ಈ ವಾರ OTTಗೆ ಮಂಡಾಡಿ, ಎಪಿಕ್ ಸೇರಿದಂತೆ South India ಸಿನಿಮಾಗಳ ದಂಡು; ಯಾವುದು, ಎಲ್ಲಿ ನೋಡ್ಬೋದು?

ಮಂಡಾಡಿ, ಖಲೀಫಾ, ಎಪಿಕ್​​ ಫಸ್ಟ್​ ಸೆಮಿಸ್ಟರ್ ಸೇರಿದಂತೆ ಹಲವು ಸೌತ್​ ಇಂಡಿಯಾ ಸಿನಿಮಾಗಳು ಒಟಿಟಿಯಲ್ಲಿ ರಿಲೀಸ್ ಆಗಲು ಸಜ್ಜಾಗಿದೆ. ಕನ್ನಡ, ಹಿಂದಿ, ತಮಿಳು ಹಾಗೂ ಪ್ಯಾನ್​ ಇಂಡಿಯಾ ಭಾಷೆಯಲ್ಲಿ ರೊಮ್ಯಾಂಟಿಕ್, ಆಕ್ಷನ್​ ಥ್ರಿಲ್ಲರ್ ಸೇರಿದಂತೆ ನಿಮ್ಮ ನೆಚ್ಚಿನ ಸಿನಿಮಾ ನೋಡಬಹುದಾಗಿದೆ.
 ಈ ವಾರ OTTಗೆ ಮಂಡಾಡಿ, ಎಪಿಕ್ ಸೇರಿದಂತೆ South India ಸಿನಿಮಾಗಳ ದಂಡು; ಯಾವುದು, ಎಲ್ಲಿ ನೋಡ್ಬೋದು?
Published on: 
  • ಈ ವಾರ ಒಟಿಟಿಯಲ್ಲಿ ರಿಲೀಸ್​ ಆಗುತ್ತಿವೆ ಸಾಲು ಸಾಲು ಸೌತ್​ ಇಂಡಿಯಾ ಸಿನಿಮಾಗಳು

  • ಖಲೀಫಾ, ಎಪಿಕ್​, ಮಂಡಾಡಿ ಸೇರಿದಂತೆ ಹಲವು ಸಿನಿಮಾ ರಿಲೀಸ್

  • ನೆಟ್​ಫ್ಲಿಕ್ಸ್​​, ಅಮೆಜಾನ್​​ನಲ್ಲಿ ಸ್ಟಾರ್​​ ನಟರ ಸಿನಿಮಾಗಳು ನೋಡಲು ಲಭ್ಯ

ಈ ವಾರ ದಕ್ಷಿಣ ಭಾರತದ ಹಲವು ಸಿನಿಮಾಗಳು ಒಟಿಟಿಗೆ ಲಗ್ಗೆ ಇಡಲಿದ್ದು, ಲವ್, ರೊಮ್ಯಾಂಟಿಕ್​​​​​​, ಕ್ರೈಂನಿಂದ ಹಿಡಿದು ಥ್ರಿಲ್ಲರ್​​​​​, ಧಾರ್ಮಿಕ, ಆಕ್ಷನ್​ ಕತೆ ಹೇಳುವ ಆಸಕ್ತಿದಾಯಕ ಸಿನಿಮಾಗಳು ಆನ್​ಲೈನ್​ನಲ್ಲಿ ಸ್ಟ್ರೀಮ್​ ಆಗಲಿದೆ. ಬೆಳ್ಳಿತೆರೆ ಮೇಲೆ ಅಭ್ಬರಿಸಿದ ಪ್ರಧಮ ದೃಷ್ಟಿಯ ಕುಟ್ಟಕ್ಕರ್, ಮಂಡಾಡಿ, ಎಪಿಕ್​​ ಸಿನಿಮಾವನ್ನು ಫ್ಯಾಮಿಲಿ ಜೊತೆಗೆ ಈ ವೀಕೆಂಡ್​ನಲ್ಲಿ ನೋಡಬಹುದಾಗಿದೆ.

  • ಮಂಡಾಡಿ

  • OTT ಬಿಡುಗಡೆ: ನೆಟ್‌ಫ್ಲಿಕ್ಸ್ -ಅ.8

ಯುವ ನಿರ್ದೇಶಕ ಮಥಿಮಾರನ್​​​​​​ ಬರೆದು, ಆಕ್ಷನ್​ ಕಟ್ ಹೇಳಿರುವ ಮಂಡಾಡಿ ಸಿನಿಮಾವು ನೆಟ್​ಫ್ಲಿಕ್ಸ್​ನಲ್ಲಿ ಅಕ್ಟೋಬರ್​ 8ರಂದು ರಿಲೀಸ್​ ಆಗಲಿದೆ. ಇದು ತಮಿಳು, ತೆಲುಗು, ಕನ್ನಡ ಸೇರಿದಂತೆ ಪ್ಯಾನ್​ ಇಂಡಿಯಾ ಭಾಷೆಯಲ್ಲಿ ಸ್ಟ್ರೀಮ್​ ಆಗಲಿದೆ. ಇದೊಂದು ತಮಿಳುನಾಡಿನ ಐತಿಹಾಸಿಕ ಕ್ರೀಡೆ ಸುತ್ತ ಸುತ್ತುವ ಕತೆಯಾಗಿದೆ.

  • ಎಪಿಕ್​​ ಫಸ್ಟ್​ ಸೆಮಿಸ್ಟರ್​

  • OTT ಬಿಡುಗಡೆ: ನೆಟ್‌ಫ್ಲಿಕ್ಸ್ - ಅಕ್ಟೋಬರ್ 9

ವಿಜಯ್​ ದೇವರಕೊಂಡ ಅವರ ಸಹೋದರ ಆನಂದ್​ ದೇವರಕೊಂಡ ಹಾಗೂ ವೈಷ್ಣವಿ ಚೈತನ್ಯ ನಟನೆಯ ಎಪಿಕ್​ ಫಸ್ಟ್​ ಸೆಮಿಸ್ಟರ್​ ಸಿನಿಮಾವು ಅಕ್ಟೋಬರ್​ 9ರಂದು ನೆಟ್​ಫ್ಲಿಕ್ಸ್​​ನಲ್ಲಿ ರಿಲೀಸ್ ಆಗಲಿದೆ. ಆದಿತ್ಯ ಹಾಸನ್ ಸಿನಿಮಾ ನಿರ್ದೇಶಿಸಿದ್ದು, ಸೂರ್ಯದೇವರ ನಾಗ ವಂಶಿ ಮತ್ತು ಸಾಯಿ ಸೌಜನ್ಯ ಚಿತ್ರ ನಿರ್ಮಿಸಿದ್ದಾರೆ. ಲಂಡನ್​ಗೆ ತೆರಳುವ ಮಧ್ಯಮ ವರ್ಗದ ವಿದ್ಯಾರ್ಥಿಯೊಬ್ಬನ ಶಿಕ್ಷಣ ಹಾಗೂ ಸವಾಲುಗಳ ಸುತ್ತ ರೊಮ್ಯಾಂಟಿಕ್​​​​ ಸಿನಿಮಾ ಕತೆ ಸಾಗುತ್ತದೆ.

