ಹಣಕ್ಕಾಗಿ ಈ ರೀತಿ ಮಾಡ್ತಾರಾ? ಈ ವಿಷಯ ಯೋಚಿಸಿ ನನಗೆ ರಾತ್ರಿಯಿಡೀ ನಿದ್ರೆ ಬರಲಿಲ್ಲ ಎಂದ ರಶ್ಮಿ ಗೌತಮ್​! Rashmi Gautam

ಹಣಕ್ಕಾಗಿ ನಡೆಸಿದ ಈ ಭೀಕರ ಕೃತ್ಯದ ವಿರುದ್ಧ ರಶ್ಮಿ ಗೌತಮ್​ ಅವರು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಭಾವನಾತ್ಮಕ ಮಾತುಗಳು ಸದ್ಯ ಎಲ್ಲೆಡೆ ವೈರಲ್ ಆಗಿದ್ದು, ಮಾನವೀಯತೆ ಸತ್ತು ಹೋಗುತ್ತಿದೆ ಎಂದು ನೋವು ತೋಡಿಕೊಂಡಿದ್ದಾರೆ.
Rashmi Gautam
ನಟಿ ರಶ್ಮಿ ಗೌತಮ್​
Published on: 

ಹೈದರಾಬಾದ್‌: ಮುತ್ತಿನ ನಗರಿ ಹೈದರಾಬಾದ್​ನಲ್ಲಿ ಇತ್ತೀಚೆಗೆ ನಡೆದ ಐದು ವರ್ಷದ ಕಂದಮ್ಮನ ಅಪಹರಣ ಮತ್ತು ಭೀಕರ ಹತ್ಯೆಯ ಘಟನೆಯು ಇಡೀ ಸಮಾಜವನ್ನು ಬೆಚ್ಚಿಬೀಳಿಸಿದ್ದು, ಈ ಘಟನೆಗೆ ಖ್ಯಾತ ನಟಿ ಹಾಗೂ ನಿರೂಪಕಿ ರಶ್ಮಿ ಗೌತಮ್ ( Rashmi Gautam ) ಅವರು ತೀವ್ರ ಆಕ್ರೋಶ ಮತ್ತು ಕಣ್ಣೀರು ಹಾಕಿದ್ದಾರೆ.

ಹಣಕ್ಕಾಗಿ ನಡೆಸಿದ ಈ ಭೀಕರ ಕೃತ್ಯದ ವಿರುದ್ಧ ರಶ್ಮಿ ಗೌತಮ್​ ಅವರು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಭಾವನಾತ್ಮಕ ಮಾತುಗಳು ಸದ್ಯ ಎಲ್ಲೆಡೆ ವೈರಲ್ ಆಗಿದ್ದು, ಮಾನವೀಯತೆ ಸತ್ತು ಹೋಗುತ್ತಿದೆ ಎಂದು ನೋವು ತೋಡಿಕೊಂಡಿದ್ದಾರೆ.

Also Read
ಶಾರ್ಟ್ ಗೌನ್ ಧರಿಸಿ ಮಾದಕ ನೋಟ ಬೀರಿದ ನಭಾ: ಪಟಾಕಾ ಪಾರ್ವತಿಯ ಹಾಟ್​ ಲುಕ್​ಗೆ ಫ್ಯಾನ್ಸ್​ ಫಿದಾ..! Nabha Natesh
Rashmi Gautam

