
---Microsoft Clarity tracking tag-->

ಬಿಗ್ ಬಾಸ್ ಸೀಸನ್ 13ರಲ್ಲಿ ಹೈಜಾಕರ್ ಆಗಿ ಹಳ್ಳಿ ಪವರ್ನ ಗಾನವಿ ಎಂಟ್ರಿ
ಯಶಸ್ ಮತ್ತು ಕಿರಣ್ ಶಾಸ್ತ್ರಿ ಸ್ಥಾನವನ್ನು ಹೈಜಾಕ್ ಮಾಡಿ, ಫ್ಲೈಟ್ಗೆ ಕಳುಹಿಸಿದ ಗಾನವಿ
ಚೆನ್ನಾಗ್ ಅವ್ರೇ ಎಂದ ಯಶಸ್ಗೆ ನೀವು ಓವರ್ ಡ್ರ್ಯಾಮಾಟಿಕ್ ಎನಿಸುತ್ತೀರಿ ಎಂದ ಗಾನವಿ
Bigg Boss Kannada13: ಬಿಗ್ಬಾಸ್ ಮನೆಯಿಂದ ಇಬ್ಬರು ಸ್ಪರ್ಧಿಗಳು ಎಲಿಮಿನೇಟ್ ಆಗಿದ್ದಾರೆ. ವೈಷ್ಣವಿ ಕೌಂಡಿಲ್ಯ ಮತ್ತು ಅವಿನಾಶ್ ಅವರು ಶನಿವಾರ ಎಕ್ಸಿಟ್ ಆದರು. ಅವರು ಅತ್ತ ಸಾಗುತ್ತಲೇ ಮೂವರು ವೈಲ್ಡ್ ಕಾರ್ಡ್ ಸ್ಪರ್ಧಿಗಳು ಬಿಗ್ಬಾಸ್ ಮನೆಗೆ ಬಂದಿದ್ದಾರೆ. ಗಾನವಿ ಗೌಡ, ಸೋನಿಕಾ ಗೌಡ ಹಾಗೂ ಕಾಮಿಡಿಯನ್ ಪ್ರಶಾಂತ್ ಗೌಡ. ಸದ್ಯ ರಿಲೀಸ್ ಆದ ಪ್ರೋಮೋದಲ್ಲಿ ದೊಡ್ಮನೆಗೆ ಗಾನವಿ ಎಂಟ್ರಿಯಾಗಿದ್ದಾರೆ.
ಹಳ್ಳಿ ಪವರ್ ಶೋನಲ್ಲಿ ಇದ್ದ ಗಾನವಿ ಅವರು ಸದ್ಯ ಬಿಗ್ಬಾಸ್ ಮನೆಗೆ ಎಂಟ್ರಿಕೊಟ್ಟಿದ್ದಾರೆ. ಬಿಗ್ಬಾಸ್ನಲ್ಲಿ ಅವರು ಒಬ್ಬ ಟಫ್ ಸ್ಪರ್ಧಿಯಾಗಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಬಿಗ್ಬಾಸ್ ಮನೆಗೆ ಎಂಟ್ರಿ ಕೊಡುತ್ತಲೇ ಗಾನವಿ ಇಬ್ಬರ ಸ್ಥಾನ ಹೈಜಾಕ್ ಮಾಡಿದ್ದಾರೆ. ಗಾನವಿಯನ್ನು ಕಂಡ ಯಶಸ್ ಸಖತ್ ಆಗಿ ಅವ್ರೇ ಎಂದ ಯಶಸ್ಗೆ ಗಾನವಿ ಗುನ್ನಾ ಕೊಟ್ಟಿದ್ದಾರೆ.
ಬಿಗ್ಬಾಸ್ ಕೊಟ್ಟ ಟಾಸ್ಕ್ ಪ್ರಕಾರ ಯಶಸ್ ಮತ್ತು ಕಿರಣ್ ಸ್ಥಾನವನ್ನು ಹೈಜಾಕ್ ಮಾಡಿ ಮತ್ತೆ ಫ್ಲೈಟ್ಗೆ ಕಳುಹಿಸುವಂತೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಯಶಸ್ ಮತ್ತು ಕಿರಣ್ ಅವರನ್ನು ಉದ್ದೇಶಿಸಿ ಮಾತನಾಡಿದ ಗಾನವಿ, ನೀವು ತುಂಬಾ ಓವರ್ ಡ್ರಾಮ್ಯಾಟಿಕ್ ಆಗಿ ಕಾಣಿಸುತ್ತೀರಿ ಎಂದು ಯಶಸ್ಗೆ ಹೇಳಿದ್ದಾರೆ. ಇನ್ನೂ ಕಿರಣ್ಗೆ ಅಕ್ಕ ಅಕ್ಕ ಎಂದುಕೊಂಡು ನೀವು ಮಾಡುವುದನ್ನು ನೋಡಿದರೆ ಕಿರಿಕಿರಿ ಉಂಟಾಗುತ್ತದೆ. ಮನೆಯಲ್ಲಿ ನೀವು ಬೇರೆ ಯಾವುದೇ ಕೆಲಸ ಮಾಡುತ್ತಿಲ್ಲ ಎಂದು ಇಬ್ಬರ ಸ್ಥಾನ ಕಿತ್ಕೊಂಡು ಫ್ಲೈಟ್ಗೆ ಕಳುಹಿಸಿದ್ದಾರೆ.
ಹಳ್ಳಿ ಪವರ್ ಶೋ ನಲ್ಲಿಯೂ ಗಾನವಿ ಸಾಕಷ್ಟು ಸದ್ದು ಮಾಡಿದ್ದರು. ಅವರನ್ನು ಘಾಟಿ ಗಾನವಿ ಎಂತಲೇ ಕರೆಯಲಾಗುತ್ತಿತ್ತು. ಮೊದಲ ರನ್ನರ್ ಅಪ್ ಆಗಿ ಗಾನವಿ ಹೊರಹೊಮ್ಮಿದ್ದರು. ಗಾನವಿ ಅವರ ಕಾನ್ಫಿಡೆಂಟ್ ಹಾಗೂ ವ್ಯಕ್ತಿತ್ವವೂ ನೇರ ಮತ್ತು ದಿಟ್ಟವಾಗಿದ್ದು, ಬಿಗ್ಬಾಸ್ ಮನೆಯಲ್ಲಿ ಮತ್ತಷ್ಟು ಹಗ್ಗ-ಜಗ್ಗಾಟ, ಪ್ರೇಮ್ ಕಹಾನಿಗಳು ಹುಟ್ಟಿಕೊಳ್ಳುವ ಸಾಧ್ಯತೆ ಇದೆ.
ಘಾಟಿ ಗಾನವಿ ಸದ್ಯ ಹೈಜಾಕರ್ ಗಾನವಿ ಆಗಿದ್ದಾರೆ. ಇವರೊಂದಿಗೆ ಕಾಮಿಡಿಯನ್ ಪ್ರಶಾಂತ್ ಗೌಡ ಎಂಟ್ರಿ ಕೊಟ್ಟಿದ್ದಾರೆ. ಯಾರು ಏನೇ ಹೇಳಲಿ ನಾನು ಕಾಮಿಡಿ ಮಾಡುತ್ತೇನೆ ಎಂದು ಹೇಳಿರುವ ಪ್ರಶಾಂತ್ ಎಂಟರ್ಟೈನ್ಮೆಂಟ್ ಮರೆಯಾಗಿರುವ ಮನೆಯಲ್ಲಿ ಯಾವ ಮಟ್ಟಕ್ಕೆ ಮನರಂಜನೆ ನೀಡುತ್ತಾರೆ ಎನ್ನುವುದನ್ನು ಕಾದು ನೋಡಬೇಕಾಗಿದೆ.
ನಟಿ ಹಾಗೂ ಉದ್ಯಮಿ ಎನಿಸಿಕೊಂಡಿರುವ ಸೋನಿಕಾ ಗೌಡ ಬಿಗ್ಬಾಸ್ ಮನೆಗೆ ಎಂಟ್ರಿಯಾಗಲು ಸಜ್ಜಾಗಿದ್ದಾರೆ. ಬಿಗ್ಬಾಸ್ ವೇದಿಕೆಯಲ್ಲಿ ಕಾಣಿಸಿಕೊಳ್ಳುವ ಮೂಲಕ ಮುಂದೆ ನಟನಾ ಲೋಕಕ್ಕೆ ಪ್ರವೇಶ ಪಡೆಯಬಹುದು ಎಂದು ಹೇಳಿದ್ದರು. ಸದ್ಯ ಮೂವರು ವೈಲ್ಡ್ ಕಾರ್ಡ್ ಸ್ಪರ್ಧಿಗಳ ಜೊತೆ ತಾಂಡವ್ ರಾಮ್ ಮತ್ತೆ ತಮ್ಮ ಬಿಗ್ಬಾಸ್ ಜರ್ನಿ ಮುಂದುವರೆಸಿತ್ತಿದ್ದು, ನಾಲ್ವರ ಆಟ ಹೇಗಿರಲಿದೆ ಎನ್ನುವುದನ್ನು ಕಾದು ನೋಡಬೇಕಾಗಿದೆ, (ಏಜೆನ್ಸೀಸ್).