

ಗಾನವಿ ಗೌಡ- ಸೋನಿಕಾ ಗೌಡ ಮಧ್ಯೆ ಟಾಸ್ಕ್ ವಿಚಾರಕ್ಕೆ ಕಿತ್ತಾಟ
ಸೋನಿಕಾಗೆ ಬೈದು ಅತ್ತ ಗಾನವಿ, ವಿಕ್ಟಿಮ್ ಕಾರ್ಡ್ ಪ್ಲೇ ಮಾಡ್ಬೇಡಿ ಎಂದ ಜನರು
ಬಿಗ್ಬಾಸ್ ವೀಕ್ಷಕರಿಂದ ಗಾನವಿ ವಿರುದ್ಧ ಕಿಡಿ
Bigg Boss Kannada: ಖಾಲಿ ಖಾಲಿಯಾಗಿದ್ದ ಬಿಗ್ಬಾಸ್ ಮನೆಗೆ ಸದ್ಯ ವೈಲ್ಡ್ ಕಾರ್ಡ್ ಸ್ಪರ್ಧಿಗಳು ಎಂಟ್ರಿ ಕೊಟ್ಟಿದ್ದಾರೆ. ಇದರಿಂದ ದೊಡ್ಮನೆಯಲ್ಲಿ ಸಾಕಷ್ಟು ಬದಲಾವಣೆಗಳು ಕಾಣಿಸಿಕೊಳ್ಳುತ್ತಿದೆ. ಆದರೆ, ಬಿಗ್ಬಾಸ್ ಕೊಟ್ಟ 'ಭಾರ ಹೊತ್ತ ಧೀರ' ಟಾಸ್ಕ್ ವಿಚಾರದಲ್ಲಿ ಗಾನವಿ ಮತ್ತು ಸೋನಿಕಾ ನಡುವೆ ತೀವ್ರ ವಾಗ್ವಾದ ನಡೆದಿದ್ದು, ಜೋರು ಜಗಳಕ್ಕೆ ದಾರಿ ಮಾಡಿಕೊಟ್ಟಿದೆ.
ಭಾರ ಹೊತ್ತ ಧೀರ ಸ್ಪರ್ಧೆಗಾಗಿ ಈಗಾಗಲೇ ಎರಡು ತಂಡಗಳಾಗಿ ವಿಂಗಡಿಸಲಾಗಿದೆ. ಒಂದು ಹಸಿರು ಹಾಗೂ ಕೆಂಪು ಬಣ್ಣದ ಟೀಂ. ಪ್ರಶಾಂತ್ ನೇತೃತ್ವದ ರೆಡ್ ಟೀಮ್‌ನಲ್ಲಿ ಕಾವ್ಯ, ಆಸಿಯಾ, ಸಂಗೀತ, ಧನುಷ್ ಮತ್ತು ಜಗದೀಶ್ ಇದ್ದಾರೆ. ಗಾನವಿ ನೇತೃತ್ವದ ಗ್ರೀನ್ ಟೀಮ್‌ನಲ್ಲಿ ಗಗನ್, ಸೋನಿಕಾ, ಯಶಸ್, ಕಿರಣ್ ಶಾಸ್ತ್ರಿ, ಸೌಂದರ್ಯ ಶೆಟ್ಟಿ, ಮಂಜುನಾಥ್ ಮತ್ತು ಲಿಖಿತ್ ಇದ್ದಾರೆ.
ಟಾಸ್ಕ್ ಆಡುವ ವೇಳೆ ಆಟದ ನಿಯಮಗಳು ಮತ್ತು ನಿರ್ಧಾರಗಳ ಕುರಿತಂತೆ ಗಾನವಿ ಹಾಗೂ ಸೋನಿಕಾ ಅವರ ಮಧ್ಯೆ ಭಿನ್ನಾಭಿಪ್ರಾಯ ಮೂಡಿದೆ. ಇದು ತಾರಕಕ್ಕೇರಿ ಇಬ್ಬರೂ ಮುಖಾಮುಖಿಯಾಗಿ ಪರಸ್ಪರ ಏರುಧ್ವನಿಯಲ್ಲಿ ವಾದಕ್ಕಿಳಿದಿದ್ದಾರೆ. ಏಯ್ ಬಾಯಿ ಮುಚ್ಕೊಂಡು ಕೂತ್ಕೊಳೆ ಎಂದು ಗಾನವಿ ಸೋನಿಕಾ ಅವರ ವಿರುದ್ಧ ಕಿರುಚಾಡಿದ್ದಾರೆ. ಇತ್ತ ಸೌಂದರ್ಯ ಅವರು ಎಲ್ಲರಿಗೂ ಚಾನ್ಸ್ ನೀಡಬೇಕು ಎಂದು ಗಾನವಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹಳ್ಳಿ ಪವರ್ ನಲ್ಲಿ ಘಾಟಿ ಗಾನವಿ ಎನಿಸಿಕೊಂಡಿದ್ದ ಇವರು ಬಿಗ್ಬಾಸ್ ಮನೆಯಲ್ಲಿ ಎರಡೇ ದಿನಕ್ಕೆ ಸುಸ್ತಾದರಾ ಎನ್ನುವುದು ವೀಕ್ಷಕರಲ್ಲಿ ಮೂಡಿರುವ ಪ್ರಶ್ನೆಯಾಗಿದೆ.