ಹೈದರಾಬಾದ್‌ನ ಬೊಲ್ಲಾರಂ ಪೊಲೀಸ್ ಠಾಣೆ ವ್ಯಾಪ್ತಿಯ ಕೌಕುರ್ ವಿಲ್ಲಾದ ಆರ್ಕಿಡ್ಸ್ ಅಪಾರ್ಟ್‌ಮೆಂಟ್‌ನಲ್ಲಿ ಕಾವಲುಗಾರನಾಗಿ ಕೆಲಸ ಮಾಡುತ್ತಿದ್ದ ಬಿಹಾರ ಮೂಲದ ವಿಕ್ರಮ್ ಎಂಬಾತನೇ ಈ ಪೈಶಾಚಿಕ ಕೃತ್ಯದ ಆರೋಪಿ. ಕೆಲಸದಿಂದ ತೆಗೆದುಹಾಕಿದ್ದಕ್ಕೆ ದ್ವೇಷ ಸಾಧಿಸಿದ್ದ ಈ ಕ್ರೂರಿ, ಅದೇ ಅಪಾರ್ಟ್‌ಮೆಂಟ್‌ನಲ್ಲಿ ವಾಸವಿದ್ದ ದಂಪತಿಯ 5 ವರ್ಷದ ಮುಗ್ಧ ಮಗಳನ್ನು ಚಾಕೊಲೇಟ್‌ ಆಮಿಷವೊಡ್ಡಿ ಅಪಹರಿಸಿದ್ದನು. ಬಳಿಕ ಹೆಣ್ಣುಮಗುವಿನ ಪೋಷಕರಿಂದ 20 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದ ಆ ವಿಕೃತಿ, ಕೊನೆಗೆ ಸಿಕ್ಕಿಬೀಳುವ ಭಯದಿಂದ ಮಗುವಿನ ಕೈಕಾಲುಗಳನ್ನು ಕಟ್ಟಿ ಅಪಾರ್ಟ್‌ಮೆಂಟ್‌ನ ನೀರಿನ ಟ್ಯಾಂಕ್‌ಗೆ ಎಸೆದು ಬರ್ಬರವಾಗಿ ಹತ್ಯೆ ಮಾಡಿದ್ದಾನೆ.

ಈ ಘಟನೆಯಿಂದ ತೀವ್ರವಾಗಿ ನೊಂದಿರುವ ನಟಿ ರಶ್ಮಿ ಗೌತಮ್, ತಮ್ಮ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಆಕ್ರೋಶ ಹೊರಹಾಕಿದ್ದಾರೆ. "ಗೇಟೆಡ್ ಕಮ್ಯೂನಿಟಿಯಿಂದ 5 ವರ್ಷದ ಕಂದಮ್ಮನನ್ನು ಅಪಹರಿಸಿ, ಹಣಕ್ಕಾಗಿ ಕೊಲೆ ಮಾಡಲಾಗಿದೆ. ಈ ವಿಷಯ ಯೋಚಿಸಿ ನನಗೆ ರಾತ್ರಿಯಿಡೀ ನಿದ್ರೆಯೇ ಬಂದಿಲ್ಲ. ನಾವು ಯಾವ ದಿಕ್ಕಿನತ್ತ ಸಾಗುತ್ತಿದ್ದೇವೆ? ನಮಗೆ ನಿಜಕ್ಕೂ ಏನಾಗಿದೆ? ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಮಕ್ಕಳು ಮತ್ತು ಮೂಕಪ್ರಾಣಿಗಳು ಅಸಹಾಯಕರಾಗಿರುವ ಈ ಪ್ರಪಂಚವೇ ಇರಬಾರದು ಎಂದು ಆಕ್ರೋಶ ವ್ಯಕ್ತಪಡಿಸಿದ ರಶ್ಮಿ ಅವರು, "ಅಸಹಾಯಕರನ್ನು ರಕ್ಷಿಸಲು ನಮ್ಮಿಂದ ಸಾಧ್ಯವಿಲ್ವಾ? ದಿನದಿಂದ ದಿನಕ್ಕೆ ಮಾನವೀಯತೆ ಸಂಪೂರ್ಣವಾಗಿ ಹದಗೆಡುತ್ತಿದೆ ಅನಿಸುತ್ತಿದೆ. ಇದನ್ನು ನೋಡಿದ ಬಳಿಕ ನನ್ನ ಸೋಶಿಯಲ್ ಮೀಡಿಯಾ ಫೀಡ್ ಅನ್ನು ತೆರೆಯಲೂ ಮನಸ್ಸಾಗುತ್ತಿಲ್ಲ ಎಂದು ತಮ್ಮ ತೀವ್ರ ನೋವು ಹಾಗೂ ಅಸಹಾಯಕತೆಯನ್ನು ತೋಡಿಕೊಂಡಿದ್ದಾರೆ, (ಏಜೆನ್ಸೀಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net