  • ಪ್ರಧಮ ದೃಷ್ಟಿಯ ಕುಟ್ಟಕ್ಕರ್

  • OTT ಬಿಡುಗಡೆ: ನೆಟ್‌ಫ್ಲಿಕ್ಸ್ - ಅಕ್ಟೋಬರ್ 9

ತೆಲುಗು, ತಮಿಳು, ಕನ್ನಡ ಮತ್ತು ಹಿಂದಿ ಭಾಷೆಯಲ್ಲಿ ಪಾರ್ವತಿ ತಿರವತ್ತೂರು ನಟನೆಯ ಪ್ರಧಮ ದೃಷ್ಟಿಯ ಕುಟ್ಟಕ್ಕರ್ ಸಿನಿಮಾ ಅಕ್ಟೋಬರ್ 9ರಂದು ಸ್ಟ್ರೀಮ್​ ಆಗುತ್ತಿದೆ. ಇನ್ವೆಸ್ಟಿಗೇಟಿವ್​ ಕ್ರೈಂ ಥ್ರಿಲ್ಲರ್​ ಸಿನಿಮಾ ಇದಾಗಿದೆ. ಶಾಹದ್​ ನೀಲಾಂಬುರ್​ ಸಿನಿಮಾಗೆ ಆಕ್ಷನ್​ ಕಟ್ ಹೇಳಿದ್ದಾರೆ. ಆಕಸ್ಮಿಕವಾಗಿ ಸಂಭವಿಸುವ ಸಾವು, ಅದನ್ನು ಮುಚ್ಚಿಹಾಕಲು ನಟಯುವ ಪ್ರಯತ್ನ ಹಾಗೂ ಪೊಲೀಸರ ಇನ್ವೆಸ್ಟಿಗೇಷನ್​ ಸುತ್ತ ಕತೆಯನ್ನು ಹೆಣೆಯಲಾಗಿದೆ. ಮ್ಯಾಥ್ಯೂ ಥಾಮಸ್, ಉನ್ನಿಮಯ ಪ್ರಸಾದ್ ಮತ್ತು ಸಿದ್ಧಾರ್ಥ್ ಭರತನ್ ನಟಿಸಿದ್ದಾರೆ.

  • ಖಲೀಫಾ

  • OTT ಬಿಡುಗಡೆ: ಅಮೆಜಾನ್ ಪ್ರೈಮ್ ವಿಡಿಯೋ, ಆಹಾ, ಮನೋರಮಾಮ್ಯಾಕ್ಸ್ ಮತ್ತು ಲಯನ್ಸ್‌ಗೇಟ್ ಪ್ಲೇ ಅಕ್ಟೋಬರ್ 9

ವೈಶಾಖ್ ಆಕ್ಷನ್​ ಕಟ್​ ಹೇಳಿರುವ ಖಲೀಫಾ ಸಿನಿಮಾವು ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಸೇರಿದಂತೆ 6 ಒಟಿಟಿ ಪ್ಲಾಟ್​ಫಾರ್ಮ್​ನಲ್ಲಿ ಸ್ಟ್ರೀಮ್​ ಆಗಲು ಸಜ್ಜಾಗಿದೆ. ಥಿಯೇಟ್ರಿಕಲ್ ಪ್ರದರ್ಶನದ ಸಮಯದಲ್ಲಿ ನೀರಸ ಪ್ರತಿಕ್ರಿಯೆಯನ್ನು ಪಡೆಯಿತು. ಈಗ ಡಿಜಿಟಲ್‌ನಲ್ಲಿ ಹೆಚ್ಚಿನ ಪ್ರೇಕ್ಷಕರನ್ನು ತಲುಪಲು ಸಿದ್ಧವಾಗಿದೆ. ಅಮೆಜಾನ್ ಪ್ರೈಮ್ ವಿಡಿಯೋ, ಆಹಾ, ಮನೋರಮಾಮ್ಯಾಕ್ಸ್ ಮತ್ತು ಲಯನ್ಸ್‌ಗೇಟ್ ಪ್ಲೇ ನಲ್ಲಿ ಭಾರತದಲ್ಲಿ ಸ್ಟ್ರೀಮ್ ಆಗಲಿದೆ, ಆದರೆ ವಿದೇಶಿ ವೀಕ್ಷಕರು ಇದನ್ನು STARZPLAY ಮತ್ತು ಸಿಂಪ್ಲಿ ಸೌತ್‌ನಲ್ಲಿ ವೀಕ್ಷಿಸಬಹುದು. ತಂದೆ ಸಾವಿಗೆ ಪ್ರತೀಕಾರ ತೀರಿಸಿಕೊಳ್ಳಲು ಹೊರಡುವ ಜವಳಿ ಅಂಗಡಿ ವ್ಯಾಪಾರಿ ಚಿನ್ನ ಕಳ್ಳಸಾಗಣೆ ಸಿಂಡಿಕೇಟ್ ವಲಯದಲ್ಲಿ ಸಿಕ್ಕಿಹಾಕಿಕೊಂಡು ಎದುರಿಸುವ ಸವಾಲಿನ ಸುತ್ತ ಕತೆಯನ್ನು ಕಟ್ಟಲಾಗಿದೆ. ಹಿಂದಿ, ತೆಲುಗು, ತಮಿಖು ಹಾಗೂ ಮಲಯಾಳಂ ಸೇರಿದಂತೆ ಕನ್ನಡದಲ್ಲಿ ನೋಡಬಹುದಾಗಿದೆ, (ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net