ಸಿನಿ ಬದುಕು, ವೈದ್ಯ ಲೋಕ... ಎರಡನ್ನೂ ಬ್ಯಾಲೆನ್ಸ್​ ಮಾಡುವಲ್ಲಿ ಯಶಸ್ವಿಯಾದ ಸ್ಟಾರ್​ ನಟಿಯರಿವರು | Doctor Heroines

ಟಾಲಿವುಡ್​ ನಟಿಮಣಿಯರು
ಟಾಲಿವುಡ್​ ನಟಿಮಣಿಯರು
Published on

ಪ್ರಮುಖ ಮುಖ್ಯಾಂಶಗಳು

  • ನಟನೆ ಜೊತೆ ಜೊತೆಗೆ ವೈದ್ಯ ಲೋಕಕ್ಕೂ ಎಂಟ್ರಿಕೊಟ್ಟ ಬ್ಯೂಟಿಗಳು
  • ಇತ್ತೀಚೆಗಷ್ಟೇ, ಶ್ರೀಲೀಲಾ ತಮ್ಮ ಎಂಬಿಬಿಎಸ್​ ಪದವಿ ಪೂರ್ಣಗೊಳಿಸಿದರು
  • ಈ ಪಟ್ಟಿಯಲ್ಲಿ ಶ್ರೀಲೀಲಾ ಮಾತ್ರವಲ್ಲ ಇನ್ನೂ ಹಲವು ನಟಿಯರಿದ್ದಾರೆ
ಬೆಂಗಳೂರು: ನಮ್ಮೆಲ್ಲರಿಗೂ ತಿಳಿದುವರಂತೆ ಬಹುತೇಕ ಕ್ಷೇತ್ರಗಳಲ್ಲಿ ಕೆಲಸ ಗಿಟ್ಟಿಸಿಕೊಳ್ಳಬೇಕು ಎಂದರೆ ಅದಕ್ಕೆ ಇಂತಿಂತ ಅರ್ಹತೆಗಳ ಅಗತ್ಯವಿರುತ್ತದೆ. ಇಷ್ಟೇ ಓದಿರಬೇಕು, ಈ ಪದವಿಗಳನ್ನು ಪೂರ್ಣಗೊಳಿಸಿರಬೇಕು ಎಂದೆಲ್ಲ ಷರತ್ತುಗಳಿರುತ್ತವೆ. ಆದರೆ, ರಾಜಕೀಯ ಮತ್ತು ಸಿನಿಮಾ ಕ್ಷೇತ್ರಗಳಿಗೆ ಯಾವುದೇ ಅನುಭವ ಅಥವಾ ಡಿಗ್ರಿಗಳ ಅಗತ್ಯತೆ ಇಲ್ಲ. ಒಂದಕ್ಕೆ ಅನುಭವಿದ್ದರೆ, ಇನ್ನೊಂದಕ್ಕೆ ನಟಿಸುವ ರಸವಿರಬೇಕು.

ಕನ್ನಡದ 'ಕಿಸ್'​ ಬೆಡಗಿ

ಅದರಲ್ಲೂ ಚಿತ್ರರಂಗದಲ್ಲಿ ನಟಿ ಅಥವಾ ನಟನಾಗುವ ಅವಕಾಶ ಸಿಕ್ಕರೆ, ಎಷ್ಟು ಜನ ಬಿಡ್ತಾರಾ ಹೇಳಿ? ಬಹುತೇಕರು ಇಂತಹ ಚಾನ್ಸ್ ಮಿಸ್​ ಮಾಡಿಕೊಳ್ಳಬಾರದು ಎಂದು ತಾವಿರುವ ಪರಿಸ್ಥಿತಿ, ತಮ್ಮ ಕೆಲಸ-ಕಾರ್ಯಗಳನ್ನು ಬಿಟ್ಟು ದಿಢೀರ್ ಜಿಗಿದು ಬಿಡುತ್ತಾರೆ. ಕೆಲವರು ತಾವು ಅದಾಗಲೇ ಮಾಡುತ್ತಿರುವ ವಿದ್ಯಾಭ್ಯಾಸವನ್ನು ಅರ್ಧಕ್ಕೆ ಬಿಟ್ಟು ಚಿತ್ರೋದ್ಯಮಕ್ಕೆ ಎಂಟ್ರಿಕೊಟ್ಟರೆ, ಇನ್ನೂ ಕೆಲವರು ಅದನ್ನೂ ನಿರ್ವಹಿಸುತ, ಇತ್ತ ಸಿನಿಮಾಗಳಲ್ಲಿ ನಟಿಸಿ, ಸಿನಿಪ್ರಿಯರಿಂದ ಸೈಎನಿಸಿಕೊಳ್ಳುತ್ತಾರೆ. ಆ ಪೈಕಿ ಈ ಸ್ಟಾರ್​ ನಟಿಮಣಿಯರು ಕೂಡ ಹೌದು.
ಎಂಬಿಬಿಎಸ್​ ಓದುತ್ತಲೇ ತಮ್ಮ ಸಿನಿ ಕರಿಯರ್​ ಅನ್ನು ಯಶಸ್ವಿಯಾಗಿ ಸರಿದೂಗಿಸಿಕೊಂಡು ಹೋಗುತ್ತಿದ್ದಾರೆ. ಅತ್ತ ಪದವಿಯನ್ನೂ ಮುಗಿಸಿ, ಇತ್ತ ಕೋಟ್ಯಂತರ ಅಭಿಮಾನಿಗಳನ್ನು ಸಂಪಾದಿಸುತ್ತಿದ್ದಾರೆ. ಇದಕ್ಕೆ ಜ್ವಲಂತ ಸಾಕ್ಷಿ ಕನ್ನಡದ 'ಕಿಸ್​' ಬೆಡಗಿ ಶ್ರೀಲೀಲಾ. ಇತ್ತೀಚೆಗಷ್ಟೇ, ತಮ್ಮ ಎಂಬಿಬಿಎಸ್​ ಪದವಿ ಪೂರ್ಣಗೊಳಿಸಿದ ನಟಿ, ಅಭಿಮಾನಿಗಳಿಂದ ಮೆಚ್ಚುಗೆ, ಅಭಿನಂದನೆಗಳ ಮಹಾಪೂರವನ್ನೇ ಸ್ವೀಕರಿಸಿದರು. ಪ್ರಸ್ತುತ, ಟಾಲಿವುಡ್​, ಸ್ಯಾಂಡಲ್​ವುಡ್​ ಮತ್ತು ಬಾಲಿವುಡ್​ನಲ್ಲಿ ಮಿಂಚುತ್ತಿರುವ ಶ್ರೀಲೀಲಾ, ಎರಡನ್ನೂ ಹ್ಯಾಂಡಲ್​ ಮಾಡಿ, ಹಲವರಿಗೆ ಮಾದರಿಯಾದ ರೀತಿಗೆ ಚಿತ್ರಪ್ರೇಮಿಗಳು ವಿಶೇಷವಾಗಿ ಅಭಿನಂದಿಸಿದ್ದಾರೆ. ​

