ಕಾರ್ಗಿಲ್​ ಯುದ್ಧದ ವೇಳೆ ನಾನಾ ಪಾಟೇಕರ್​ ಸೇವೆ; ಜೀವದ ಹಂಗು ತೊರೆದು ಹೋರಾಡಿದ್ದ ಧೀಮಂತ ನಟ..Nana Patekar

ನಾನಾ ಪಾಟೇಕರ್​ ಸಿನಿಮಾಕ್ಕೆ ಮಾತ್ರ ಸೀಮಿತವಾಗಿರಲಿಲ್ಲ. ಮಧ್ಯಮ ಮತ್ತು ಬಡ ಜನರ ಏಳಿಗೆಗಾಗಿ ತೆರೆಮರೆಯಲ್ಲಿ ಕೆಲಸ ಮಾಡುತ್ತಿದ್ದರು. ಇಷ್ಟೇ ಅಲ್ಲದೇ ಸಿನಿಮಾದಲ್ಲಿ ಸೈನಿಕನಾಗಿ ನಟನೆ ಮಾಡಲು ಮೂರು ವರ್ಷಗಳ ಕಾಲ ಸೇನಾ ತರಬೇತಿ ಪಡೆದುಕೊಂಡರು. ಅಲ್ಲದೇ 1999ರಲ್ಲಿ ನಡೆದ ಕಾರ್ಗಿಲ್​ ಯುದ್ಧದಲ್ಲಿ ಭಾಗಿಯಾಗಲು ವಿಶೇಷ ಅನುಮತಿ ಪಡೆದುಕೊಂಡು ಸೇವೆ ಸಲ್ಲಿಸಿದ್ದರು.
ಕಾರ್ಗಿಲ್​ ಯುದ್ಧದ ವೇಳೆ ನಾನಾ ಪಾಟೇಕರ್​ ಸೇವೆ; ಜೀವದ ಹಂಗು ತೊರೆದು ಹೋರಾಡಿದ್ದ ಧೀಮಂತ ನಟ..Nana Patekar
Published on: 
  • ಸಿನಿಮಾಕ್ಕಾಗಿ ಸೇನೆಯಲ್ಲಿ ತರಬೇತಿ ಪಡೆದುಕೊಂಡಿದ್ದ ನಟ ನಾನಾ ಪಾಟೇಕರ್​

  • 'ಪ್ರಹಾರ್: ದಿ ಫೈನಲ್ ಅಟ್ಯಾಕ್ ಸಿನಿಮಾಕ್ಕಾಗಿ ಮೂರು ವರ್ಷ ತರಬೇತಿ

  • ಕಾರ್ಗಿಲ್​ ಯುದ್ಧದ ವೇಳೆ ವಿಶೇಷ ಅನುಮತಿ ಪಡೆದು ಗಡಿಯಲ್ಲಿ ಸೇವೆ ಸಲ್ಲಿಸಿದ್ದ ನಾನಾ ಪಾಟೇಕರ್

ಸಾಮಾನ್ಯವಾಗಿ ನಟ-ನಟಿಯರು ವಿಶೇಷ ಪಾತ್ರಕ್ಕಾಗಿ ತರಬೇತಿ ಪಡೆಯುತ್ತಾರೆ. ಅದು ಕಲರಿ, ಕರಾಟೆ, ಕಾರ್​ ರೈಡಿಂಗ್, ಗರಡಿ​ ಸೇರಿದಂತೆ ಯಾವುದೇ ವಿಭಿನ್ನ ಕಲೆಯಾಗಿರಬಹುದು. ಆದರೆ, ಸೈನಿಕನಾಗಿ ನಟಿಸಲು ಸೇನೆಯೊಳಕ್ಕೆ ಇಳಿದು ತರಬೇತಿ ಪಡೆದು, ಮತ್ತೆ ಜೀವದ ಹಂಗು ತೊರೆದು ಹೋರಾಡಿದವರು ಯಾರಾದರೂ ಇದ್ದಾರಾ?. ಹೌದು, ಆ ವಿಭಿನ್ನ ವ್ಯಕ್ತಿಯೇ ನಾನಾ ಪಾಟೇಕರ್.

ಬಾಲಿವುಡ್​, ಕಾಲಿವುಡ್​​ ಹಾಗೂ ಭಾರತೀಯ ಸಿನಿಮಾರಂಗದಲ್ಲಿ ಇಲ್ಲಿಯವರೆಗೂ ಯುದ್ಧಕ್ಕಾಗಿ ಹೋರಾಡಿದ ಧೀರರ ಹ ಜೀವನಾಗಾಥೆ ಸಿನಿಮಾಗಳು ಸಾಕಷ್ಟು ಬಂದಿವೆ. ಇಲ್ಲಿ ನಾಯಕನ ಹೋರಾಟ, ಸೇನೆಯ ಸ್ಥಿತಿಯನ್ನು ತೋರಿಸಲಾಗಿದೆ. ಅವರ ಖಾಸಗಿ ಜೀವನದಲ್ಲಿ ಉಂಟಾಗುವ ಸಮಸ್ಯೆ ಬಗ್ಗೆ ಬಿತ್ತರಿಸಲಾಗುತ್ತದೆ. ಆದರೆ, ಒಬ್ಬ ನಟ ಸೈನಿಕನಾಗಿದ್ದುಕೊಂಡು, ತರಬೇತಿ ಪಡೆದು ನಂತರ ತನ್ನ ಪಾತ್ರದಲ್ಲಿ ತೊಡಗಿಸಿಕೊಳ್ಳುವುದಿದೆಯಲ್ಲ ಅದು ಅವಿಸ್ಮರಣೀಯ. ಅಂತಹ ಎದೆಗಾರಿಕೆಯ ನಿರ್ಧಾರ ಮಾಡಿದ್ದು ನಿಜಕ್ಕೂ ನಾನಾ ಪಾಟೇಕರ್ ಒಬ್ಬರು ಮಾತ್ರ.

