ರಾಜಕೀಯದ ಬಗ್ಗೆ ಮಾತನಾಡಲು ಅಭ್ಯಂತರವಿಲ್ಲ, ಆದರೆ ಅದನ್ನು ಸ್ವೀಕರಿಸುವ ಗುಣ ಅಧಿಕಾರದಲ್ಲಿದ್ದವರಿಗಿಲ್ಲ: ವಿಜಯ್​ ಸೇತುಪತಿ..Vijay Sethupathi

Vijay Sethupathi
Vijay Sethupathi
Published on: 
  • ರಾಜಕೀಯಕ್ಕೆ ಬರದೇ ಸಮಾಜ ಸೇವೆ ಮಾಡಬಹುದು ಎಂದ ನಟ ವಿಜಯ್ ಸೇತುಪತಿ.

  • ತಮ್ಮ ಸಂಸ್ಥೆಯ ಮೂಲಕ 2 ಲಕ್ಷ ಜನರಿಗೆ ಉದ್ಯೋಗ ನೀಡಿರುವುದಾಗಿ ಮಾಹಿತಿ.

  • ವಿಜಯ್​​ ಅವರು ನಟನಾಗಿ ಗೊತ್ತು..ರಾಜಕಾರಿಣಿಯಾಗಿ ನನಗೆ ಗೊತ್ತಿಲ್ಲ ಎಂದ ವಿಜಯ್ ಸೇತುಪತಿ.

Vijay Setupati on CM Vijay: ರಾಜಕೀಯದ ಬಗ್ಗೆ ಮಾತನಾಡಲು ಯಾವುದೇ ಸಮಸ್ಯೆ ಇಲ್ಲ. ಅಧಿಕಾರದಲ್ಲಿದ್ದವರಿಗೆ ಅದನ್ನು ಸ್ವೀಕರಿಸುವ ಸೌಜನ್ಯವಿರೋದಿಲ್ಲ. ನಾವು ಪ್ರತಿ ವಿಚಾರವನ್ನು ಸೂಕ್ಷ್ಮವಾಗಿ ಗಮನಿಸಬೇಕು. ರೀಲ್ಸ್​​ಗಾಗಿ ಪ್ರಶ್ನೆ ಕೇಳುತ್ತೀರಿ ಅದು ಬೇರೆಯದ್ದೇ ತಿರುವು ಪಡೆದುಕೊಳ್ಳುತ್ತದೆ. ನನ್ನ ಉತ್ತರಗಳಿಂದ ಯಾವುದೇ ಪ್ರಯೋಜನವಾಗುವುದಿಲ್ಲ ಎಂದ ಮೇಲೆ, ನೀವು ಏಕೆ ಇಂತಹ ರಾಜಕೀಯ ಪ್ರಶ್ನೆಗಳನ್ನು ಕೇಳುತ್ತಿದ್ದೀರಿ ಎಂದು ಹೇಳಿದ್ದು ವಿಜಯ್​ ಸೇತುಪತಿ

ಇತ್ತೀಚೆಗೆ 'ಬಿಗ್‌ಬಾಸ್ ತಮಿಳು ಸೀಸನ್ 10ರ ನಿರೂಪಣೆ ವೇಳೆ ವಿಜಯ್​ ಸೇತುಪತಿ ಅವರು ನಾಯಕತ್ವ ಮತ್ತು ಭರವಸೆ ಈಡೇರಿಸುವ ಬಗ್ಗೆ ಕೊಟ್ಟಿದ್ದ ಹೇಳಿಕೆ ಭಾರಿ ವಿವಾದಕ್ಕೆ ಕಾರಣವಾಗಿತ್ತು. ದಳಪತಿ ವಿಜಯ್ ಅವರಿಗೆ ಪರೋಕ್ಷವಾಗಿ ನೀಡಿದ ಟಾಂಗ್ ಬಿಂಬಿಸಿ ಅವರ ವಿರುದ್ಧ ಫ್ಯಾನ್ಸ್ ಕಿಡಿಕಾರುವಂತೆ ಮಾಡಲಾಗಿತ್ತು.