ಅವಕಾಶ ಕೊಡದಿದ್ದರೆ ಅದಕ್ಕಾಗಿ ಹೋರಾಡಬೇಕು ಎನ್ನುತ್ತಾರೆ. ಒಂದು ವೇಳೆ ಅವಕಾಶ ಕೇಳಿದರೆ, 'ಅವರು ಹೊಟ್ಟೆಕಿಚ್ಚು ಪಡುತ್ತಿದ್ದಾರೆ' ಎನ್ನುತ್ತಾರೆ! ಅಲ್ಲ, ಇದು ಟೀಮ್ ಗೇಮ್. 2 ಗಂಟೆಗಳ ಕಾಲಾವಕಾಶ ನೀಡಲಾಗಿತ್ತು!ಒಬ್ಬ ಒಳ್ಳೆಯ ಕ್ಯಾಪ್ಟನ್ ತನ್ನ ಎಲ್ಲಾ ಟೀಮ್ ಸದಸ್ಯರನ್ನು ಸಮಾನವಾಗಿ ನಡೆಸಿಕೊಳ್ಳಬೇಕು ಮತ್ತು ಗೆಲುವು ಖಚಿತವಾದಾಗ ಮುಂದಿನ ಆಟಕ್ಕೆ ಸಿದ್ಧತೆ ಮಾಡಿಕೊಳ್ಳಬೇಕು ಎಂದು ನೆಟ್ಟಿಗರು ಗಾನವಿ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.
ಗಾನವಿ ಅವರೆ ಏಕೆ ವಿಕ್ಟಿಮ್ ಕಾರ್ಡ್ ಪ್ಲೇ ಮಾಡ್ತಿದ್ದೀರಿ. ದಯವಿಟ್ಟು ಅಳಬೇಡ ಸ್ವಾರ್ಥ, ನಿನ್ನ ಕುತಂತ್ರ, ನಿನ್ನ ತಂಡದ ಮೇಲಿನ ನಿನ್ನ ಹೊಟ್ಟೆಕಿಚ್ಚು ನನಗೆ ಅರ್ಥವಾಯಿತು, ಏನೋ ಒಂದು ವಿಷಯದ ಬಗ್ಗೆ ಮಾತ್ರ ಚರ್ಚೆ ಮಾಡು.ಎಲ್ಲದಕ್ಕೂ ಅಳು ಎಂದು ಲೇವಡಿ ಮಾಡಿದ್ದಾರೆ.
ಉಸ್ತುವಾರಿಗಳ ತೀರ್ಮಾನವೇ ಅಂತಿಮ ಎನ್ನುವುದನ್ನು ಮುಂದಿಟ್ಟುಕೊಂಡು ಲಿಖಿತ್ ಮತ್ತು ಮಂಜ ತಮ್ಮದೇ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಬಿಗ್ಬಾಸ್ ನೀಡುವ ಟಾಸ್ಕ್ ಬೇರೆ ಇವರು ಅದಕ್ಕೆ ಹಾಕುವ ನಿಯಮ ಬೇರೆ. ಈ ವಾರ ವಾರದ ಕತೆ ಕಿಚ್ಚನ ಜೊತೆ ಎಪಿಸೋಡ್ನಲ್ಲಿ ಖಂಡಿತ ಇವರಿಬ್ಬರಿಗೆ ಭರ್ಜರಿಯಾಗಿ ಕ್ಲಾಸ್ ತೆಗೆದುಕೊಳ್ಳಲಾಗುತ್ತದೆ ಎಂದು ನೆಟ್ಟಿಗರು ಚರ್ಚೆ ಮಾಡಿಕೊಳ್ಳುತ್ತಿದ್ದಾರೆ, (ಏಜೆನ್ಸೀಸ್).