ಕಾರ್ಗಿಲ್ ಯುದ್ಧದಲ್ಲಿ ಭಾಗಿ

1991ರಲ್ಲಿ ರಿಲೀಸ್​ ಆದ 'ಪ್ರಹಾರ್: ದಿ ಫೈನಲ್ ಅಟ್ಯಾಕ್'​ ಸಿನಿಮಾಕ್ಕಾಗಿ ನಾನಾ ಪಾಟೇಕರ್ ಸೇನೆ ಸೇರುವ ಮೂಲಕ ತರಬೇತಿ ಪಡೆದುಕೊಳ್ಳಲು ನಿರ್ಧರಿಸಿದರು. ಅದರ ಭಾಗವಾಗಿ​ 1980ರಲ್ಲಿ ಸೇನೆಗೆ ಸೇರಿಕೊಂಡರು. ಸಿನಿಮಾದ ಪಾತ್ರಕ್ಕೆ ಶಾರ್ಟ್​ಕಟ್ ಬಳಸಲು ಹಿಂದೇಟು ಹಾಕಿದ್ದ ಅವರು, ಮೂರು ವರ್ಷಗಳ ಕಾಲ ಮರಾಠಾ ಲೈಟ್ ಇನ್‌ಫೆಂಟ್ರಿಯಲ್ಲಿ ಸೇನಾ ತರಬೇತಿ ಪಡೆದುಕೊಂಡಿದ್ದರು. ಸಿನಿಮಾ ರಿಲೀಸ್ ಆದ ಕೆಲವೇ ವರ್ಷ ಅಂದರೆ, 1999ರಲ್ಲಿ ಕಾರ್ಗಿಲ್​ ಯುದ್ಧ ಆರಂಭವಾಗಿತ್ತು. ಈ ವೇಳೆ ಆಗಿನ ರಕ್ಷಣಾ ಸಚಿವ ಜಾರ್ಜ್ ಫರ್ನಾಂಡೀಸ್​ ಅವರ ಅನುಮತಿ ಪಡೆದುಕೊಂಡು ಸೇನೆ ಸೇರಿಕೊಂಡರು.

60 ದಿನ ಸೇವೆ ಸಲ್ಲಿಸಿದ್ದ ನಾನಾ

ಶ್ರೀನಗರ, ಲೇಹ್‌, ಕುಪ್ವಾರ್​, ದ್ರಾಸ್​ನಂತಹ ಯುದ್ಧ ಪ್ರದೇಶದಲ್ಲಿ ಸೈನ್ಯದ ಕ್ವಿಕ್ ರಿಯಾಕ್ಷನ್ ಟೀಮ್​ನಲ್ಲಿದ್ದುಕೊಂಡು 60 ದಿನ ಕಾರ್ಯನಿರ್ವಹಿಸಿದ್ದರು. ಸೇನಾ ಆಸ್ಪತ್ರೆಗಳಲ್ಲಿ ಕಾರ್ಯ ಹಾಗೂ ಗಸ್ತು ಕರ್ತವ್ಯಗಳನ್ನು ನಿರ್ವಹಿಸಿದರು. ಆ ಮೂಲಕ ಪಾಕಿಸ್ತಾನದ ಸೈನಿಕರೊಟ್ಟಿಗೆ ನಡೆದ ಯುದ್ಧದಲ್ಲಿ ನಾನಾ ಪಾಟೇಕರ್​​​​ 60 ದಿನಗಳನ್ನು ಕಳೆದರು. ಸುಮಾರು 20 ಕೆಜಿ ತೂಕ ಇಳಿಸಿಕೊಂಡರು.

ಕಾರ್ಗಿಲ್ ಯುದ್ಧದ ಸಮಯದಲ್ಲಿ ಕಡಿದಾದ ಎತ್ತರದಲ್ಲಿ ಸೈನಿಕರಿಗೆ ದೈಹಿಕ ಪರಿಸ್ಥಿತಿ ಎಷ್ಟು ಕಷ್ಟಕರವಾಗಿತ್ತು ಎಂಬುದನ್ನು ಅವರು ಹಲವಾರು ಸಂದರ್ಭಗಳಲ್ಲಿ ನೆನಪಿಸಿಕೊಂಡಿದ್ದರು ಮತ್ತು ಅವರು ಸೇರಿದಾಗ 76 ಕೆಜಿ ತೂಕವಿದ್ದ ಅವರು ವಾಪಸ್​​ ಅಲ್ಲಿಂದ ಬಂದಾಗ 56 ಕೆಜಿ ಆದ ಬಗ್ಗೆ ಸಂದರ್ಶನಗಳಲ್ಲಿ ಮಾತನಾಡಿದ್ದಾರೆ, (ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net