ಈ ಎಲ್ಲ ವಿವಾದಗಳ ನಂತರ ಎಚ್ಚೆತ್ತ ವಿಜಯ್​ ಸೇತುಪತಿ ಅವರು ತಮ್ಮ 'ಟ್ರೈನ್' ಸಿನಿಮಾ ಪ್ರಚಾರದ ಭಾಗವಾಗಿ, ಸಂದರ್ಶನವೊಂದರಲ್ಲಿ ಭಾಗಿಯಾಗಿದ್ದ ವೇಳೆ, ರಾಜಕೀಯ ಬದಲಾವಣೆಯನ್ನು ಹೇಗೆ ನೋಡುತ್ತೀರಿ ಎಂದು ನಿರೂಪಕಿ ಕೇಳಿದ್ದ ಪ್ರಶ್ನೆಗೆ ಭಾರಿ ಸೂಕ್ಷ್ಮವಾಗಿ ಉತ್ತರಿಸಿದ್ದಾರೆ. ಅಧಿಕಾರದಲ್ಲಿದ್ದವರು ಬೇರೆಯವರ ರಾಜಕೀಯ ನಿಲುವುಗಳನ್ನು ಹೇಗೆ ಸ್ವೀಕರಿಸುತ್ತಾರೆ. ಜೊತೆಗೆ ಹೇಳಿಕೆ ಕೊಟ್ಟವರ ಮೇಲಾಗುವ ಪರಿಣಾಮದ ಬಗ್ಗೆ ಉಲ್ಲೇಖಿಸಿದರು.

ಸ್ವೀಕರಿಸುವ ಗುಣವಿಲ್ಲ

'ರಾಜಕೀಯ ನಿಲುವುಗಳ ಬಗ್ಗೆ ಮಾತನಾಡಲು ನಮಗೆ ಯಾವುದೇ ಸಮಸ್ಯೆಯಿಲ್ಲ. ಆದರೆ, ಅಧಿಕಾರದಲ್ಲಿದ್ದವರು ಇದನ್ನು ಸ್ಪೂರ್ತಿಯಾಗಿ ತೆಗೆದುಕೊಳ್ಳೋದಿಲ್ಲ. ಸರಿಯಾಗಿ ಅರ್ಥಮಾಡಿಕೊಳ್ಳದೆ ಯಾವುದೋ ಒಂದು ವಿಷಯದ ಬಗ್ಗೆ ಮಾತನಾಡುವುದು ಮೂರ್ಖತನ. ನಮ್ಮ ಹೇಳಿಕೆಗಳಿಗೆ ಸಾಮಾಜಿಕ ಜಾಲತಾಣಗಳಲ್ಲಿ ಬರುವ ಟೀಕೆಗಳು ನಮ್ಮ ಸಿನಿಮಾಗಳ ಮೇಲೆ ಪರಿಣಾಮ ಬೀರುವುದು ನಮಗೆ ಇಷ್ಟವಿಲ್ಲ. ನನ್ನ ಟೀಕೆಗಳು ಈ ಚಲನಚಿತ್ರದ ಮೇಲೆ ಪರಿಣಾಮ ಬೀರಬಾರದು. ಇಂದಿನ ಸಾಮಾಜಿಕ ಜಾಲತಾಣಗಳ ಪರಿಸ್ಥಿತಿಯೇ ಬೇರೆ.. ಉತ್ತರಗಳಿಂದ ಯಾವುದೇ ಪ್ರಯೋಜನವಾಗುವುದಿಲ್ಲ ಎಂದ ಮೇಲೆ, ನೀವು ಏಕೆ ಇಂತಹ ರಾಜಕೀಯ ಪ್ರಶ್ನೆಗಳನ್ನು ಕೇಳುತ್ತಿದ್ದೀರಿ' ಎಂದು ವಿಜಯ್​ ಸೇತುಪತಿ ಮಾತನಾಡಿದ್ದರು.

ಸಿಎಂ ಜೊತೆಗಿನ ಸಂಬಂಧದ ಬಗ್ಗೆ ಮಾತು

ನಾನು ವಿಜಯ್​ ಸರ್ ಅವರೊಟ್ಟಿಗೆ ಕೆಲಸ ಮಾಡಿದ್ದೇನೆ. ನನಗೆ ಅವರು ಒಬ್ಬ ಅದ್ಭುತ ನಟನಾಗಿ ಗೊತ್ತು. ರಾಜಕಾರಣಿಯಾಗಿ ಗೊತ್ತಿಲ್ಲ. ರಾಜಕೀಯ ದೃಷ್ಟಿಕೋನ ಭಿನ್ನವಾಗಿರಬಹುದು. ಭವಿಷ್ಯದಲ್ಲಿ ಅವರು ಹೊಂದಿರುವ ದೂರದೃಷ್ಟಿ ಮತ್ತು ಜಾರಿಗೆ ತರುವ ಕಾರ್ಯಕ್ರಮಗಳ ಆಧಾರದ ಮೇಲೆ ಅವರ ಪಯಣವನ್ನು ನಾನು ಮೌಲ್ಯಮಾಪನ ಮಾಡಬಲ್ಲೆ, ವಿಶ್ಲೇಷಿಸ ಬಲ್ಲೆ ಎಂದು ಹೇಳಿದರು.

2 ಲಕ್ಷ ಜನರಿಗೆ ಉದ್ಯೋಗ

ರಾಜಕೀಯಕ್ಕೆ ಬರುತ್ತೀರಾ..ಈ ಪ್ಲ್ಯಾನ್ ಇದೆಯಾ, ಸಾರ್ವಜನಿಕರಿಗೆ ಒಳಿತನ್ನು ಮಾಡಲು ನಿಮಗೆ ರಾಜಕೀಯದಲ್ಲಿ ಆಸಕ್ತಿಯಿದೆಯೇ? ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು, ಸಮಾಜದಲ್ಲಿ ಬದಲಾವಣೆ ತರಲು ರಾಜಕೀಯಕ್ಕೆ ಪ್ರವೇಶಿಸುವುದು ಅನಿವಾರ್ಯವಲ್ಲ. ನನ್ನ ಸಾಮರ್ಥ್ಯಕ್ಕೆ ತಕ್ಕಂತೆ ನಾನು ನನ್ನಿಂದಾದಷ್ಟು ಉತ್ತಮ ಕೆಲಸಗಳನ್ನು ಮಾಡುತ್ತಿದ್ದೇನೆ ನಾವು ನಡೆಸುತ್ತಿರುವ ಸಂಸ್ಥೆ ಮೂಲಕ 2 ಲಕ್ಷ ಜನರಿಗೆ ಉದ್ಯೋಗ ಕಲ್ಪಿಸಿಕೊಟ್ಟಿದ್ದೇವೆ. ಕೆರೆ ಸ್ವಚ್ಛತೆಗೆ ನೆರವಾಗಿದ್ದೇವೆ. ಅನೇಕರ ಶಿಕ್ಷಣಕ್ಕೆ ಬೆಂಬಲ ಕೊಟ್ಟಿದ್ದೇನೆ. ಇನ್ನೂ ಹಲವಾರು ಕೆಲಸಗಳನ್ನು ಮುಂದುವರಿಸಿದ್ದೇವೆ. ನನ್ನ ಪ್ರಕಾರ ಇದೇ ನಿಜವಾದ ರಾಜಕೀಯ.ರಾಜಕೀಯಕ್ಕೆ ಪ್ರವೇಶಿಸದೆಯೇ ಒಳ್ಳೆಯ ಕೆಲಸಗಳನ್ನು ಮಾಡಲು ಸಾಧ್ಯ ಎಂದು ನಾನು ಭಾವಿಸುತ್ತೇನೆ.

ಟ್ರೈನ್' ಬಿಡುಗಡೆ

ವಿಜಯ್​ ಸೇತುಪತಿ ಮತ್ತು ಮಿಸ್ಕಿನ್ ನಿರ್ದೇಶನದ ತಮ್ಮ ಮುಂದಿನ ಆಕ್ಷನ್ ಥ್ರಿಲ್ಲರ್ ಚಿತ್ರ 'ಟ್ರೈನ್' ಬಿಡುಗಡೆಗೆ ಸಜ್ಜಾಗಿದ್ದಾರೆ. ನಾಸರ್, ಶ್ರುತಿ ಹಾಸನ್ ಸೇರಿದಂತೆ ಹಲವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಡಿ.4ರಂದು ಈ ಸಿನಿಮಾ ತೆರೆ ಕಾಣಲಿದೆ, (ಏಜೆನ್ಸೀಸ್).