ನಾಚ್ಯುರಲ್ ಬ್ಯೂಟಿ

ಇದೇ ರೀತಿ ಜಾರ್ಜಿಯಾದಲ್ಲಿ ಎಂಬಿಬಿಎಸ್ ಓದುತ್ತಿರುವಾಗ ನಟಿಯಾಗಿ ವೃತ್ತಿಜೀವನ ಆರಂಭಿಸಿದ ಬಹುಭಾಷಾ ನಟಿ, ನಾಚ್ಯುರಲ್​ ಬ್ಯೂಟಿ ಸಾಯಿ ಪಲ್ಲವಿ, ಒಂದೆಡೆ ನಟನೆಯನ್ನು ಮುಂದುವರೆಸಿ ಮತ್ತೊಂದೆಡೆ ವೈದ್ಯಕೀಯ ಶಿಕ್ಷಣವನ್ನು ಪೂರ್ಣಗೊಳಿಸಿದರು. ಪ್ರಸ್ತುತ, ಬಿಡುವಿಲ್ಲದ ಶೆಡ್ಯೂಲ್​ನಲ್ಲಿ ಸಖತ್ ಬಿಜಿಯಾಗಿರುವ ನಟಿ, ಭವಿಷ್ಯದಲ್ಲಿ ವೈದ್ಯೆಯಾಗಿ ಬಂದರೆ ಆಶ್ಚರ್ಯವಿಲ್ಲ ಎಂದೇ ಹೇಳಬಹುದು.
ಮತ್ತೊಬ್ಬ ಟಾಲಿವುಡ್ ಬೆಡಗಿ ಕಾಮಾಕ್ಷಿ ಭಾಸ್ಕರ್ಲಾ ಇವರಿಬ್ಬರಿಗಿಂತ ಕೊಂಚ ಡಿಫರೆಂಟ್​ ಎನ್ನಬಹುದು. ನೆಚ್ಚಿನ ನಟನಾ ವೃತ್ತಿಗಾಗಿ ತಮ್ಮ ವೈದ್ಯ ವೃತ್ತಿಯಿಂದ ದೂರವಿದ್ದ ಈಕೆ, ಚೀನಾದಲ್ಲಿ ಎಂಬಿಬಿಎಸ್ ಪೂರ್ಣಗೊಳಿಸಿದ ಬಳಿಕ ಕೆಲವು ವರ್ಷಗಳ ಕಾಲ ವೈದ್ಯೆಯಾಗಿ ಕೆಲಸ ಮಾಡಿದರು. ಆ ನಂತರ ಚಿತ್ರರಂಗಕ್ಕೆ ವಾಪಾಸ್ ಆದರು. ಇನ್ನು 'ಗೋಡ್ಸೆ' ಮೂಲಕ ಟಾಲಿವುಡ್‌ಗೆ ಪಾದಾರ್ಪಣೆ ಮಾಡಿದ ನಟಿ ಐಶ್ವರ್ಯ ಲಕ್ಷ್ಮಿ ಕೂಡ ವೈದ್ಯಕೀಯ ಶಿಕ್ಷಣವನ್ನು ಪೂರ್ಣಗೊಳಿಸಿದ್ದಾರೆ. ಪ್ರಸ್ತುತ, ತೆಲುಗಿನಲ್ಲಿ ಸದ್ದು ಮಾಡುತ್ತಿರುವ ಈ ಸುಂದರಿ, ಕೇರಳದಲ್ಲಿ ತನ್ನ ವೈದ್ಯಕೀಯ ಶಿಕ್ಷಣವನ್ನು ಮುಗಿಸಿದ್ದಾರೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net