More

    ಫ್ಯಾನ್ಸಿ ಮೊಬೈಲ್ ನಂಬರ್ ಮೋಹ: 64 ಸಾವಿರ ರೂ. ಕಳೆದುಕೊಂಡ ಇಂಜಿನಿಯರ್!

    ಬೆಂಗಳೂರು: ಫ್ಯಾನ್ಸಿ ಮೊಬೈಲ್ ನಂಬರ್ ಕೊಡುವುದಾಗಿ ಎಸ್‌ಎಂಎಸ್ ಕಳುಹಿಸಿ ಸಿವಿಲ್ ಇಂಜಿನಿಯರ್ ಬ್ಯಾಂಕ್ ಖಾತೆಗೆ ಕನ್ನ ಹಾಕಿದ ಸೈಬರ್ ಕಳ್ಳರು, 64 ಸಾವಿರ ರೂ. ಎಗರಿಸಿರುವ ಘಟನೆ ನಡೆದಿದೆ.

    ಚಿನ್ನಸ್ವಾಮಿ ಮೊದಲಿಯಾರ್ ರಸ್ತೆಯ 51 ವರ್ಷದ ಇಂಜಿನಿಯರ್‌ರೊಬ್ಬರ ಮೊಬೈಲ್ ಫೋನ್‌ಗೆ ಮೇ 19ರಂದು ಏರ್‌ಟೆಲ್ ಪ್ಲ್ಲಾಟಿನಂ ನಂಬರ್ 90999 99999 ಮಾರಾಟಕ್ಕೆ ಇರುವುದಾಗಿ ಎಸ್‌ಎಂಎಸ್ ಬಂತು. ಖರೀದಿ ಮಾಡಬೇಕೆಂದು ಇಚ್ಛಿಸಿದ ಇಂಜಿನಿಯರ್, ಸಂದೇಶ ಬಂದಿದ್ದ ಮೊಬೈಲ್ ನಂಬರ್‌ಗೆ ವಾಪಸ್ ಕರೆ ಮಾಡಿದರು.

    ಇದನ್ನೂ ಓದಿ ಸಿಕ್ಕಸಿಕ್ಕ ನಂಬರ್‌ಗೆ ಕರೆ ಮಾಡಿ ಹಣ ಕಳಕೊಂಡ್ರು!… ಆನ್‌ಲೈನ್ ಖರೀದಿದಾರರಿಗೆ ಕಂಟಕವಾದ ಸೈಬರ್ ಕಳ್ಳರು

    ಆ ಕಡೆಯಿಂದ ಮಾತನಾಡಿದ ವ್ಯಕ್ತಿ ಇನ್‌ವಾಯ್ಸ ಕಳುಹಿಸಿ 64,900 ರೂ. ಪಾವತಿ ಮಾಡುವಂತೆ ಸೂಚನೆ ಕೊಟ್ಟ. ಇದನ್ನು ನಂಬಿದ ಇಂಜಿನಿಯರ್, ಆನ್‌ಲೈನ್‌ನಲ್ಲಿ ಹಣ ಪಾವತಿ ಮಾಡಿದರು. ಸಿಮ್ ಕಾರ್ಡ್ ಪಡೆಯಲು ವಾಪಸ್ ಕರೆ ಮಾಡಿದಾಗ ಆತ ಸಂಪರ್ಕಕ್ಕೂ ಸಿಗಲಿಲ್ಲ.

    ಕೊನೆಗೆ ಬೇರೆ ದಾರಿ ಕಾಣದೆ, ಏರ್‌ಟೆಲ್ ಸಹಾಯವಾಣಿಗೆ ಕರೆ ಮಾಡಿ ವಿಚಾರಿಸಿದಾಗ ಅಂತಹ ಯಾವುದೇ ಸಿಮ್ ಕಾರ್ಡ್ ಮಾರಾಟಕ್ಕೆ ಇಟ್ಟಿಲ್ಲ ಎಂದು ಸ್ಪಷ್ಟಪಡಿಸಿದರು. ಮೋಸ ಹೋಗಿರುವುದು ಗೊತ್ತಾಗಿ ಇಂಜಿನಿಯರ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

    ಮೊಬೈಲ್ ರೀಚಾರ್ಜ್ ಹಣ ವಾಪಸ್ ಕೊಡುವ ಸೋಗಿನಲ್ಲಿ ಪೊಲೀಸ್ ಪೇದೆಗೂ ವಂಚಿಸಿದ ಸೈಬರ್ ಕಳ್ಳ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts