭಾವಿ ಪರ್ಯಾಯ ಪೀಠಾಧೀಶರಾಗಿ 4ನೇ ಬಾರಿ ಪೀಠ ಅಲಂಕರಿಸುತ್ತಿರುವ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಹಾಗೂ ಅವರ ಶಿಷ್ಯ ಶ್ರೀ ಸುಶೀಂದ್ರತೀರ್ಥ ಶ್ರೀಪಾದ ಯತಿದ್ವಯರಿಗೆ ನಾಗರಿಕ ಗೌರವ ಸಮರ್ಪಣೆ ಕಾರ್ಯಕ್ರಮವನ್ನು ಡಿ.30ರಂದು ಸಂಜೆ 6.30ಕ್ಕೆ ದುರ್ಗಿಗುಡಿಯ ಶ್ರೀ ರಾಘವೇಂದ್ರಸ್ವಾಮಿ ಮಠದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಬ್ರಾಹ್ಮಣ ಮಹಾ ಸಭಾದ ಅಧ್ಯಕ್ಷ ನಟರಾಜ್ ಭಾಗವತ್ ತಿಳಿಸಿದರು.

    ಉಡುಪಿ ಪುತ್ತಿಗೆ ಮಠದ ಡಾ.ಬಿ.ಗೋಪಾಲಾಚಾರ್ ಅಭಿನಂದನಾ ಭಾಷಣ ಮಾಡುವರು. ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ, ಎಂಎಲ್‌ಸಿ ಡಿ.ಎಸ್.ಅರುಣ್, ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್, ದುರ್ಗಿಗುಡಿ ರಾಯರ ಸೇವಾ ಸಮಿತಿ ಕಾರ್ಯದರ್ಶಿ ಸುರೇಶ್ ಉಪಸ್ಥಿತರಿರುತ್ತಾರೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
    12ನೇ ವರ್ಷದಲ್ಲಿ ಸನ್ಯಾಸತ್ವ ವಹಿಸಿದ್ದ ಸುಗುಣೇಂದ್ರತೀರ್ಥ ಶ್ರೀಪಾದರು, ವಿಶ್ವದ ಹಲವೆಡೆ ಭಾರತೀಯ ಸಂಸ್ಕೃತಿಯ ಬಗ್ಗೆ ಪ್ರಚಾರ ಮಾಡಿದ್ದಾರೆ. ಹಲವು ರಾಷ್ಟ್ರಗಳ ಮುಖಂಡರೊಡನೆ ಭಾರತೀಯ ಧರ್ಮದ ಬಗ್ಗೆ ಸಂವಾದ ನಡೆಸಿದ್ದಾರೆ. ವಿಶ್ವ ಧರ್ಮದ ಸಮಿತಿ ಅಧ್ಯಕ್ಷರೂ ಆಗಿದ್ದಾರೆ. ಜಪಾನ್ ಅವರಿಗೆ ನೋಬಲ್‌ಗೆ ಸರಿಸಮನಾದ ಒಂದು ಕೋಟಿ ರೂ. ಮೊತ್ತದ ಬಹುಮಾನ ನೀಡಿದೆ ಎಂದರು.
    ಪರ್ಯಾಯ ಪೀಠ ಅಲಂಕರಿಸುವವರು ರಾಜ್ಯದ ವಿವಿಧ ಕಡೆಗಳಲ್ಲಿ ಪ್ರವೇಶ ಮಾಡಿ ಮಠದ ಬಗ್ಗೆ ತಿಳಿಸುತ್ತಾರೆ. ಹಾಗೆಯೇ ಶಿವಮೊಗ್ಗಕ್ಕೂ ಪುರಪ್ರವೇಶ ಮಾಡಲಿದ್ದು ಸೀನಪ್ಪ ಶೆಟ್ಟಿ ವೃತ್ತದಿಂದ ಅವರನ್ನು ಭವ್ಯ ಮೆರವಣಿಗೆಯಲ್ಲಿ ಕರೆತರಲಾಗುವುದು ಎಂದರು. ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್, ಆ.ನ.ವಿಜಯೇಂದ್ರರಾವ್, ಸುಮತೀಂದ್ರಚಾರ್, ಸುರೇಶ್ ಸುದ್ದಿಗೋಷ್ಠಿಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts